ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸ್ಪರ್ಧೆ
ಚಾಮರಾಜನಗರ

ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯುವ ಸಂಸತ್ ಸ್ಪರ್ಧೆ

November 27, 2018

ಚಾಮರಾಜನಗರ:  ವಿದ್ಯಾರ್ಥಿ ಗಳ ಸರ್ವತೋಮುಖ ಬೆಳವಣಿಗೆಗೆ ಎಷ್ಟೆಲ್ಲ ಅವಕಾಶಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಲ್ಪಿಸುತ್ತಿದೆ. ಅದರಲ್ಲಿ ವಿದ್ಯಾರ್ಥಿಗಳಿಗಾಗಿ ನಡೆಸುವ ಸಂಸತ್ ಸ್ಪರ್ಧೆಯು ಒಂದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ತಿಳಿಸಿದರು.

ನಗರದ ರಾಮಸಮುದ್ರದ ಬಾಲರ ಪಟ್ಟಣ ಶಾಲೆಯಲ್ಲಿ ಜಿಲ್ಲಾ ಪಂಚಾಯಿತ್, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಪೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಯುವ ಸಂಸತ್ ಸ್ಪರ್ಧೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿ ಯೊಂದು ವಿದ್ಯಾರ್ಥಿಯಲ್ಲಿ ಒಂದೊಂದು ಪ್ರತಿಭೆಗಳು ಇರುತ್ತದೆ. ಅಂತಹÀ ಸಮರ್ಥ್ಯಗಳಿರುವ ವಿದ್ಯಾರ್ಥಿಗಳನ್ನು ನಾವು ಹುಡುಕಬೇಕು ಎಂದು ತಿಳಿಸಿದರು.

ಕೆಲವು ವಿದ್ಯಾರ್ಥಿಗಳಿಗೆ ಮಾತನಾಡುವ, ಹಾಡುವ, ನೃತ್ಯಮಾಡುವ, ಆಟವಾಡುವ ಸಾಮಥ್ರ್ಯ ವಿರುತ್ತದೆ, ಇಂತಹ ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು. ಇಂದಿನ ಸ್ಪರ್ಧೆ ಯಲ್ಲಿ ಸದನದಲ್ಲಿ ಕಲಾಪಗಳು ನಡೆಯು ತ್ತದೆ ಅದರ ಅಣುಕು ಪ್ರದರ್ಶನವನ್ನು ಸ್ಫರ್ಧೆಯ ರೂಪದಲ್ಲಿ ತೋರಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ನಮ್ಮ ದೇಶದ ರಾಜಕೀಯದ ಬಗ್ಗೆ ಅರಿವು ಮೂಡುತ್ತದೆ. ಯಾವುದೇ ಕ್ಷೇತ್ರಗಳು ಅಷ್ಟು ಸುಲಭವಾಗಿ ದೊರೆಯುವುದಿಲ್ಲ ಆ ಕ್ಷೇತ್ರದಲ್ಲಿ ಸಾಧನೆ ಮಾಡಿರಬೇಕು. ರಾಜ್ಯ ಸರ್ಕಾರಗಳು ಇಂತಹ ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಒಳ್ಳೆಯ ಸರ್ಕಾರಗಳನ್ನು ನಡೆಸುವ ಪ್ರಜಾಪ್ರಭುತ್ವದ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಂಡಿದ್ದರೆ ಉತ್ತಮವಾಗಿರುತ್ತದೆ. ಇಂತಹ ಕಾರ್ಯ ಕ್ರಮಗಳಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ತಿಳಿಸಿದರು.

ಸಂಶೋಧನಾಧಿಕಾರಿ ಸಂಸಧೀಯ ವ್ಯವಹಾರಗಳ ಇಲಾಖೆ ಬೆಂಗಳೂರಿನ ವಿಜಯಕುಮಾರ್ ಮಾತನಾಡಿ, ದಿವಂಗತ ಮಾಜಿ ಪ್ರಧಾನ ಮಂತ್ರಿ ಚಂದ್ರಶೇಖರ್ ಅವರು ಈ ಕಾರ್ಯಕ್ರಮವನ್ನು ಜಾರಿಗೆ ತಂದರು. ಕಾರಣ ಶಾಲಾ ಹಂತದ ಮಕ್ಕಳಿಗೂ ಸಂಸತ್ ಅಂದರೇನು, ಸಂಸತ್ ಕಲಾಪಗಳು ಹೇಗೆ ನಡೆಯುತ್ತವೆ, ಎಂಬುದು ತಿಳಿಯಬೇಕು ಮತ್ತು ಜನಪ್ರತಿನಿಧಿಗಳು, ಮಂತ್ರಿಗಳು, ಸಾಮಾನ್ಯ ಪ್ರಜೆಗಳನ್ನು ಹೇಗೆ ನೋಡಿಕೊಳ್ಳಬೇಕು. ಮತ್ತು ಸಾಮಾನ್ಯ ಪ್ರಜೆಗಳು ಜನಪ್ರತಿನಿಧಿಗಳನ್ನು ಎನೆಲ್ಲಾ ಕೇಳಬಹುದು ಎಂಬ ಅಂಶ ಪ್ರತಿ ವಿದ್ಯಾರ್ಥಿ ಗಳು ತಿಳಿಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಮಲ್ಲಿ ಕಾರ್ಜುನ, ವಿಷಯ ಪರಿವೀಕ್ಷಕರಾದ ಬಸವರಾಜ ಓಲೇಕಾರ್, ಶಂಕರ್, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಉಪಸ್ಥಿತರಿದ್ದರು. ಯುವ ಸಂಸತ್ ಸ್ಪರ್ಧೆ ಯಲ್ಲಿ ಚಾಮರಾಜ ನಗರ, ಯಳಂದೂರು, ಗುಂಡ್ಲುಪೇಟೆ, ಕೊಳ್ಳೆಗಾಲ, ಹನೂರು ತಾಲ್ಲೂಕಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಗುಂಡ್ಲುಪೇಟೆ ಅದರ್ಶವಿದ್ಯಾರ್ಥಿ ಪ್ರಥಮ ಹಾಗೂ ಯಳಂದೂರಿನ ಜೆಎಸ್‍ಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ದ್ವೀತಿಯ ಬಹುಮಾನ ಪಡೆದಿದ್ದಾರೆ.

Translate »