ತ್ರಿವಿಧ ದಾಸೋಹ ವ್ಯವಸ್ಥೆಗ ಪ್ರೇರಕ್ಷ ಶಕ್ತಿ ಶ್ರೀಶಿವರಾತ್ರಿ ರಾಜೇಂದ್ರಸ್ವಾಮಿಗಳು
ಮೈಸೂರು

ತ್ರಿವಿಧ ದಾಸೋಹ ವ್ಯವಸ್ಥೆಗ ಪ್ರೇರಕ್ಷ ಶಕ್ತಿ ಶ್ರೀಶಿವರಾತ್ರಿ ರಾಜೇಂದ್ರಸ್ವಾಮಿಗಳು

September 26, 2018

ವಿರಾಜಪೇಟೆ ಕಳಂಚೇರಿಯ ಅರಮೇರಿ ಶಾಂತಮಲ್ಲಿಕಾರ್ಜುನಸ್ವಾಮಿಗಳ ಸ್ಮರಣೆ
ತಿ.ನರಸೀಪುರ:  ಶಿಕ್ಷಣ, ಆರೋಗ್ಯ ಹಾಗೂ ದಾಸೋಹದ ಮೂಲಕ ತ್ರಿವಿಧ ದಾಸೋಹ ವ್ಯವಸ್ಥೆಗೆ ಪ್ರೇರಕ ಶಕ್ತಿಯಾದವರು ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳು ಎಂದು ವಿರಾಜಪೇಟೆ ಕಳಂಚೇರಿಯ ಅರಮೇರಿ ಶಾಂತಮಲ್ಲಿಕಾರ್ಜುನಸ್ವಾಮಿ ಹೇಳಿದರು.
ಪಟ್ಟಣದ ಜೆಎಸ್‍ಎಸ್ ಸಭಾಭವನದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವೀರಶೈವ ಮಠಾಧಿಪತಿಗಳ ಗೋಷ್ಠಿ, ಜಗದ್ಗುರು ಡಾ.ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳ 103ನೇ ಜಯಂತಿ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣದ ಜೊತೆಗೆ ದಾಸೋಹವನ್ನು ನೀಡಿ ಗ್ರಾಮಾಂತರ ಪ್ರದೇಶದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅಂದಿನ ಕಾಲದಲ್ಲೇ ಹೆಚ್ಚಿನ ಮಹತ್ವ ನೀಡಿದ್ದರೆಂದು ಸ್ಮರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಸುತ್ತೂರು ಶ್ರೀ ಶಿವರಾತ್ರಿದೇಶಿ ಕೇಂದ್ರ ಸ್ವಾಮಿಜೀ ಶಿವರಾತ್ರಿ ರಾಜೇಂದ್ರಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ವಾಟಾಳು ಮಠದ ಶ್ರೀ ಡಾ.ಸಿದ್ದಲಿಂಗಶಿವಚಾರ್ಯಸ್ವಾಮಿಜೀ ಅವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರುವ ಮೂಲಕ ತಂದೆತಾಯಿಗಳಿಗೆ ಉತ್ತಮ ಹೆಸರು ತರಬೇಕು. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಷ್ಯಂಸ್ವಾಮಿಜೀ, ಪ್ರಾಧ್ಯಾಪ್ಯಕ ಡಾ.ಎಂ.ಚಂದ್ರಶೇಖರಯ್ಯ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತ ಹೆಳವರಹುಂಡಿ ಸಿದ್ದಪ್ಪ, ಪುರಸಭೆ ಸದಸ್ಯೆ ರೂಪಾಶ್ರೀ ಪರಮೇಶ್, ವೀರಶೈವ ನೌಕರರ ಸಂಘದ ಅಧ್ಯಕ್ಷ ಪುಟ್ಟಬುದ್ದಿ, ಪ್ರಧಾನ ಕಾರ್ಯದರ್ಶಿ ಮಹಾಂತಪ್ಪ ನಾಗೂರ್, ಮೂಗೂರು ಕುಮಾರಸ್ವಾಮಿ, ಜಿ.ಎಲ್.ಯೋಗೇಶ್, ವಕೀಲ ಜ್ಞಾನೇಂದ್ರಮೂರ್ತಿ, ಕಟ್ಟೆಪುರ ಸಿದ್ದಪ್ಪ, ಕುರುಬೂರು ಶಿವು, ಇತರರು ಇದ್ದರು.

Translate »