ಮೈಸೂರು: ಬಿರುಕು ಬಿಟ್ಟಿರುವ ಮೈಸೂರಿನ ಪಾರಂ ಪರಿಕ ದೊಡ್ಡಗಡಿಯಾರ ದುರಸ್ತಿ ಕಾಮ ಗಾರಿ ನಡೆಸುವುದರೊಂದಿಗೆ ಎಲ್ಲಾ ಪಾರಂಪರಿಕ ಕಟ್ಟಡಗಳಲ್ಲಿ ಅಗ್ನಿ ದುರಂತ ತಡೆಗೆ ಉಪಕರಣ ಅಳವಡಿ ಕೆಗೆ ಸೂಚನೆ ನೀಡಲು ಸೋಮವಾರ ನಡೆದ ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ರಚಿಸಲಾದ ತಜ್ಞರ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದ ಮೈಸೂರು ಪಾರಂಪರಿಕ ಪ್ರದೇಶ ಅಭಿ ವೃದ್ಧಿ ಮತ್ತು ಸಂರಕ್ಷಣೆಗಾಗಿ ರಚಿಸ ಲಾದ ತಜ್ಞರ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷರೂ ಆದ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪಾರಂಪರಿಕ ಕಟ್ಟಡ ಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಮಹತ್ವದ ನಿರ್ಣಯ ಅಂಗೀಕರಿಸಿದರು.
ದೊಡ್ಡಗಡಿಯಾರ ದುರಸ್ತಿ: ಸಭೆಯಲ್ಲಿ ಪಾಲ್ಗೊಂಡಿದ್ದ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಗಳು ದೊಡ್ಡಗಡಿಯಾರದ ಗೋಪುರ ಬಿರುಕು ಬಿಟ್ಟಿದ್ದು, ತ್ವರಿಗತಿಯಲ್ಲಿ ದುರಸ್ತಿ ಕಾಮಗಾರಿ ನಡೆಸದಿದ್ದರೆ ಅನಾ ಹುತ ಸಂಭವಿಸಬಹುದೆಂಬ ಅಭಿಪ್ರಾಯ ದೊಂದಿಗೆ ವಾಸ್ತವ ಸ್ಥಿತಿಗತಿಯನ್ನು ವಿವರಿಸಿದರು. ತಜ್ಞರ ಸಮಿತಿ, ಪಾಲಿಕೆ ವತಿಯಿಂದ ನಡೆಸಿರುವ ಪರಿಶೀಲನಾ ವರದಿ ಸಲ್ಲಿಸಿದರಲ್ಲದೆ, ಡ್ರೋನ್ ಮೂಲಕ ಚಿತ್ರೀಕರಣ ಮಾಡಿರುವ ಫೋಟೊ ಹಾಗೂ ವಿಡಿಯೋ ತುಣುಕನ್ನು ಪ್ರದರ್ಶಿ ಸಿದರು. ಈ ವೇಳೆ ಗೋಪುರದ ತುತ್ತ ತುದಿಯಲ್ಲಿ ಹಲವೆಡೆ ಬಿರುಕು ಬಿಟ್ಟಿರುವು ದಲ್ಲದೆ, ಗಂಟೆ ಕಟ್ಟಲಾಗಿರುವ ಸ್ಥಳದಲ್ಲಿ ಉಂಟಾದ ಒತ್ತಡದಿಂದ ಗೋಪುರದ ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಿ ರುವ ಸ್ಥಳದಲ್ಲಿಯೂ ಬಿರುಕುಗಳು ಉಂಟಾಗಿದ್ದು, ನೆಲಕ್ಕೆ ಬೀಳುವಂತೆ ವಿಡಿಯೋ ತುಣುಕಿನಲ್ಲಿ ಕಂಡು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಸ್ಥಳ ಪರಿಶೀಲನೆ ಮಾಡಿ ದುರಸ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿ ದರು. ಈ ಹಿನ್ನೆಲೆಯಲ್ಲಿ ಪಾರಂಪರಿಕ ಸಮಿತಿ ಸದಸ್ಯರು ಸಂಜೆ ದೊಡ್ಡಗಡಿಯಾ ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಯಲಕ್ಷ್ಮೀ ವಿಲಾಸ ಅರಮನೆ: ಮೈಸೂರು ಮಾನಸ ಗಂಗೋತ್ರಿ ಆವರಣ ದಲ್ಲಿರುವ ಜಯಲಕ್ಷ್ಮೀ ವಿಲಾಸ ಅರಮನೆ (ಜಾನಪದ ವಸ್ತು ಸಂಗ್ರಹಾಲಯ) ಸಂರಕ್ಷಣೆಗೆ ಮೇ 23ರಂದು ಮೈಸೂರು ವಿವಿ ಕುಲಪತಿಯೊಂದಿಗೆ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ದುರಸ್ತಿ ಕಾಮಗಾರಿ ಕುರಿತು ನಿರ್ಧರಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಇದೇ ವೇಳೆ ಬೊಮ್ಮಾಯಿ ಛತ್ರದ ಸಂರಕ್ಷಣೆಗೆ ಮುಜರಾಯಿ ತಹಶೀಲ್ದಾರ್ ಅವರೊಂದಿಗೆ ಜಂಟಿ ಪರಿಶೀಲನೆ, ಮೈಸೂರು ಮಹಾರಾಜ ಕಾಲೇಜಿನ ಕುಸಿದು ಬಿದ್ದಿರುವ ಕಾಂಪೌಂಡ್ ನಿರ್ಮಾಣ, ಸರ್ಕಾರಿ ಮನ್ಮಹಾರಾಜ ಸಂಸ್ಕøತ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ನೀಲನಕ್ಷೆ ಸಿದ್ಧಪಡಿಸುವುದು, ಪಾರಂಪರಿಕ ಕಟ್ಟಡಗಳಲ್ಲಿ ಅಗ್ನಿ ಅನಾ ಹುತ ತಡೆಗೆ ಉಪಕರಣ ಅಳವಡಿಕೆಗೆ ಕಟ್ಟಡಗಳ ಮಾಲೀಕರಿಗೆ ಸೂಚನೆ ನೀಡಲು ಸಭೆಯಲ್ಲಿ ಸಮ್ಮತಿಸಲಾಯಿತು. ಪಾಲಿಕೆ ವ್ಯಾಪ್ತಿಯ ಹಳೆಯ ಕಟ್ಟಡಗಳನ್ನು ಕೆಡವಲು ನಿರಪೇಕ್ಷಣಾ ಪತ್ರ ನೀಡುವ ಮುನ್ನ ಅದು ಪಾರಂಪರಿಕ ಕಟ್ಟಡವೋ ಅಥವಾ ಅಲ್ಲವೋ ಎನ್ನುವುದನ್ನು ಪರಿಶೀಲಿಸಿ ಪುರಾತತ್ವ ಇಲಾಖಗೆ ಮಾಹಿತಿ ನೀಡ ಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಪುರಾತತ್ವ, ಸಂಗ್ರಹಾಲಯ ಗಳು ಮತ್ತು ಪರಂಪರೆ ಇಲಾಖೆ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹೆಚ್.ಪಿ.ಜನಾರ್ಧನ್, ಮೈಸೂರು ಪಾರಂಪರಿಕ ಪ್ರದೇಶ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ರಚಿಸಲಾದ ತಜ್ಞರ ಸಮಿತಿ ಸದಸ್ಯರಾದ ಪ್ರೊ.ಎನ್.ಎಸ್. ರಂಗರಾಜು, ಮೇಜರ್ ಜನರಲ್ ಡಾ.ಎಸ್.ಜಿ.ಒಂಬತ್ಕೆರೆ, ಡಾ.ಚಂಪಾ ಅರಸ್, ಹೆಚ್.ಡಿ.ನಾಗೇಶ್, ಕಾವಾ ನಿವೃತ್ತ ಡೀನ್ ವಿ.ಎ.ದೇಶಪಾಂಡೆ, ಎನ್.ಆರ್.ಅಶೋಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಬಿಸಿ ಚರ್ಚೆಗೆ ಗ್ರಾಸವಾದ ರೈಲ್ವೆ ಕಟ್ಟಡದ ನವೀಕರಣ ಕಾಮಗಾರಿ
ಶತಮಾನ ಕಂಡಿರುವ ಕೇಂದ್ರ ರೈಲ್ವೆ ನಿಲ್ದಾಣ ಕಟ್ಟಡಕ್ಕೆ ಹೊಸ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ನವೀಕರಣ ಕಾಮಗಾರಿ ನಡೆಸುತ್ತಿರು ವುದು ಪಾರಂಪರಿಕ ತಜ್ಞರ ಸಮಿತಿ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಕೇಂದ್ರ ರೈಲ್ವೆ ನಿಲ್ದಾಣದ ಕಟ್ಟಡದ ನವೀಕರಣ ಕಾಮಗಾರಿಯನ್ನು ವಿರೋಧದ ನಡುವೆಯೂ ರೈಲ್ವೆ ಇಲಾಖೆ ಮುಂದುವರೆಸುತ್ತಿದೆ. ಪಾರಂಪರಿಕ ಕಟ್ಟಡದ ಸಂರಕ್ಷಣೆಯ ನಿಯಮವನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರದ ನಿಯಮವನ್ನು ಕೇಂದ್ರದ ನಿಯಮ ಸಡಿಲಿಸಬಹುದು ಎಂಬ ಲೆಕ್ಕಾಚಾರದಲ್ಲಿ ರೈಲ್ವೆ ಅಧಿಕಾರಿಗಳು ಮಾತನಾಡುತ್ತಿದ್ದಾರೆ. ಇದನ್ನು ತಡೆಗಟ್ಟದಿದ್ದರೆ ವಿವಿಧೆಡೆ ಇರುವ ಪಾರಂಪರಿಕ ಕಟ್ಟಡಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಹಾಳುಗೆಡವುತ್ತಾರೆ. ಅಲ್ಲದೆ, ನವೀಕರಣ ಕಾಮಗಾರಿ ನಿಲ್ಲಿಸುವಂತೆ ಜಿಲ್ಲಾಧಿಕಾರಿ, ನಗರ ಪಾಲಿಕೆ ಆಯುಕ್ತರು, ಪುರಾತತ್ವ ಇಲಾಖೆ ಆಯುಕ್ತರು ಪತ್ರ ಬರೆದಿದ್ದರೂ ಕಾಮಗಾರಿ ಮುಂದುವರೆಸಲಾಗುತ್ತಿದೆ ಎಂದು ವಿಷಾದಿಸಿದರು.
ಇದಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದ ರೈಲ್ವೆ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿ, ಆರಂಭವಾಗಿರುವ ಕಾಮಗಾರಿ ನಿಲ್ಲಿಸುವುದಕ್ಕೆ ರೈಲ್ವೆ ಕಾಯ್ದೆಯಡಿ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಕಟ್ಟಡದ ನವೀಕರಣ ಕಾಮಗಾರಿ ಮುಂದುವರೆಸುತ್ತಿದ್ದೇವೆ. ಈಗಾಗಲೇ ಕಾಮಗಾರಿ ಅರ್ಧದಷ್ಟು ನಡೆದಿದೆ ಎಂದು ಸ್ಪಷ್ಟನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮೇ.25ರಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳಿಂದ ಸ್ಥಳ ಪರಿಶೀಲನೆಗೆ ಸಮಯ ನಿಗದಿಯಾಗಿದೆ. ಅಂದು ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು.