ಬ್ರಾಹ್ಮಣ ಸಂಘಟನೆಗಳಿಂದ ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ
ಹಾಸನ

ಬ್ರಾಹ್ಮಣ ಸಂಘಟನೆಗಳಿಂದ ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ

November 15, 2018

ಅರಸೀಕೆರೆ: ಕೇಂದ್ರ ಸಚಿವ ಅನಂತಕುಮಾರ್ ಇವರು ಸರ್ವ ಜನಾಂಗೀಯ ಶಾಂತೀಯ ತೋಟ ಎನ್ನುವಂತೆ ಎಲ್ಲ ರನ್ನೂ ಒಗ್ಗೂಡಿಸಿಕೊಂಡ ವಿಶ್ವಾಸಪೂರ್ಣ ರಾಜಕಾರಣಿ ಎನಿಸಿಕೊಂಡರು. ಇಂತಹ ಮಹಾನ್ ಚೇತನ ನಮ್ಮ ಬ್ರಾಹ್ಮಣ ಸಮುಧಾಯಕ್ಕೆ ಗೌರವ ತಂದು ಕಣ್ಮರೆಯಾಗಿದ್ದು ಬಹು ದೊಡ್ಡ ಆಘಾತ ಎಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ಆರ್.ಎಂ.ರಮೇಶ್ ಹೇಳಿದರು.

ನಗರದ ಸೀತಾರಾಮ ಕಲ್ಯಾಣ ಮಂದಿರದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘ, ಸೀತಾ ಮಹಿಳಾ ಸಂಘ, ಯುವಕ ಸಂಘ ಮತ್ತು ಗಾಯಿತ್ರಿ ಪತ್ತಿನ ಸಹಕಾರ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಶ್ರದ್ಧಾಂ ಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯ ಅನಾಧಿ ಕಾಲದಿಂದಲೂ ಲೋಕ ಕಲ್ಯಾಣಕ್ಕಾಗಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಇಂದಿನ ರಾಜಕಾರಣದಲ್ಲಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಇವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಛಾಪನ್ನು ಮೂಡಿಸಿ ಈಗ ಬರೀ ನೆನಪನ್ನು ಮಾತ್ರ ಬಿಟ್ಟು ಹೋಗಿ ನಮ್ಮ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂತಹ ಮಹಾನ್ ಚೇತನವನ್ನು ಕಳೆದುಕೊಂಡ ನಮ್ಮ ಸಮಾಜ ಮತ್ತು ರಾಜಕೀಯ ಕ್ಷೇತ್ರವು ಅನಾಥ ಪ್ರಜ್ಞೆಯಿಂದ ಬಳಲುವಂತಾಗಿದೆ ಎಂದರು.

ಮುಖಂಡ ಟಿ.ಆರ್.ನಾಗರಾಜ್ ಮಾತನಾಡಿ, ಮೊದಲಿ ನಿಂದಲೂ ರಾಜಕಾರಣದಲ್ಲಿ ಬ್ರಾಹ್ಮಣ ಸಮಾಜವನ್ನು ಕಡೆಗಣಿಸಿ ಕೊಂಡು ಬರಲಾಗುತ್ತಿದೆ.ಆದರೆ ಇದಕ್ಕೆ ಅಪವಾದವೆಂಬಂತೆ ಅನಂತ್ ಕುಮಾರ್ ಅವರು ತಮ್ಮ ಸಣ್ಣ ವಯಸ್ಸಿನಿಂದಲೇ ಸಂಘ ಪರಿವಾರದಲ್ಲಿ ಗುರುತಿಸಿಕೊಂಡು ಬರುವುದರ ಮೂಲಕ ರಾಜಕಾರಣದಲ್ಲಿ ಉತ್ತುಂಗಕ್ಕೆ ಬೆಳೆದರು ಎಂದರು.

ಸೀತಾ ಮಹಿಳಾ ಸಂಘದ ಅಧ್ಯಕ್ಷೆ ಪದ್ಮ ಸೋಮಣ್ಣ ಮಾತ ನಾಡಿ, ದಿವಂಗತ ಅನಂತ್ ಕುಮಾರ್ ಹಾಗೂ ಅವರ ಧರ್ಮ ಪತ್ನಿ ಜೊತೆಯಲ್ಲಿ ಟ್ರಸ್ಟ್ ಸ್ಥಾಪಿಸಿಕೊಳ್ಳುವುದರ ಮೂಲಕ ಲಕ್ಷಾಂ ತರ ಮಕ್ಕಳಿಗೆ ಮದ್ಯಾಹ್ನ ಊಟ ನೀಡುತ್ತಿದ್ದ ಸೇವಾ ಕಾರ್ಯ ಗಳು ಮತ್ತೊಬ್ಬರಿಗೆ ಪ್ರೇರಣೆಯನ್ನು ನೀಡಿದೆ.ಇಂತಹ ಮಹಾನ್ ಕಾರ್ಯಗಳನ್ನು ಮಾಡಲು ಪ್ರೇರಣಾ ಶಕ್ತಿ ಅವರ ಮಾತೃ ಪಿತೃ ಗಳಾಗಿದ್ದರು ಎಂಬುದು ನಾವು ಮರೆಯಬಾರದು. ರಾಜಕಾರಣ ದಲ್ಲಿ ಎಷ್ಟೇ ಒತ್ತಡಗಳು ಇದ್ದರೂ ಎಂದೂ ವಿಮುಖವಾಗಿ ಸಮಾಜಕ್ಕೆ ನಿಂತಿರಲಿಲ. ಇಷ್ಟೆಲ್ಲ ಮಾನಸಿಕ ಶಕ್ತಿ ಬರಬೇಕಾದರೆ ಅವರಲ್ಲಿ ಇದ್ದಂತಹ ಮಾನವೀಯತೆಯ ತುಡಿತ ಮತ್ತು ವಿಧೇಯತೆ. ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ರೂಡಿಸಿಕೊಂಡು ನಮ್ಮ ಸಮಾಜದ ಯುವ ಜನಾಂಗವು ಮನುಕುಲ ಗುರುತಿ ಸುವಂತಹ ಕಾರ್ಯಗಳನ್ನು ಮಾಡಬೇಕು ಎಂದರು.

ಹಿರಿಯ ವಕೀಲ ಎನ್.ಡಿ.ಪ್ರಸಾದ್, ಕಲ್ಗುಂಡಿ ಹಿರಿಯಣ್ಣಯ್ಯ, ಮಾತ ನಾಡಿದರು. ಕಾರ್ಯದರ್ಶಿ ಮಲ್ಲೇಶ್ ಮೂರ್ತಿ,ಯುವಕ ಸಂಘದ ಅಧ್ಯಕ್ಷ ಚಂದ್ರಮೌಳಿ,ಮುಖಂಡರಾದ ಗೋವಿಂದ ರಾಜ್,ವಿಪ್ರ ಮಂಜುನಾಥ್, ಟಿ.ಆರ್.ದಿವಾಕರ್,ಕೇಶವಮೂರ್ತಿ, ರಾಮಚಂದ್ರು, ಕೃಷ್ಣಮೂರ್ತಿ, ವೆಂಕಟೇಶ್, ಸೀತಾ ಮಹಿಳಾ ಸಂಘದ ಕಾರ್ಯದರ್ಶಿ ಗಾಯಿತ್ರಿ ಕೃಷ್ಣಮೂರ್ತಿ, ಪದಾಧಿ ಕಾರಿಗಳಾದ ಛಾಯ, ಪ್ರೇಮಾ ಹಿರಿಯಣ್ಣಯ್ಯ, ವಾಣಿ ದಿವಾಕರ್ ಇನ್ನಿತರರು ಇದ್ದರು.

Translate »