ಮೈಸೂರು ನಗರಪಾಲಿಕೆಯಿಂದ `ಯೋಗಲಕ್ಷ್ಮೀ’ ಯೋಜನೆ ಜಾರಿ
ಮೈಸೂರು

ಮೈಸೂರು ನಗರಪಾಲಿಕೆಯಿಂದ `ಯೋಗಲಕ್ಷ್ಮೀ’ ಯೋಜನೆ ಜಾರಿ

June 29, 2019

ಮೈಸೂರು, ಜೂ.28(ಎಂಟಿವೈ)- ಮೈಸೂರು ನಗರಪಾಲಿಕೆಯು ತನ್ನ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಯೋಗಲಕ್ಷ್ಮೀ ಯೋಜನೆಯನ್ನು ಶುಕ್ರವಾರದಿಂದ ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳು ಪಾಲಿಕೆಯ ಈ ಯೋಜನೆ ಪಡೆಯಲು ಕೋರಿದೆ.

ಮೈಸೂರು ನಗರ ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಈ ಯೋಜನೆಯ ಪೆÇೀಸ್ಟರ್ ಬಿಡುಗಡೆಗೊಳಿಸಿ ಮಾತ ನಾಡಿದ ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ನಗರದ ನಿವಾಸಿಗಳಿಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ. ಬಿಪಿಎಲ್ ಕಾರ್ಡ್ ಹೊಂದಿದ, ಸರ್ಕಾರಿ ಆಸ್ಪತ್ರೆ ಯಲ್ಲಿ 2019 ಏಪ್ರಿಲ್ 1ರ ನಂತರ ಜನಿಸಿದ ಹೆಣ್ಣು ಮಗುವಿಗೆ ಈ ಯೋಜನೆ ಲಭ್ಯ ವಾಗಲಿದ್ದು, ಇದಕ್ಕಾಗಿ 2.50 ಕೋಟಿ ಅನುದಾನ ನಿಗದಿಪಡಿಸಲಾಗಿದೆ ಎಂದರು.

ಪಡಿತರ ಚೀಟಿ, ಆಧಾರ್ ಕಾರ್ಡ್, ತಾಯಿ ಕಾರ್ಡ್‍ನ ದಾಖಲಾತಿ ನೀಡಿ ನಗರ ಪಾಲಿಕೆಯಲ್ಲಿ ಇಂದಿನಿಂದ ನೀಡುವ ಅರ್ಜಿ ಯನ್ನು ಪಡೆದು ಸಲ್ಲಿಸಬಹುದು. ಸಲ್ಲಿಕೆ ಯಾದ ಮೊದಲ 1 ಸಾವಿರ ಮಂದಿಗೆ ಮಾತ್ರ ಈ ವರ್ಷ ಯೋಗಲಕ್ಷ್ಮೀ ಯೋಜನೆಯಡಿ 25 ಸಾವಿರ ರೂ.ಗಳ ಬಾಂಡ್ ವಿತರಿಸ ಲಾಗುವುದು ಎಂದು ಹೇಳಿದರು. ಮಗು ವಿಗೆ 18 ವರ್ಷ ತುಂಬುವವರೆಗೆ 25 ಸಾವಿರ ಮೊತ್ತವನ್ನು ಬ್ಯಾಂಕ್‍ನಲ್ಲಿ ಇಟ್ಟು ಬಾಂಡ್ ನೀಡಲಾಗುವುದು. ನಂತರ ಬಂದ ಹಣದಲ್ಲಿ ಮಗುವಿನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಬಹುದು. ಈ ಸೌಲಭ್ಯ ಪಡೆ ಯಲಿಚ್ಛಿಸುವವರು ಪೆÇೀಷಕರೊಂದಿಗೆ ಇರುವ ಮಗುವಿನ ಭಾವಚಿತ್ರವನ್ನು ಕಡ್ಡಾಯ ವಾಗಿ ಲಗತ್ತಿಸಬೇಕು. ವಾರ್ಷಿಕ 2.50 ಲP್ಷÀ ಆದಾಯ ಹೊಂದಿರುವ ಕುಟುಂಬದ ಒಂದೇ ಹೆಣ್ಣು ಮಗುವಿಗೆ ಮಾತ್ರ ಈ ಯೋಜನೆ ಸೀಮಿತ. ಅಲ್ಲದೆ ಫಲಾನು ಭವಿ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗು ಸೇರಿ ಮಕ್ಕಳ ಸಂಖ್ಯೆ 2ಕ್ಕಿಂತ ಹೆಚ್ಚಿಗೆ ಇರಬಾರದು. ಮಗುವಿನ ವಯಸ್ಸಿನ ಅನು ಗುಣವಾಗಿ ಎಲ್ಲಾ ಚುಚ್ಚುಮದ್ದು ಹಾಕಿಸಿರ ಬೇಕು. ಮಗುವಿನ ತಾಯಿಯ ಹೆಸರಿನಲ್ಲಿ ಕಡ್ಡಾಯವಾಗಿ ಬ್ಯಾಂಕ್‍ನಲ್ಲಿ ಜಂಟಿ ಖಾತೆ ಹೊಂದಿರಬೇಕು. ಅರ್ಜಿ ಸಲ್ಲಿಸಿ ಪರಿಶೀ ಲಿಸಿದ ನಂತರ ಈ ಯೋಜನೆ ಲಭ್ಯವಾಗ ಲಿದೆ. ಆಯುಕ್ತರ ನೇತೃತ್ವದ ಪರಿಶೀಲನಾ ಸಮಿತಿಯು ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸಿ ಪ್ರತಿ ತಿಂಗಳು ಎರಡು ಬ್ಯಾಚ್ ನಂತೆ ಪರಿಶೀಲಿಸಿ, ಬ್ಯಾಂಕ್‍ನಿಂದ ಬಾಂಡ್ ಪಡೆದು ವಿತರಿಸಲಾಗುವುದು ಎಂದು ವಿವರಿಸಿದರು.

Translate »