ಮನುಷ್ಯನ ಉತ್ತಮ ಚಿಂತನೆಗೆ ಯೋಗ ಸಹಕಾರಿ
ಹಾಸನ

ಮನುಷ್ಯನ ಉತ್ತಮ ಚಿಂತನೆಗೆ ಯೋಗ ಸಹಕಾರಿ

June 30, 2019

ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀಶಂಭುನಾಥ ಸ್ವಾಮೀಜಿ ಅಭಿಪ್ರಾಯ
ಹಾಸನ, ಜೂ.29- ಮನುಷ್ಯನ ಉತ್ತಮ ಚಿಂತನೆಗೆ ಯೋಗ ಸಹಕಾರಿ ಎಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀಶಂಭು ನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಎಂ.ಜಿ.ರಸ್ತೆ ಬಳಿಯ ಶ್ರೀಆದಿ ಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಹಾಸನ ಜಿಲ್ಲಾ ಯೋಗ ಸಂಸ್ಥೆ ಸಂಯುಕ್ತಾಶ್ರಯ ದಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಆಯೋಜಿಸಿದ್ದ ಪ್ರಥಮ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತ ನಾಡಿದ ಅವರು, ಹಿಂದಿನ ಅಜ್ಜ-ಅಜ್ಜಿ ಕಾಲದ ಸಂಸ್ಕøತಿ, ಪರಂಪರಾಗತವಾಗಿ ಬಂದಂತಹ ಕಾಲ ಆರೋಗ್ಯ ಸಮಾಜವಾ ಗಿತ್ತು. ಉತ್ತಮ ಆಹಾರ ಬಳಕೆ ಮಾಡು ತ್ತಿದ್ದರು. ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುತ್ತಿದ್ದರು. ಯಾವ ಕಿಡ್ನಿ ಇತರೆ ಖಾಯಿಲೆಗಳೆ ಬರುತ್ತಿರಲಿಲ್ಲ. ಇಂದು ಹಣ ಕೊಟ್ಟು ವಿಷ ಪಡೆಯುತ್ತಿದ್ದು, ಹಾಸಿಗೆ ಯಲ್ಲಿ ಮಲಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಗುರುವಿನಿಂದ ಅರಿವು ಬಂದು ಜ್ಞಾನ-ತಿಳುವಳಿಕೆ ಉತ್ಪತ್ತಿಯಾಗುತ್ತದೆ. ಅದರಂತೆ ಯೋಗವನ್ನು ಕೂಡ ಗುರುವಿನ ಮೂಲಕ ಕಲಿತರೇ ಆರೋಗ್ಯಕರವಾಗಿರುತ್ತದೆ. ಇಷ್ಟ ಬಂದಾಗೇ ಯೋಗ ಮಾಡಿದರೇ ಆರೋಗ್ಯ ಕೆಡುತ್ತದೆ ಎಂದು ಎಚ್ಚರಿಸಿದರು.

ಇಂದು ಯೋಗ ಕಲಿಯಲು ಹೊರ ದೇಶದಿಂದ ಬರುತ್ತಿದ್ದಾರೆ. ಮುಂದಿನ ದಿನ ಗಳಲ್ಲಿ ಏನಾದರೂ ಯೋಗಾಭ್ಯಾಸ ಕಡಿಮೆ ಯಾಗಿ ಮರೆತು ಹೋದರೆ ಹೊರ ದೇಶಕ್ಕೆ ನಾವು ಹೋಗಿ ಅಭ್ಯಾಸ ಮಾಡುವ ಪರಿಸ್ಥಿತಿ ಬರಬಹುದು ಎಂದು ಕಿವಿಮಾತು ಹೇಳಿದರು.

ಪರಿಸರ ಸಂರಕ್ಷಿಸಲು ಹೊರ ಹೋಗಬೇಕಾ ಗಿಲ್ಲ. ಮೊದಲು ನಿಮ್ಮ ಮನೆ ಸುತ್ತ ಪರಿಸರ ಕಾಪಾಡುವಂತೆ ಸಲಹೆ ನೀಡಿದರು. ಭಾರ ತೀಯ ಸನಾತನ ಸಂಸ್ಕøತಿಯಲ್ಲಿ ಪ್ರಾಚೀನ ಕಾಲದಿಂದಲೂ ಯೋಗ ನಿರಂತರವಾಗಿ ಬಂದಿದೆ. ಮನುಷ್ಯ ಉತ್ತಮ ಆರೋಗ್ಯದ ಜೊತೆ ಬದುಕ ಬೇಕಾದರೇ ಯೋಗ ಎಂಬುದು ನಿರಂತರವಾಗಿ ಇರಬೇಕು. ಕೇವಲ ಬಹು ಮಾನಕ್ಕಾಗಿ ಸ್ಪರ್ಧೆಯಲ್ಲಿ ಯೋಗ ಮಾಡು ವುದಕ್ಕೆ ನಡೆಸಲಾಗುತ್ತಿಲ್ಲ. ಇವರನ್ನು ನೋಡಿ ದವರು ಕೂಡ ಯೋಗ ಮಾಡಬೇಕು ಎಂಬ ಜಾಗೃತಿಗೆ ನಡೆಸಲಾಗುತ್ತಿದೆ ಎಂದರು.

ಕರ್ನಾಟಕ ಯೋಗ ಸಂಸ್ಥೆ ಗೌರವ ಕಾರ್ಯದರ್ಶಿ ಪುಟ್ಟೇಗೌಡ ಮಾತನಾಡಿ, ಭಾರತದಲ್ಲಿ ಯೋಗ ತನ್ನದೇ ಆದ ಪರಂ ಪರೆ ಮತ್ತು ಸಂಸ್ಕøತಿ ಹೊಂದಿದೆ. ಪತಂಜಲಿ ಯೋಗ ಗುರುಗಳ ಕೊಡುಗೆ ಕೂಡ ಸೇರಿದೆ ಎಂದರು. ಇಂದು ಯೋಗವನ್ನು 194 ರಾಷ್ಟ್ರ ಗಳು ಒಪ್ಪಿಕೊಂಡಿದೆ. ಹೊರ ದೇಶಗಳಲ್ಲಿ ಯೋಗಕ್ಕೆ ಮುಖ್ಯ ಸ್ಥಾನ ಕೊಟ್ಟಿದ್ದು, ಇಂತಹ ಯೋಗ ಇಡೀ ಭಾರತದಲ್ಲಿ ಜಾಗೃತಿ ಉಂಟು ಮಾಡುತ್ತಿದೆ. ಯೋಗ ಎಂಬುದು ಖಂಡಿತ ರಾಮಬಾಣವಾಗಿ ಕೆಲಸ ಮಾಡುತ್ತದೆ. ಆರೋಗ್ಯವಂತ ಜೀವನ ನಡೆಸಲು ಯೋಗ ಅಳವಡಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಕೊಥಾರಿ ಬಿಲ್ಡರ್ಸ್‍ನ ರಮೇಶ್ ಕುಮಾರ್, ಹಸಿರು ಭೂಮಿ ಪ್ರತಿ ಷ್ಠಾನದ ಆರ್.ಪಿ.ವೆಂಕಟೇಶ್ ಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಮಂಜುನಾಥ್, ಜಿಲ್ಲಾ ಯೋಗ ಸಂಸ್ಥೆ ಅಧ್ಯಕ್ಷ ಡಿ.ಗಿಡ್ಡೇಗೌಡ, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ನಿರಂಜನ್, ಸಹಕಾರ್ಯ ದರ್ಶಿ ಮನೋಹರ್ ಇತರರಿದ್ದರು.

Translate »