ಮೈಸೂರು, ಜ.9- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪೂರಕ ಪರೀಕ್ಷೆಯನ್ನು ನಡೆಸಲು ಅಧಿಸೂಚನೆ ಹೊರಡಿಸಲಾಗಿದ್ದು, ಪರೀಕ್ಷಾ ಶುಲ್ಕ ಪಾವತಿ ದಿನಾಂಕವನ್ನು ಜ.31ರವರೆಗೆ ವಿಸ್ತರಿಸಲಾಗಿದೆ.
2001-02 ರಿಂದ 2010-11ನೇ ಶೈಕ್ಷಣಿಕ ಸಾಲಿನಲ್ಲಿ ಬಿಎ, ಬಿಕಾಂ ಮತ್ತು 2001-02 ರಿಂದ 2012-13ನೇ ಸಾಲಿನ ಎಂಎ, ಎಂಕಾಂ, ಎಂಬಿಎ, ಎಲ್‍ಎಲ್‍ಎಂ, ಎಂಬಿಎ(ಲಾ), ಎಂಟಿಎಂ, ಎಂಇಡಿ, ಎಂಲಿಬ್‍ಐಎಸ್ಸ್, ಎಂಎಸ್ಸಿ ಎಲ್ಲಾ ವಿಭಾಗಗಳು, ಬಿಲಿಬ್‍ಐಎಸ್ಸಿ, ಬಿಇಡಿ, ಬಿಇಡಿ(ವಿಶೇಷ ಶಿಕ್ಷಣ), ಎಲ್ಲಾ ಡಿಪ್ಲೋಮೊ, ಸರ್ಟಿಫಿಕೇಟ್, ಸ್ನಾತಕೋತ್ತರ ಡಿಪ್ಲೋಮೊ ಹಾಗೂ 2013-14 ಮತ್ತು 2014-15ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಎಲ್ಲಾ ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಅನುತ್ತೀರ್ಣರಾದ ಅಥವಾ ಪರೀಕ್ಷೆ ತೆಗೆದುಕೊಂಡಿಲ್ಲದ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. 2018-19ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ತೆಗೆದುಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ.
200 ರೂ. ದಂಡದೊಂದಿಗೆ ಪರೀಕ್ಷಾ ಪಾವತಿಸಲು ಜ.31ರವರೆಗೆ ದಿನಾಂಕ ವಿಸ್ತರಿಸಿದ್ದು, ಹೆಚ್ಚಿನ ಮಾಹಿತಿ ಗಾಗಿ ವಿವಿ ವೆಬ್‍ಸೈಟ್ www.ksoumysuru.ac.in ಹಾಗೂ ದೂ.ಸಂ-0821-2519947/2515405/25129948ಗೆ ಸಂಪರ್ಕಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.