ನಿಷ್ಠೆಯಿಂದ ಕರ್ತವ್ಯ ಪಾಲನೆ ಅಗತ್ಯ
ಚಾಮರಾಜನಗರ

ನಿಷ್ಠೆಯಿಂದ ಕರ್ತವ್ಯ ಪಾಲನೆ ಅಗತ್ಯ

November 27, 2018

ಗುಂಡ್ಲುಪೇಟೆ: ಪ್ರತಿಯೊಬ್ಬರೂ ಇತರರ ಮೂಲಹಕ್ಕು ಗಳಿಗೆ ಅಡ್ಡಿ ಮಾಡದೆ ತಮ್ಮ ಕರ್ತವ್ಯ ಗಳನ್ನು ನಿಷ್ಠೆಯಿಂದ ಪಾಲಿಸಿದರೆ ಸಂವಿಧಾನಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದು ಪ್ರಧಾನ ಸಿವಿಲ್ ಹಾಗೂ ಜೆಎಂ ಎಫ್‍ಸಿ ನ್ಯಾಯಾಧೀಶ ಜೆ.ಯೋಗೇಶ್ ಹೇಳಿದರು.

ಇಲ್ಲಿನ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಪಟ್ಟಣದ ಸರ್ಕಾರಿ ಬಾಲಕಿ ಯರ ವಿದ್ಯಾರ್ಥಿನಿಲಯದಲ್ಲಿ ಆಯೋಜಿ ಸಿದ್ದ ಸಂವಿಧಾನ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ನಡೆಸಿ ಅಮೇರಿಕಾದ ಸಂವಿ ಧಾನದ ಮೂಲ ಹಕ್ಕುಗಳು, ಜರ್ಮನಿಯ ತುರ್ತುಪರಿಸ್ಥಿತಿ, ಇಂಗ್ಲೆಂಡಿನ ಪಾರ್ಲಿ ಮೆಂಟ್ ಪದ್ದತಿ ಸೇರಿದಂತೆ ಅಲ್ಲಿನ ಪ್ರತಿಯೊಂದು ಉತ್ತಮ ಅಂಶಗಳನ್ನು ಎತ್ತಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದರು.

ಸಂವಿಧಾನವು ಭಾರತದ ಎಲ್ಲಾ ಪ್ರಜೆ ಗಳಿಗೂ ಸಮಾನ ಬದುಕುವ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ಇವುಗಳಿಗೆ ಧಕ್ಕೆಯುಂಟಾದರೆ ನ್ಯಾಯಾಲಯದ ಮೂಲಕ ಪರಿಹಾರ ಪಡೆಯ ಬಹುದಾ ಗಿದೆ. ಹಕ್ಕುಗಳಿಗಾಗಿ ಹೋರಾಟ ನಡೆಸುವ ಎಲ್ಲರೂ ತಮ್ಮ ಕರ್ತವ್ಯಗಳನ್ನು ಮರೆಯು ತ್ತಿದ್ದಾರೆ. ಆದ್ದರಿಂದ ಎಲ್ಲಾ ಧರ್ಮೀ ಯರೂ ತಮ್ಮ ಪವಿತ್ರಗ್ರಂಥ ಗಳನ್ನು ಪೂಜಿ ಸುವಂತೆ ಭಾರತೀಯರು ಸಂವಿಧಾನದ ನಿಯಮಗಳನ್ನು ಪಾಲಿಸಬೇಕು ಎಂದರು.

ಹಿರಿಯ ಸಿವಿಲ್ ಹಾಗೂ ಜೆಎಂ ಎಫ್‍ಸಿ ನ್ಯಾಯಾಧೀಶ ಚಂದ್ರಶೇಖರ ಪಿ.ದಿಡ್ಡಿ ಮಾತನಾಡಿ, ಜನರಿಂದ ಜನರಿಗಾಗಿ ರಚಿಸಿದ ಸಂವಿಧಾನದ ಅಗತ್ಯ ಹಾಗೂ ಉದ್ದೇಶಗಳ ಬಗ್ಗೆ ಹೇಳಿ ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ಬದುಕಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇ ಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ವಕೀಲರ ಸಂಘದ ಅಧ್ಯಕ್ಷ ಜಿ.ಬಿ.ನಂಜಪ್ಪ, ವಕೀಲ ರವಿಕಾಂತ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್ ಕುಮಾರ್, ವಕೀಲರಾದ ಬಿ.ಪಿ.ಪುಟ್ಟಸ್ವಾಮಿ, ಟಿಪ್ಪು, ಸಿದ್ದಯ್ಯ, ಬೀರೇಗೌಡ ಸೇರಿದಂತೆ ನಿಲಯದ ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Translate »