ಅನಧಿಕೃತ ತಂಬಾಕು ಬೆಳೆಗಾರರಿಗೆ ಲೈಸನ್ಸ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ 
ಮೈಸೂರು

ಅನಧಿಕೃತ ತಂಬಾಕು ಬೆಳೆಗಾರರಿಗೆ ಲೈಸನ್ಸ್ ಕೊಡಿಸಲು ಪ್ರಾಮಾಣಿಕ ಪ್ರಯತ್ನ 

January 10, 2020

ಮೈಸೂರು, ಜ.9(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿರುವ ಅನಧಿಕೃತ ತಂಬಾಕು ಬೆಳೆ ಗಾರರಿಗೆ ಲೈಸನ್ಸ್ ಕೊಡಿಸಲು ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ. ತಂಬಾಕು ಬೆಳೆ ಗಾರರ ಸಮಸ್ಯೆ ಇತ್ಯರ್ಥಪಡಿಸಲು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ತಂಬಾಕು ಕೃಷಿ ರೈತ ಮುಖಂಡರ ನಿಯೋಗ ವನ್ನು ಕರೆದೊಯ್ಯುವುದಾಗಿ ಸಂಸದ ಪ್ರತಾಪ ಸಿಂಹ ಭರವಸೆ ನೀಡಿದ್ದಾರೆ.

ಮೈಸೂರು ವಿಜಯನಗರದ ಕಲ್ಯಾಣ ಮಂಟಪದಲ್ಲಿ ಗುರುವಾರ ತಂಬಾಕು ಇನ್ಸ್ ಸ್ಟ್ಟಿಟ್ಯೂಟ್ ಆಫ್ ಇಂಡಿಯಾ ಆಯೋ ಜಿಸಿದ್ದ `20ನೇ ಟಿಐಐ ತಂಬಾಕು ಬೆಳೆ ಗಾರರ ಪ್ರಶಸ್ತಿ’ ಸಮಾರಂಭದಲ್ಲಿ 17 ರೈತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು,  ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ ಸೇರಿದಂತೆ ಜಿಲ್ಲೆಯಲ್ಲಿ ಸಾವಿ ರಾರು ಅನಧಿಕೃತ ತಂಬಾಕು ಬೆಳೆಗಾರ ರಿದ್ದು, ಲೈಸನ್ಸ್ ಕೊಡಿಸಿ ಎಂದು ಮನವಿ ಮಾಡುತ್ತಿದ್ದಾರೆ. ಈಗಾಗಲೇ ಐಟಿಸಿ ಕಂಪನಿ ಜತೆ ಮಾತುಕತೆ ನಡೆಸಿ ಪ್ರಸ್ತಾವನೆ ಇಡ ಲಾಗಿದೆ. ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿಗಳ ಬಳಿಗೆ ನಿಯೋಗ ಕರೆದೊಯ್ದು ಲೈಸನ್ಸ್ ಕೊಡಿಸಲು ಮನವಿ ಮಾಡಲಾಗು ವುದು. ತಂಬಾಕು ಬೆಳೆಗಾರರ ಸಮಸ್ಯೆ ಇತ್ಯ ರ್ಥಕ್ಕೆ ಪ್ರಧಾನಮಂತ್ರಿಗಳು ಸಹಕರಿಸಲಿ ದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾವುದೋ ಫೆಡರೇಷನ್‍ನವರ ಮಾತಿಗೆ ತಲೆಕೆಡಿಸಿಕೊಳ್ಳದೆ ತಂಬಾಕು ಬೆಳೆ ಗಾರರು, ರೈತ ಮುಖಂಡರು ನೇರವಾಗಿ ನನ್ನನ್ನು ಸಂಪರ್ಕಿಸಿ, ಸಮಸ್ಯೆ ಹೇಳಿಕೊಳ್ಳಿ. 2020ಕ್ಕೆ ತಂಬಾಕು ಕೃಷಿ ನಿಷೇಧ ಮಾಡು ತ್ತಾರೆಂಬ ಗುಸುಗುಸು ಕೇಳಿ ಬರುತ್ತಿತ್ತು. ಯಾರೂ ಭಯಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ತಂಬಾಕು ನಿಷೇಧ ಮಾಡುವು ದಿಲ್ಲ. ಪರ್ಯಾಯ ಬೆಳೆ ಬೆಳೆದರೂ ತಂಬಾಕು ನಿಷೇಧ ಮಾಡಲು ಸಾಧ್ಯವಿಲ್ಲ ಎಂದು ಸಂಸದರು ಅಭಯ ನೀಡಿದರು.

ನಿಯಮ ಸಡಿಲಿಸಿ ಪ್ರೋತ್ಸಾಹ ಕೊಡಿ: ಹುಣಸೂರು ಕ್ಷೇತ್ರದ ಶಾಸಕ ಹೆಚ್.ಪಿ. ಮಂಜುನಾಥ್ ಮಾತನಾಡಿ, ನೋವಿನಲ್ಲೂ ಖುಷಿಪಡುವ ಸ್ಥಿತಿ ತಂಬಾಕು ಬೆಳೆಗಾರ ರದ್ದಾಗಿದೆ. ಅತೀ ಹೆಚ್ಚು ಇಳುವರಿ ತೆಗೆ ಯುವ ತಂಬಾಕು ಬೆಳೆಗಾರರ ಮೇಲೆ ಹೇರುವ ನಿಯಮ, ನಿರ್ಬಂಧಗಳನ್ನು ಸಡಿಲಿಸಿ ಪ್ರೋತ್ಸಾಹ ಕೊಡಬೇಕು. ರಾಜ್ಯದ ತಂಬಾಕು ಬೆಳೆಗಾರರಿಂದ ಸರ್ಕಾರಕ್ಕಿಂತ ಐಟಿಸಿ ಕಂಪ ನಿಯೇ ಹೆಚ್ಚು ಆದಾಯ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರ ಆರೋಗ್ಯ ದತ್ತಲೂ ಗಮನ ಕೊಡಬೇಕು. ಲೈಸನ್ಸ್ ದಾರನೇ ಅಥವಾ ಅಲ್ಲವೇ? ತಂಬಾಕು ಬೆಳೆಯುತ್ತಿದ್ದಾರೆಯೋ-ಇಲ್ಲವೋ? ಎನ್ನು ವುದನ್ನು ನೋಡಬೇಕು ಹೊರತು ಬೇರೆ ನಿರ್ಬಂಧ ವಿಧಿಸಬಾರದು ಎಂದರು.

ಪಿರಿಯಾಪಟ್ಟಣ ಶಾಸಕ ಕೆ.ಮಹದೇವು ಮಾತನಾಡಿ, ತಂಬಾಕು ಬೆಳೆಗಾರರಿಗೆ ಮಾರು ಕಟ್ಟೆಯಲ್ಲಿ ಬೆಲೆ ಕುಸಿಯದಂತೆ ನೋಡಿ ಬೆಲೆ ನಿಗದಿಪಡಿಸಿ ಅನುಕೂಲ ಮಾಡ ಬೇಕು. ರೈತರ ಆದಾಯ ಹೆಚ್ಚಿದರೆ ಕಂಪನಿ, ಸರ್ಕಾರಕ್ಕೂ ಆದಾಯ ಬರಲಿದೆ ಎಂದರು.

ಇದಕ್ಕೂ ಮುನ್ನ ಟಿಐಐ ನಿರ್ದೇಶಕ ಸೈಯದ್ ಮಹಮೂದ್ ಅಹ್ಮದ್ ಮಾತ ನಾಡಿ, ತಂಬಾಕು ಭಾರತದಲ್ಲಿನ ಲಕ್ಷಾಂ ತರ ರೈತರು, ಕೃಷಿ ಕಾರ್ಮಿಕರು, ಬುಡ ಕಟ್ಟು ಜನಾಂಗದವರು, ಮಹಿಳಾ ಕಾರ್ಮಿ ಕರು ಮತ್ತು ಅವರ ಕುಟುಂಬಗಳಿಗೆ ಜೀವ ನೋಪಾಯವನ್ನು ಒದಗಿಸುತ್ತದೆ ಎಂಬು ದನ್ನು ತಿಳಿದೇ ಆಧುನಿಕ ಕೃಷಿ ಪದ್ಧತಿ ಯನ್ನು ಅಳವಡಿಸಿಕೊಳ್ಳುವ ಪ್ರಯತ್ನಕ್ಕಾಗಿ ತಂಬಾಕು ಕೃಷಿಕ ಸಮುದಾಯವನ್ನು ಸನ್ಮಾ ನಿಸುವ ಮತ್ತು ಪೆÇ್ರೀತ್ಸಾಹಿಸುವ ಉದ್ದೇಶ ದಿಂದ 1999ರಲ್ಲಿ ಭಾರತದ ತಂಬಾಕು ಸಂಸ್ಥೆ ಈ ಪ್ರಶಸ್ತಿಗಳನ್ನು ಸ್ಥಾಪಿಸಿತು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಸಾ.ರಾ. ಮಹೇಶ್, ತಂಬಾಕು ಮಂಡಳಿ ಅಧ್ಯಕ್ಷ ವೈ.ರಘುನಾಥ್‍ಬಾಬು, ಕಾರ್ಯ ನಿರ್ವಾ ಹಕ ನಿರ್ದೇಶಕ ಡಾ.ಎಸ್.ರಾಮಕೃಷ್ಣನ್, ಸಿಟಿಆರ್‍ಐ ಸಂಶೋಧನಾ ಕೇಂದ್ರದ ಮುಖ್ಯಸ್ಥ ಹುನ್ಸೂರ್ ಇನ್ನಿತರರು ಇದ್ದರು.

17 ಮಂದಿಗೆ ಪ್ರಶಸ್ತಿ: ಕರ್ನಾಟಕದ ಹಿರಿಯ ತಂಬಾಕು ಕೃಷಿಕ ಬಿ.ಎನ್.ಜಯ ರಾಮ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿದರೆ, ಚೆರುಕುರಿ ಹರಿನಾರಾ ಯಣ, ಮಾದಲ ವೆಂಕಟರಾಮಯ್ಯ, ಶ್ರೀಹರಿಬಾಬು, ಎಂ.ಎನ್.ಜಯರಾಮನ್, ಎಂ.ಜೆ.ಕೃಷ್ಣೇಗೌಡ, ಸಂಗುರಾಮಣ್ಣರೆಡ್ಡಿ, ಸುರೇಶ್ ಅವರಿಗೆ ಅತ್ಯುತ್ತಮ ಬೆಳೆಗಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀನಿ ವಾಸರಾಜು, ರಾಮಚಂದ್ರರಾವ್, ಮಂಡುವ ಮುಸಲಾಲಯ್ಯ, ವೆಂಕಟೇಶ್ವರುಲು, ದೇವರ ಪಲ್ಲಿ ಗಂಗೀರೆಡ್ಡಿ, ಎನ್.ಭಾಸ್ಕರ್ ಚೌದರಿ, ಯೂಸುಫ್ ಷರೀಫ್, ಎನ್.ಕೆ.ಈರೇ ಗೌಡ, ನೆಲ್ಲೂರಿ ಆಂಜನೇಯಲು ಅವರಿಗೆ ರೆಕಗ್ನಿಷನ್ ಅವಾರ್ಡ್ ನೀಡಲಾಯಿತು.

 

 

Translate »