ಇಂದು ಸಾಂಪ್ರದಾಯಿಕ ತಳಿಗಳ ಬೀಜ ಮೇಳಕ್ಕೆ ಚಾಲನೆ
ಮೈಸೂರು

ಇಂದು ಸಾಂಪ್ರದಾಯಿಕ ತಳಿಗಳ ಬೀಜ ಮೇಳಕ್ಕೆ ಚಾಲನೆ

June 28, 2019

ಮೈಸೂರು, ಜೂ.27(ಪಿಎಂ)- ಹೈಬ್ರಿಡ್ ಮತ್ತು ಕುಲಾಂತರಿ ಬೀಜಗಳಿಗೆ ಬದಲಾಗಿ ನಾಡಿನ ಸಾಂಪ್ರದಾಯಿಕ ತಳಿಗಳಿಗೆ ಉತ್ತೇಜನ ನೀಡುವ ನಿಟ್ಟಿ ನಲ್ಲಿ ಸಹಜ ಸಮೃದ್ಧ ಬಳಗ, ನಬಾರ್ಡ್, ಕೃಷಿ ಇಲಾಖೆ ಸಂಯುಕ್ತಾಶ್ರ ಯದಲ್ಲಿ ಜೂ.28 ರಿಂದ 30ರವರೆಗೆ ಮೂರು ದಿನಗಳ `ಮುಂಗಾರು ಬೀಜ ಮೇಳ’ ಆಯೋಜಿಸಲಾಗಿದೆ. ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಈ ಬೀಜ ಮೇಳ ನಡೆಯಲಿದ್ದು, ರಾಜ್ಯದ 30ಕ್ಕೂ ಹೆಚ್ಚು ಬೀಜ ಸಂರಕ್ಷಕರ ಗುಂಪುಗಳು ಇದರಲ್ಲಿ ಪಾಲ್ಗೊ ಳ್ಳಲಿವೆ. ದೇಸಿ ಭತ್ತದ 600ಕ್ಕೂ ಹೆಚ್ಚ್ಚಿನ ತಳಿಗಳ ಪ್ರದರ್ಶನ ದೊಂದಿಗೆ ದೇಸಿ ಅಕ್ಕಿ ಮಾರಾಟ ಸಹ ಇರಲಿದೆ. ಇದರೊಂದಿಗೆ ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಪ್ರದ ರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಿರಿ ಧಾನ್ಯ ಬೆಳೆಗಾರರ ಸಂಘಗಳು ರಾಗಿ, ಸಾವೆ, ಹಾರಕ, ಬರಗು, ನವಣೆಯ ವಿವಿಧ ತಳಿ ಮತ್ತು ಅಕ್ಕಿಯನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತರಲಿವೆ. ಸಾವಯವ ಉತ್ಪಾದಕರ ಗುಂಪುಗಳು ಬೇಳೆ ಕಾಳು ಗಳು, ಹಣ್ಣು ಹಂಪಲು ಮಾರಾಟಕ್ಕೆ ತರಲಿವೆ. ಜೂ.29ರಂದು `ಸಾವಯವ ಬೀಜೋತ್ಪಾದನೆ ತರಬೇತಿ ಕಾರ್ಯಕ್ರಮ’ ಹಮ್ಮಿ ಕೊಂಡಿದ್ದು, ಆಸಕ್ತರು ನೋಂದಣಿ ಮಾಡಿಕೊಳ್ಳಬಹುದು. ಜೂ.30ರಂದು ಸಂಜೆ 4ಕ್ಕೆ `ಉಚಿತ ಬೀಜ ವಿನಿಮಯ ಕಾರ್ಯ ಕ್ರಮ’ ಏರ್ಪಡಿಸಿದ್ದು, ಆಸಕ್ತರು ತಮ್ಮ ಸಂಗ್ರಹದ ಬೀಜ, ಗಿಡ, ಬಳ್ಳಿ ಮತ್ತು ಕೃಷಿ ಪುಸ್ತಕಗಳನ್ನು ವಿನಿಮಯಕ್ಕೆ ತರಬಹುದು.

ಉದ್ಘಾಟನೆ: ಜೂ.28ರಂದು ಬೆಳಿಗ್ಗೆ 10ಕ್ಕೆ ಜಿಪಂ ಸಿಇಓ ಕೆ.ಜ್ಯೋತಿ ಮೇಳ ಉದ್ಘಾಟಿಸಲಿದ್ದಾರೆ. ಬೀಜ ಮಾತೆ ಪಾಪಮ್ಮ ರಾಶಿ ಪೂಜೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಜಂಟಿ ಕೃಷಿ ನಿರ್ದೇಶಕ ಡಾ.ಎಂ.ಮಹಂತೇಶಪ್ಪ, ಜೈವಿಕ ಕೃಷಿಕ್ ಸೊಸೈಟಿ ಗೌರವಾಧ್ಯಕ್ಷ ಡಾ.ಕೆ.ರಾಮಕೃಷ್ಣಪ್ಪ, ನಬಾರ್ಡಿನ ಜಿಲ್ಲಾ ವಿಕಾಸ ವ್ಯವಸ್ಥಾಪಕ ಎಸ್.ಮಣಿಕಂಠನ್ ಭಾಗವಹಿಸಲಿದ್ದಾರೆ. ಹಿರಿಯ ಬೀಜ ಸಂರಕ್ಷಕ ಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಹಜ ಸಮೃದ್ಧ ಬಳಗದ ಪ್ರಕಟಣೆ ತಿಳಿಸಿದೆ.

Translate »