ಹಳಸಿದ ಅನ್ನ ತಿಂದು ಹಸು-ಕರು ಸಾವು
ಮೈಸೂರು

ಹಳಸಿದ ಅನ್ನ ತಿಂದು ಹಸು-ಕರು ಸಾವು

July 5, 2018

ನಂಜನಗೂಡು:  ಹಬ್ಬದಲ್ಲಿ ತಯಾರಿಸಿದ್ದ ಆಹಾರದಲ್ಲಿ ಉಳಿದ ಹಳಸಿದ ಅನ್ನ ತಿಂದು ಹಸು ಹಾಗೂ ಕರು ಸಾವನ್ನಪ್ಪಿರುವ ಘಟನೆ ತಾಲೂಕಿನ ದೇಬೂರಿನಲ್ಲಿ ನಡೆದಿದೆ.

ಗ್ರಾಮದ ಮಹದೇವಮ್ಮ ಎಂಬುವರಿಗೆ ಸೇರಿದ ಹಸು ಹಾಗೂ ಕರು ಮೃತಪಟ್ಟಿದೆ. ಗ್ರಾಮದಲ್ಲಿ ಸಿದ್ದಪ್ಪಾಜಿ ಹಬ್ಬ ನಡೆಯುತ್ತಿತ್ತು. ದೇವಾಲಯದಲ್ಲಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಭಕ್ತಾದಿ ಗಳಿಗೆ ಪ್ರಸಾದ ವಿನಿಯೋಗದ ನಂತರ ಉಳಿದ ಹಳಸಿದ ಅನ್ನವನ್ನು ಹಸು ಹಾಗೂ ಕರುವಿಗೆ ನೀಡಲಾಗಿತ್ತು. ಬೆಳಗಾಗುವುದರೊಳಗಾಗಿ ಮನೆಯ ಮುಂದೆ ಕಟ್ಟಿ ಹಾಕಿದ್ದ ಹಸು ಹಾಗೂ ಕರು ಸಾವನ್ನಪ್ಪಿವೆ.

ಪ್ರತಿದಿನ ಹಾಲು ಸರಬರಾಜಿನಿಂದ ಸಂಘ ಸಂಸ್ಥೆಗಳಿಂದ ತೆಗೆದುಕೊಂಡಿದ್ದ ಸಾಲ ತೀರಿಸಲು ಹಸು ಆಧಾರವಾಗಿದ್ದು, ಜೀವನೋಪಾಯಕ್ಕೆ ನೆರವಾಗುತ್ತಿತ್ತು. ಈಗ ಹಸು-ಕರು ಸಾವಿನಿಂದ ಮಹ ದೇವಮ್ಮ ಕಂಗಾಲಾಗಿದ್ದು, ಹಸು ಹಾಗೂ ಕರು ಕಳೆದುಕೊಂಡ ಮಹದೇವಮ್ಮ ನವರಿಗೆ ಸೂಕ್ತ ಪರಿಹಾರ ದೊರಕಿಸ ಬೇಕೆಂದು ಒತ್ತಾಯಿಸಲಾಗಿದೆ.

Translate »