ದುನಿಯಾ ವಿಜಯ್ ಪತ್ನಿಯರ ಹೊಡೆದಾಟ
ಮೈಸೂರು

ದುನಿಯಾ ವಿಜಯ್ ಪತ್ನಿಯರ ಹೊಡೆದಾಟ

September 24, 2018

ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಅಪಹರಣ ಹಾಗೂ ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಯ್ ಬಂಧನವಾದ ಸುದ್ದಿ ಹರಡುತ್ತಿದ್ದಂತೆಯೇ ಅವರ ಇಬ್ಬರು ಪತ್ನಿಯರು ಹೊಡೆದಾಡಿಕೊಂಡಿದ್ದಾರೆ.

ಜಿಮ್ ಟ್ರೈನರ್ ಅಪಹರಣದ ವೇಳೆ ದುನಿಯಾ ವಿಜಯ್‍ನ ಮೊದಲ ಪತ್ನಿ ನಾಗರತ್ನ ಪುತ್ರ ಸಾಮ್ರಾಟ್ ಜೊತೆಗಿದ್ದ ಎಂಬ ಮಾಹಿತಿ ತಿಳಿದ ನಾಗರತ್ನ ಅವರು, ವಿಜಯ್‍ನ ಎರಡನೇ ಪತ್ನಿ ಕೀರ್ತಿಗೌಡ ನಿವಾಸಕ್ಕೆ ಬಂದು ತನ್ನ ಪುತ್ರನ ಬಗ್ಗೆ ವಿಚಾರಿಸಿದರು ಎನ್ನಲಾಗಿದ್ದು, ಈ ವೇಳೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸರಿಗೆ ದೂರು ಸಲ್ಲಿಸಿದ ನಾಗರತ್ನ ಅವರು, ಚಿತ್ರನಟಿ ಕೀರ್ತಿಗೌಡ ಅವರು ನನ್ನ ಪತಿ ದುನಿಯಾ ವಿಜಯ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಾರೆ. ಇದರಿಂದಾಗಿ ನನ್ನ ಮತ್ತು ನನ್ನ ಮಕ್ಕಳ ಜೀವಕ್ಕೆ ಅಪಾಯವಿದೆ. ನಮಗೇನಾದರೂ ತೊಂದರೆ ಆದರೆ ಅದಕ್ಕೆ ವಿಜಯ್ ಮತ್ತು ಕೀರ್ತಿಗೌಡ ಕಾರಣ ಎಂದು ದೂರು ನೀಡಿದ್ದಾರೆ.

ನನ್ನ ಮಕ್ಕಳನ್ನು ಬೇರ್ಪಡಿಸಿ ಅವರ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಅಲ್ಲದೇ ಶನಿವಾರ ರಾತ್ರಿ ದುನಿಯಾ ವಿಜಯ್ ನಡೆಸಿದ ಗಲಾಟೆ ವೇಳೆ ನನ್ನ ಮಗ ಸಾಮ್ರಾಟ್ ಇದ್ದನೆಂದು ವಾಹಿನಿಗಳಲ್ಲಿ ಸುದ್ದಿ ಪ್ರಸಾರವಾದ ಕಾರಣ ನಾನು ಮಗನ ಬಗ್ಗೆ ವಿಚಾರಿಸಲು ಅವರ ಮನೆಗೆ ಹೋಗಿದ್ದೆ. ಆಗ ನನ್ನ ಮೇಲೆ ಕೀರ್ತಿ ಹಲ್ಲೆ ನಡೆಸಿದ್ದಾರೆ. ನಾನು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅವರಿಗೂ ನಾಲ್ಕೈದು ಏಟು ಹೊಡೆದಿದ್ದೇನೆ ಎಂದು ನಾಗರತ್ನ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್‍ನ ಎರಡನೇ ಪತ್ನಿ ಕೀರ್ತಿಗೌಡ ಅವರನ್ನು ಠಾಣೆಗೆ ಕರೆಸಿದ ಪೊಲೀಸರು, ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ.

Translate »