`ಕಾನೂನು ಸಾಕ್ಷರತಾ ರಥ’ಕ್ಕೆ ಜಿಲ್ಲಾ ನ್ಯಾಯಾಧೀಶರಿಂದ ಚಾಲನೆ
ಮೈಸೂರು

`ಕಾನೂನು ಸಾಕ್ಷರತಾ ರಥ’ಕ್ಕೆ ಜಿಲ್ಲಾ ನ್ಯಾಯಾಧೀಶರಿಂದ ಚಾಲನೆ

June 29, 2019

ಮೈಸೂರು, ಜೂ.28 (ಆರ್‍ಕೆಬಿ)- ಕಾನೂನು ಸಾಕ್ಷರಥಾ ಕಾರ್ಯಕ್ರಮ ಗಳಲ್ಲಿ ಜನಸಾಮಾನ್ಯರಿಗೆ ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶ ಗಳು, ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯ ಗಳ ಬಗ್ಗೆ ಹಾಗೂ ಮೋಟಾರು ವಾಹನ ಕಾಯ್ದೆ ಸೇರಿದಂತೆ ಇನ್ನಿತರ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲು ಆಯೋಜಿಸಲಾಗಿರುವ `ಕಾನೂನು ಸಾಕ್ಷರತಾ ರಥ’ಕ್ಕೆ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ.ವಂಟಿಗೋಡಿ ಶುಕ್ರವಾರ ಮೈಸೂರು ನ್ಯಾಯಾಲಯದ ಆವರಣ ದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಕಾನೂನು ಸಾಕ್ಷರತಾ ರಥವು ಜು.3ರವ ರೆಗೆ ಮೈಸೂರು ಜಿಲ್ಲೆ ಮತ್ತು ವ್ಯಾಪ್ತಿಯಲ್ಲಿ ಬರುವ ತಾಲೂಕುಗಳಲ್ಲಿ ಸಂಚರಿಸಿ ಜನ ರಲ್ಲಿ ಕಾನೂನು, ಕಾಯ್ದೆಗಳ ಬಗ್ಗೆ ಜಾಗೃತಿ ಉಂಟು ಮಾಡಲಿದೆ. ಜೂ.28ರಿಂದ ಜು.1 ರವರೆಗೆ ಮೈಸೂರು ನಗರ ಮತ್ತು ತಾಲೂಕು ಗಳಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮ, ಜನತಾ ನ್ಯಾಯಾಲಯ ನಡೆಸಲಿದೆ. ಜೂ.29 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಇಂಜಿನಿಯರುಗಳ ಸಂಸ್ಥೆ, ಮಧ್ಯಾಹ್ನ 12.30ಕ್ಕೆ ಬೋಗಾದಿ ಮರಿನಿಕೇತನ ಪ್ರೌಢಶಾಲೆ, ಸಂಜೆ 5ಕ್ಕೆ ವರುಣಾ ಅಂಬೇಡ್ಕರ್ ಸಮು ದಾಯ ಭವನ, 30ರಂದು ಬೆಳಿಗ್ಗೆ 10.30ಕ್ಕೆ ಮೈಸೂರು ಕುವೆಂಪುನಗರದ ಬಿಸಿಎಂ ಹಾಸ್ಟೆಲ್, ಮಧ್ಯಾಹ್ನ 12.30ಕ್ಕೆ ಬೋಗಾದಿ ಬಾಲಕಿಯರ ವಸತಿ ನಿಲಯ, ಜು.1ರಂದು ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜು, ಮಧ್ಯಾಹ್ನ 12.30ಕ್ಕೆ ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜು, ಸಂಜೆ 5ಕ್ಕೆ ಬೆಳವಾಗಿ ಗ್ರಾಮ ಪಂಚಾಯಿತಿಗಳಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮಗಳು ನಡೆಯಲಿವೆ.

ಈ ಅವಧಿಯಲ್ಲಿ ಹಿಂದೂ ವಾರಸು ದಾರರ ಕಾಯ್ದೆ, ಮಹಿಳಾ ದೌರ್ಜನ್ಯ ತಡೆ ಕಾಯ್ದೆ, ಪೋಕ್ಸೊ ಕಾಯ್ದೆ, ಮಾಹಿತಿ ಹಕ್ಕು ಅಧಿನಿಯಮ ಮತ್ತು ಇತರೆ ದೈನಂದಿನ ಅಗತ್ಯದ ಕಾನೂನುಗಳ ಬಗ್ಗೆ ಹಾಗೂ ಪೊಲೀಸ್ ದೂರು ಪೆಟ್ಟಿಗೆ, ಲೋಕ ಅದಾಲತ್, ಮಧ್ಯಸ್ಥಿಕಾ ಕೇಂದ್ರ, ಖಾಯಂ ಜನತಾ ನ್ಯಾಯಾಲಯ ಬಗ್ಗೆ ಅರಿವು ಮೂಡಿಸಲಿದೆ.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ.ದೇವಮಾನೆ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್. ಆನಂದ ಕುಮಾರ್, ಜಿಪಂ ಮುಖ್ಯ ಯೋಜ ನಾಧಿಕಾರಿ ಪ್ರಭುಸ್ವಾಮಿ ಸೇರಿದಂತೆ ಇನ್ನಿ ತರರು ಭಾಗವಹಿಸಿದ್ದರು.

Translate »