ಪರಿಸರ ಉಳಿವಿಗೆ ಪ್ರತಿಯೊಬ್ಬರೂ ಮುಂದಾಗಿ: ಎಸಿ ನಾಗರಾಜು
ಹಾಸನ

ಪರಿಸರ ಉಳಿವಿಗೆ ಪ್ರತಿಯೊಬ್ಬರೂ ಮುಂದಾಗಿ: ಎಸಿ ನಾಗರಾಜು

June 30, 2019

ಬೇಲೂರು, ಜೂ.29- ಪರಿಸರ ಉಳಿಯ ದಿದ್ದರೇ ಮನುಷ್ಯ ಭೂಮಿ ಮೇಲೆ ಬದು ಕಲು ಸಾಧ್ಯವಿಲ್ಲ. ಆದ್ದರಿಂದ ಪರಿಸರ ಉಳಿಸಲು ಪ್ರತಿಯೊಬ್ಬರೂ ಮುಂದಾಗ ಬೇಕು ಎಂದು ಹಾಸನ ಉಪವಿಭಾಗಾ ಧಿಕಾರಿ ನಾಗರಾಜು ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಚನ್ನರಾಯಪಟ್ಟಣದ ಹಸಿರು ಭೂಮಿ ಬಳಗ, ಬೇಲೂರು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್‍ನಿಂದ ಏರ್ಪಡಿಸಿದ್ದ ಕಾರ್ಯಕ್ರಮ ದಲ್ಲಿ ಗಿಡನೆಟ್ಟು ಮಾತನಾಡಿದ ಅವರು, ಗಿಡ ಮರಗಳೇ ನಮ್ಮ ಉಸಿರು, ಆದ್ದರಿಂದ ಗಿಡಗಳನ್ನು ನೆಟ್ಟು, ನೆಟ್ಟ ಗಿಡಗಳನ್ನು ಪೋಷಿಸುವ ಕೆಲಸ ಮಾಡಬೇಕು ಹಾಗೂ ಇತ್ತೀಚಿನ ದಿನಗಳಲ್ಲಿ ಜಾಗತೀಕರಣ ಭರಾಟೆಯಲ್ಲಿ ಹಾಳಾಗುತ್ತಿರುವ ನಮ್ಮ ಪರಿಸರವನ್ನು ಸಮತೋಲನಕ್ಕೆ ತರುವ ಅನಿವಾರ್ಯತೆ ಬಗ್ಗೆ ಜಾಗರೂಕರಾಗಿ, ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಅಲ್ಲದೆ ಮಕ್ಕಳ ಸಾಹಿತ್ಯ ಪರಿಷತ್‍ನಿಂದ ಜಿಲ್ಲಾ ದ್ಯಂತ ಗಿಡಗಳನ್ನು ನೆಡುತ್ತಿದ್ದೇವೆ ಎಂದರು.

ಚನ್ನರಾಯಪಟ್ಟಣದ ಹಸಿರು ಭೂಮಿ ಬಳಗದ ಅಧ್ಯಕ್ಷ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಚ.ನಾ.ಆಶೋಕ್ ಮಾತನಾಡಿ, ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ನೂರು ಶಾಲೆಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ಹಸಿರು ಭೂಮಿ ಬಳಗದಿಂದ ಹಮ್ಮಿಕೊಂಡಿದ್ದು, ಈಗಾಗಲೇ 70 ಶಾಲೆಗಳಲ್ಲಿ ಗಿಡಗಳನ್ನು ನೆಟ್ಟಿದ್ದೇವೆ. ಅಲ್ಲದೆ ಮಕ್ಕಳಲ್ಲಿ ಪರಿಸರದ ಬಗ್ಗೆ ತಿಳು ವಳಿಕೆ ನೀಡುವ ಉದ್ದೇಶದಿಂದ ಪರಿಸರ ಪರಿಚಯ ಕಾರ್ಯಕ್ರಮ, ಬೀಜ ಬಿತ್ತನೆ ಕಾರ್ಯಕ್ರಮ ಹೀಗೆ ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು

ಈ ವೇಳೆ ತಹಸೀಲ್ದಾರ್ ಮೇಘನಾ, ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಜಯರಾಮ್, ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷೆ ಆಶಾಕಿರಣ್, ಸಾಹಿತಿ ಸ್ವಾಮಿ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯೆ ಸೌಮ್ಯ ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳಿದ್ದರು.

Translate »