ಜೂ.12ರಿಂದ 18ರವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯ
ಮೈಸೂರು

ಜೂ.12ರಿಂದ 18ರವರೆಗೆ ಹಲವೆಡೆ ವಿದ್ಯುತ್ ವ್ಯತ್ಯಯ

June 10, 2019

ಮೈಸೂರು: ಕೆ.ಆರ್.ನಗರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಜೂನ್ 12, 14, 15 ಹಾಗೂ 18ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವ ರೆಗೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಳ್ಳಲಾಗಿದೆ. ಜೂ.12ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಮಿರ್ಲೆ66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಪಡುವ ಗಂಧನಹಳ್ಳಿ ನರಚನಹಳ್ಳಿ ಗ್ರಾಪಂ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಗೂ ಹರದನಹಳ್ಳಿ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಪಡುವ ಹರದನಹಳ್ಳಿ, ಸೀಗೆವಾಳು, ಹೊನ್ನೇನಹಳ್ಳಿ, ಹನಸೋಗೆ, ಚನ್ನಂಗೆರೆ ಮತ್ತು ಕೆರಳಾಪುರ ಗ್ರಾಪಂ ವ್ಯಾಪ್ತಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಜೂ.14ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಬೆಕ್ಕೆರೆ ಭುವನಹಳ್ಳಿ, ದೊಡ್ಡಕಂಬರಹಳ್ಳಿ, ಹಾರ್ನಹಳ್ಳಿ, ಚಪ್ಪರದಹಳ್ಳಿ, ಕಣಗಾಲು, ಹಡಗನಹಳ್ಳಿ, ಆರ್.ತುಂಗಾ, ಬೆಟ್ಟದಪುರಟೌನ್, ಕೋಮಲಪುರ, ಸಂಗರಶೆಟ್ಟಿಹಳ್ಳಿ, ಅತ್ತಿಗೋಡು, ಭಾರಸೆರಾವಂ ದೂರು ರಾವಂದೂರು, ಮಾಕೋಡು, ಹಂಡಿತವಳ್ಳಿ, ಕಿತ್ತೂರು, ದೊಡ್ಡಬೆಳಾಲು, ಕಂಪಲಾಪುರ ಗ್ರಾಮಗಳಲ್ಲಿ ವಿದ್ಯುತ್ ಕಡಿತ ವಾಗಲಿದೆ. ರಾವಂದೂರು ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಪಡುವ ರಾವಂ ದೂರು, ಮಾಕೋಡು, ಹಂಡಿತವಳ್ಳಿ, ಕಿತ್ತೂರು, ದೊಡ್ಡಬೆಳಾಲು, ಕಂಪಲಾಪುರ ಗ್ರಾಪಂ ವ್ಯಾಪ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕಿತ್ತೂರು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಪಡುವ ಅತ್ತಿಗೋಡು ಹರೀನಹಳ್ಳಿ ಹಾಗೂ ಹಂಡಿತವಳ್ಳಿ ವ್ಯಾಪ್ತಿ ಮತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಗೂ ಚುಂಚನಕಟ್ಟೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಪಡುವ ಚುಂಚನಕಟ್ಟೆ, ಮಾವತ್ತೂರು, ಹಳಿಯೂರು, ಕೆಸ್ತೂರು ಮತ್ತು ಮಾಯಿಗೌಡನಹಳ್ಳಿ ಗ್ರಾಪಂ ವ್ಯಾಪ್ತಿ ಹಾಗೂ ಗ್ರೆಫೈಟ್ ಇಂಡಿಯಾ ಐಪಿಪಿ ಕೇಂದ್ರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಜೂ.15ರಂದು ಬೆಳಿಗ್ಗೆ 10ರಿಂದ ಸಂಜೆ 6 ಘಂಟೆಯವರೆಗೆ ದೊಡ್ಡಕಮ್ಮರಹಳ್ಳಿ, ಹಾರ್ನಹಳ್ಳಿ, ಚಪ್ಪರದಹಳ್ಳಿ, ಕಣಗಾಲು, ಹಳಗನಹಳ್ಳಿ, ಗ್ರಾಮ ಪಂಚಾಯಿತಿ ವ್ಯಾಪ್ತಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಜೂನ್ 18ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗÀಂಟೆವರೆಗೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮ, ತಂದ್ರೆ, ಕರ್ಪೂರವಳ್ಳಿ, ಚಿಕ್ಕನಾಯಕನಹಳ್ಳಿ, ಅಂಕನಹಳ್ಳಿ ಮತ್ತು ಮೇಲೂರು ಗ್ರಾಪಂ ವ್ಯಾಪ್ತಿ ಮತ್ತು ಸುತ್ತಮುತ್ತಲಿನ ಗ್ರಾವiಗಳಲ್ಲಿ ಹಾಗೂ ಕೆ.ಆರ್.ನಗರ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಪಡುವ ಕೆ.ಆರ್.ನಗರ ಹೆಬ್ಬಾಳು, ಹೊಸಕೋಟೆ, ದೊಡ್ಡಕೊಪ್ಪಲು, ಬ್ಯಾಡರಹಳ್ಳಿ, ಕೆಗ್ಗೆರೆ, ತಿಪ್ಪೂರು, ಹಂಪಾಪುರ, ಹೊಸೂರು, ಲಾಲನದೇವನಹಳ್ಳಿ, ಅಡಗೂರು ಮತ್ತು ಚಂದಗಾಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕೆ.ಆರ್.ನಗರದ ಚೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆ ತಿಳಿಸಿದ್ದಾರೆ.

Translate »