ಡಾ.ವಿಷ್ಣುವರ್ಧನ್ 69ನೇ ಹುಟ್ಟುಹಬ್ಬ: ಇಂದು ರಕ್ತದಾನ ಶಿಬಿರ
ಮೈಸೂರು

ಡಾ.ವಿಷ್ಣುವರ್ಧನ್ 69ನೇ ಹುಟ್ಟುಹಬ್ಬ: ಇಂದು ರಕ್ತದಾನ ಶಿಬಿರ

September 18, 2018

ಮೈಸೂರು:  ಡಾ.ವಿಷ್ಣು ಸೇನಾ ಸಮಿ ತಿಯ ಮೈಸೂರು ನಗರ ಮತ್ತು ಜಿಲ್ಲಾ ಘಟಕದ ವತಿ ಯಿಂದ ನಾಳೆ(ಮಂಗಳವಾರ) ಡಾ.ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಸೇನಾ ಸಮಿತಿಯ ನಗರ ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಂಬೂಬಜಾರ್‍ನಲ್ಲಿ ರುವ ಅಂಧರ ಸರ್ಕಾರಿ ಶಾಲೆಯಲ್ಲಿ ರಕ್ತದಾನ ಶಿಬಿರಕ್ಕೆ ಬೆಳಿಗ್ಗೆ 10ಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾ ಯಕ ನಿರ್ದೇಶಕ ಹೆಚ್.ಚನ್ನಪ್ಪ ಚಾಲನೆ ನೀಡಲಿದ್ದಾರೆ. ಅಂಧ ಮಕ್ಕಳ ಪಾಠಶಾಲೆಯ ಅಧೀಕ್ಷಕ ಅಭಿಕುಮಾರ್ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ರಕ್ತದಾನಕ್ಕೆ ಸಂಬಂಧಿಸಿದಂತೆ ಈಗಾಗಲೇ 30 ಮಂದಿ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.

ಮೈಸೂರು ನಗರದಲ್ಲಿ ಡಾ.ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಮ್ಮ ಸಂಘಟನೆ ಪತ್ರ ಚಳವಳಿ ಕೈಗೆತ್ತಿಕೊಳ್ಳಲಿದೆ. ಸ್ಮಾರಕ ಮೈಸೂರು ಅಥವಾ ಬೆಂಗಳೂರು ಎಲ್ಲಿ ಬೇಕಾದರೂ ಆಗಲಿ. ಆದರೆ ವಿಷ್ಣು ಅವರ ಅಂತ್ಯ ಸಂಸ್ಕಾರ ನಡೆದ ಜಾಗದಲ್ಲಿ ಪುಣ್ಯಭೂಮಿ ಸ್ಮಾರಕ ನಿರ್ಮಿಸಬೇಕು. ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ಅವರ ಅಂತ್ಯ ಸಂಸ್ಕಾರ ನಡೆದಿದ್ದು, ಅಲ್ಲೇ ಪುಣ್ಯಭೂಮಿ ನಿರ್ಮಾಣ ಮಾಡಬೇಕು. ವಿಷ್ಣು ವರ್ಧನ್ ಅವರ ಪತ್ನಿ ಭಾರತೀ ವಿಷ್ಣುವರ್ಧನ್ ಹಾಗೂ ವಿಷ್ಣು ಅಭಿಮಾನಿಗಳು ಒಟ್ಟಾಗಿ ಹೋರಾಟ ನಡೆಸಿದರೆ ಸ್ಮಾರಕ ನಿರ್ಮಾಣಕ್ಕೆ ಕಾಲಕೂಡಿ ಬರಲಿದೆ. ಆದರೆ ಭಾರತೀ ವಿಷ್ಣುವರ್ಧನ್ ಅವರು ನಮ್ಮೊಂದಿಗೆ ಕೈಜೋಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Translate »