ಪೊಲೀಸ್ ಭದ್ರತೆಯಲ್ಲಿ ವಿಷ್ಣು ಸ್ಮಾರಕ ನಿರ್ಮಾಣ
ಮೈಸೂರು

ಪೊಲೀಸ್ ಭದ್ರತೆಯಲ್ಲಿ ವಿಷ್ಣು ಸ್ಮಾರಕ ನಿರ್ಮಾಣ

June 29, 2019

ಮೈಸೂರು, ಜೂ.28(ಆರ್‍ಕೆ)- ರಾಜ್ಯ ಹೈಕೋರ್ಟ್‍ನಿಂದ ಹಸಿರು ನಿಶಾನೆ ದೊರೆತಿರುವುದರಿಂದ ಮೈಸೂ ರಿನಲ್ಲಿ ಕನ್ನಡದ ಖ್ಯಾತ ನಾಯಕ ನಟರಾಗಿದ್ದ ‘ಸಾಹಸಸಿಂಹ’ ದಿವಂಗತ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಾಗುವುದು ಖಚಿತವಾಗಿದೆ.

ಪೊಲೀಸ್ ಬಂದೋಬಸ್ತ್‍ನಲ್ಲಿ ಡಾ.ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭಿಸಲು ಜಿಲ್ಲಾಡಳಿತ ಹಾಗೂ ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಟ್ರಸ್ಟ್ ಸಿದ್ಧತೆ ನಡೆಸುತ್ತಿವೆ. ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಮೈಸೂರು ತಾಲೂಕು ತಹಶೀಲ್ದಾರ್ ಟಿ. ರಮೇಶ್‍ಬಾಬು, ಮೈಸೂರು ಸಿವಿಲ್ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ರಾಜ್ಯ ಹೈಕೋರ್ಟ್ ತೆರವುಗೊಳಿಸಿದ್ದು, ಕಾಮಗಾರಿ ಆರಂಭಿಸು ವಂತೆ ಆದೇಶ ನೀಡಿದೆ ಎಂದರು.

ಡಾ.ವಿಷ್ಣು ಸ್ಮಾರಕ ನಿರ್ಮಿಸಲು ಮೈಸೂರು ತಾಲೂಕು ಮಾನಂದವಾಡಿ ರಸ್ತೆಯ ಉದ್ಬೂರು ಗೇಟ್ ಎದುರು ಆಲಾಳು ಗ್ರಾಮದ ಸರ್ವೆ ನಂಬರ್ 8ರಲ್ಲಿ 5 ಎಕರೆ ಭೂಮಿ ಯನ್ನು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಜೂರು ಮಾಡಿದ್ದರು. ಸದರಿ ಭೂಮಿಯನ್ನು ಮೈಸೂರು ಜಿಲ್ಲಾಡಳಿತವು ವಾರ್ತಾ ಮತ್ತು ಪ್ರಚಾರ ಇಲಾಖೆಗೆ ಹಸ್ತಾಂ ತರಿಸಿದ್ದು, ಇಲಾಖೆ ಹೆಸರಿಗೆ ಖಾತೆಯೂ ಆಗಿದೆ. ಈ ನಡುವೆ ಉದ್ಬೂರು ಮಹ ದೇವಮ್ಮ, ಸಣ್ಣಪ್ಪ ಹಾಗೂ ಇತರರು, ತಾವು ಹಲವು ವರ್ಷಗಳಿಂದ ಈ ಭೂಮಿಯನ್ನು ಉಳುಮೆ ಮಾಡುತ್ತಿದ್ದು, ಸ್ವಾಧೀನಾನುಭವ ದಲ್ಲಿದ್ದೇವೆ ಎಂದು ಹೇಳಿ ಮೈಸೂರಿನ 2ನೇ ಜುಡಿಷಿಯಲ್ ಮ್ಯಾಜಿಸ್ಟ್ರೇಟ್, ಎಒಈಅ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರ ಕೋರಿಕೆ ಮೇರೆಗೆ ತಡೆಯಾಜ್ಞೆ ನೀಡಿತ್ತು. ನಂತರ ತಹಶೀಲ್ದಾರ್ ಟಿ.ರಮೇಶ್‍ಬಾಬು ಅವರು ರಾಜ್ಯ ಹೈಕೋರ್ಟ್‍ನಲ್ಲಿ ಮೇಲ್ಮ ನವಿ ಸಲ್ಲಿಸಿ, ಅದು ಸರ್ಕಾರಿ ಭೂಮಿ ಎಂಬುದನ್ನು ಸಾಬೀತು ಪಡಿಸುವ ದಾಖಲಾತಿಗಳನ್ನು ಸಲ್ಲಿಸಿದ್ದರಿಂದ ಹಾಗೂ ಎದು ರಾಳಿಗಳು ವಿಚಾರಣೆಗೆ ಗೈರು ಹಾಜರಾದ ಕಾರಣ ನ್ಯಾಯಾಲಯವು ಮೈಸೂರು ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವು ಗೊಳಿಸಿದೆ. ವಿನ್ಯಾಸದ ಪ್ರಕಾರವೇ ಉದ್ದೇ ಶಿತ ಡಾ.ವಿಷ್ಣು ಸ್ಮಾರಕ ನಿರ್ಮಾಣ ಮಾಡಬಹುದು ಎಂದು ಆದೇಶಿಸಿದೆ.

ರಾಜ್ಯ ಹೈಕೋರ್ಟ್ ಆದೇಶವಿರುವುದ ರಿಂದ ಮೈಸೂರು ಜಿಲ್ಲಾಡಳಿತ ಹಾಗೂ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿರುವ ಡಾ. ವಿಷ್ಣುವರ್ಧನ್ ಪ್ರತಿಷ್ಠಾನ ಟ್ರಸ್ಟ್ ಸಹಯೋಗ ದಲ್ಲಿ ಶೀಘ್ರ ಕಾಮಗಾರಿ ಆರಂಭವಾಗ ಲಿದೆ ಎಂದು ಮೂಲಗಳು ತಿಳಿಸಿವೆ.

ವಿಷ್ಣುವರ್ಧನ್ ಅವರ ಅಳಿಯ, ಚಿತ್ರ ನಟ ಅನಿರುದ್ಧ ಪ್ರತಿಕ್ರಿಯಿಸಿ, ಆರ್ಕಿಟೆಕ್ಚರಲ್ ನಕ್ಷೆ ಶೇ.90ರಷ್ಟು ಆಗಿದೆ. ವಿನ್ಯಾಸ ಪೂರ್ಣಗೊಂಡ ನಂತರ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರು ದಿನಾಂಕ ನಿಗದಿ ಗೊಳಿಸಿದಾಗ ಸಭೆ ಕರೆದು ಚರ್ಚಿಸಿ, ಕಾಮ ಗಾರಿ ಆರಂಭಿಸಲಾಗುವುದು ಎಂದರು.

ಡಾ.ವಿಷ್ಣು ಸ್ಮಾರಕ ನಿರ್ಮಿಸಲು ಸರ್ಕಾರ 5 ಎಕರೆ ಭೂಮಿ ಮತ್ತು 11 ಕೋಟಿ ರೂ. ಅನುದಾನ ನೀಡಿರುವುದರಿಂದ ಕಾಮಗಾರಿ ಆರಂಭವಾಗುವ ಕಾಲ ಸನ್ನಿಹಿತವಾಗಿದೆ.

Translate »