ಕುಡಿದ ಅಮಲಿನಲ್ಲಿ ವಾಹನ ಚಾಲನೆ: 5 ಕಾರು, 27 ಬೈಕು ವಶ
ಹಾಸನ

ಕುಡಿದ ಅಮಲಿನಲ್ಲಿ ವಾಹನ ಚಾಲನೆ: 5 ಕಾರು, 27 ಬೈಕು ವಶ

November 15, 2018

ಹಾಸನ:ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಸವಾರರಿಗೆ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ರಾತ್ರೋರಾತ್ರಿ ಒಂದೆ ದಿನದಲ್ಲಿ 27 ಬೈಕ್ ಹಾಗೂ 5 ಕಾರುಗಳನ್ನು ವಶ ಪಡಿಸಿ ಕೊಳ್ಳುವುದರ ಮೂಲಕ ಬಿಸಿಮುಟ್ಟಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್. ಪ್ರಕಾಶ್ ಗೌಡ ಅವರ ಆದೇಶದ ಮೇರೆಗೆ ಸಂಚಾರ ಠಾಣೆಯ ಸಿಬ್ಬಂದಿ ಎನ್.ವಿಜಯ ಕೃಷ್ಣ ನೇತೃತ್ವದ ತಂಡ ನಗರದಾ ದ್ಯಂತ ಸೋಮವಾರ ರಾತ್ರಿ ಗಸ್ತು ನಡೆಸಿ ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುತ್ತಿದ್ದ ವಾಹನ ಸವಾರರನ್ನು ಹಿಡಿದು 27 ದ್ವಿಚಕ್ರ ವಾಹನ, 5 ಕಾರು ಗಳನ್ನು ವಶಪಡಿಸಿಕೊಂಡಿದ್ದಾರೆ.

ಟ್ರಾಫಿಕ್ ಠಾಣೆ ಪೆÇಲೀಸರಾದ ವಿಜಯಕೃಷ್ಣ, ರೇಣುಕಾ ಪ್ರಸಾದ್ ಹಾಗೂ ಬಡಾವಣೆ ಠಾಣೆಯ ಸುರೇಶ್, ಪೆನ್ ಷನ್ ಮೊಹಲ್ಲಾ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಆರೋಕಿ ಯಪ್ಪ ನೇತೃತ್ವದಲ್ಲಿ ದಾಳಿ ನಡೆಸಿ ಮದ್ಯಪಾನ ಸೇವಿಸಿ ವಾಹನ ಚಲಾವಣೆ ಮಾಡುತ್ತಿದ್ದವರಿಗೆ ದಂಡ ವಿಧಿಸ ಲಾಗಿದೆ. ಇದರಲ್ಲಿ ಕೆಲವರು ದಂಡ ಕಟ್ಟಲಾಗದೆ ವಾಹನ ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ನಗರದಾದ್ಯಂತ ಪಾನ ಮತ್ತರಾಗಿ ವಾಹನ ಚಲಾವಣೆ ಮಾಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವ ಜನಿಕರಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿತ್ತು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡರಿಗೆ ಸಾರ್ವ ಜನಿಕರಿಂದ ಸಾಕಷ್ಟು ದೂರು ಬಂದ ಹಿನ್ನೆಲೆ ಯಲ್ಲಿ ತಮ್ಮ ಅಧೀನ ಅಧಿಕಾರಿಗಳಿಗೆ ಈ ಕುರಿತು ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು ಎನ್ನಲಾಗಿದೆ. ಈಗಾಗಲೇ ವಶ ಪಡಿಸಿಕೊಂಡಿರುವ ವಾಹನ ಸವಾರರಿಗೆ ನೋಟಿಸ್ ನೀಡ ಲಾಗಿದ್ದು, ಅವರಿಗೆ ಸುಮಾರು 2000 ರೂ. ನಿಂದ 5 ಸಾವಿರ ರೂ.ವರೆಗೆ ಕೋರ್ಟಿನಲ್ಲಿ ದಂಡ ಕಟ್ಟುವಂತೆ ಸೂಚಿಸಲಾಗಿದೆ. ಈಗ ಅವರು ಕೋರ್ಟಿಗೆ ಹೋಗಿ ವಾಹನಗಳನ್ನು ಬಿಡಿಸಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಯಿಂದ ನಡೆ ದಿರುವ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆಗಳು ಕೇಳಿ ಬರತೊಡಗಿವೆ.

ಈಗಾಗಲೇ ದ್ವಿಚಕ್ರ ವಾಹನಗಳಲ್ಲಿ ಕರ್ಕಶ ಶಬ್ದಗಳನ್ನು ಉಂಟು ಮಾಡುವಂತಹ ಪುಂಡ ಪೆÇೀಕರಿಗಳ ಸುಮಾರು 77 ಬೈಕ್‍ಗಳ ಸೈಲೆನ್ಸರ್‍ಗಳನ್ನು ರೋಡ್ ರೋಲರ್ ಮೂಲಕ ಪೊಲೀಸರು ನಾಶಪಡಿಸಿದ್ದಾರೆ. ಅಲ್ಲದೆ ಅವ ರಿಂದ ತಲಾ 1 ಸಾವಿರ ರೂ.ನಂತೆ 77 ಸಾವಿರ ರೂ. ದಂಡವನ್ನು ಕೂಡ ವಸೂಲಿ ಮಾಡಿದ್ದಾರೆ. ನಗರದಲ್ಲಿ ಹಲವು ಪುಂಡ ಯುವಕರು ಬೈಕ್‍ನಲ್ಲಿ ವ್ಹೀಲಿಂಗ್ ಮಾಡು ವುದು, ಕರ್ಕಶ ಶಬ್ದಗಳನ್ನು ಹಾಕಿಕೊಂಡು ಯುವತಿ ಯರನ್ನು ಚುಡಾಯಿಸುವುದು ಮತ್ತು ಸಾರ್ವಜನಿಕ ರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅಂಥವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯ ಬೇಕು ಎಂದು ಪೆÇಲೀಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಿದ್ದು, ಈಗಾಗಲೇ ನಗರದಾದ್ಯಂತ ಇಂತಹ ಪುಂಡ ಪೆÇೀಷಕರಿಗಳಿಗೆ ಕಡಿವಾಣ ಹಾಕಲು ಟ್ರಾಫಿಕ್ ಪೆÇಲೀ ಸರು ಸನ್ನದ್ಧರಾಗಿದ್ದಾರೆ. ಪುಂಡ ಪೆÇೀಕರಿಗಳಿಗೆ ಬೀಳುತ್ತೆ ಕಡಿವಾಣ ಟ್ರಾಫಿಕ್ ಇನ್ಸ್‍ಪೆಕ್ಟರ್‍ಗಳಾದ ವಿಜಯಕೃಷ್ಣ ಮತ್ತು ರೇಣುಕಾ ಪ್ರಸಾದ್ ಅವರು ಈಗಾಗಲೇ ನಗರ ದಾದ್ಯಂತ ಮಿಂಚಿನ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರತಿ ದಿನ ಗಲ್ಲಿ ಗಲ್ಲಿಯಲ್ಲಿ ತಪಾಸಣೆ ಕಾರ್ಯ ನಡೆಸುತ್ತಿದ್ದು, ಕುಡಿದು ವಾಹನ ಚಲಾವಣೆ ಮಾಡುತ್ತಿದ್ದರೆ ಅಂಥವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಪೊಲೀಸರ ಮಿಂಚಿನ ಕಾರ್ಯಾ ಚರಣೆಯಿಂದ ಪೋಲಿ ಪುಂಡರುಗಳಿಗೆ ಸಲ್ಪವಾದರರು ಕಡಿವಣ ಹಾಕಿದಂತಾಗಿದೆ.

Translate »