ಮೈಸೂರು: ಕಳೆದ ಮಾರ್ಚ್ ತಿಂಗಳಲ್ಲೇ ಉದ್ಘಾಟನೆಗೊಂಡ ಮೈಸೂರಿನ ಕೆಆರ್‍ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿನ ಟ್ರಾಮಾ ಕೇರ್ ಸೆಂಟರ್‍ನ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳ ಕಾಲಾವಕಾಶ
ಬೇಕಾಗಿದೆ.
ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಕರೆಯ ಲ್ಪಡುವ ಕೃಷ್ಣರಾಜೇಂದ್ರ (ಕೆಆರ್ ಆಸ್ಪತ್ರೆ) ಆಸ್ಪತ್ರೆಯಲ್ಲಿ ಅಪಘಾತ ತುರ್ತು ಚಿಕಿತ್ಸೆಗೆ ಸುಸಜ್ಜಿತ ಸೌಲಭ್ಯವಿಲ್ಲದ ಕಾರಣ ಹಾಗೂ ಅಪಘಾತ ಗಾಯಾಳುಗಳಿಗೆ ಪ್ರಮುಖವಾಗಿ ತಲೆಗೆ ಆದ ಗಾಯ (Head Injuries) ಗಳಿಗೆ ಅಗತ್ಯವಿರುವ ಶಸ್ತ್ರಚಿಕಿತ್ಸೆಗಳನ್ನು ನೀಡಿ ಪ್ರಾಣ ಉಳಿಸುವ ಸಲುವಾಗಿ ಈ ಹಿಂದಿನ ಸರ್ಕಾರ ಪ್ರತ್ಯೇಕವಾದ ಟ್ರಾಮಾ ಕೇರ್ ಸೆಂಟರ್ ಯೋಜನೆಯನ್ನು ಕೈಗೆತ್ತಿಕೊಂಡಿತ್ತು.
ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ನಿರ್ಮಿಸಲುದ್ದೇಶಿಸಿದ್ದ ಟ್ರಾಮಾ ಕೇರ್ ಸೆಂಟರ್‍ಗೆ ಕಾಂಗ್ರೆಸ್ ಸರ್ಕಾರವು ಬಜೆಟ್ ನಲ್ಲಿ 25 ಕೋಟಿ ರೂ.ಗಳನ್ನು ಒದಗಿಸಿತ್ತಾ ದರೂ, ನೆಲ ಮಹಡಿಯೊಂದನ್ನು ಹೆಚ್ಚು ವರಿಯಾಗಿ ಸೇರಿಸಿ ಅಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲು ನಿರ್ಧರಿಸಿದ್ದರಿಂದಾಗಿ ಇದೀಗ ಟ್ರಾಮಾ ಕೇರ್ ಸೆಂಟರ್ ಕಟ್ಟ ಡದ ವೆಚ್ಚವು 33 ಕೋಟಿ ರೂ.ಗಳಾಗಿದೆ.
ಗ್ಲೋಬಲ್ ಟೆಂಡರ್ ಮೂಲಕ ಆಂಧ್ರ ಪ್ರದೇಶ ಮೂಲದ ಹಯಗ್ರೀವ ಕನ್‍ಸ್ಟ್ರಕ್ಷನ್ ಕಂಪನಿಯು ಕಟ್ಟಡದ ಕಾಮಗಾರಿಯನ್ನು 2016ರ ಏಪ್ರಿಲ್ ತಿಂಗಳಲ್ಲಿ ಆರಂಭಿಸಿತ್ತು. ಆದರೆ ಕಾಮಗಾರಿ ಪ್ರಗತಿಯಲ್ಲಿರು ವಾಗಲೇ 2018ರ ಮಾರ್ಚ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ರಾಮಾ ಕೇರ್ ಸೆಂಟರ್ ಉದ್ಘಾ ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಉದ್ಘಾಟನೆಗೊಂಡು 8 ತಿಂಗಳು ಕಳೆದರೂ ಲೋಕೋಪಯೋಗಿ ಇಲಾಖೆ ಅಧೀನ ದಲ್ಲಿ ನಡೆಯುತ್ತಿರುವ ಕಾಮಗಾರಿ ಈಗ ಶೇ.90 ರಷ್ಟು ಪೂರ್ಣಗೊಂಡಿದೆ. ಉಳಿದ ಶೇ.10 ರಷ್ಟು ಕೆಲಸ ಪೂರ್ಣಗೊಳ್ಳಲು ಇನ್ನೂ 3 ತಿಂಗಳು ಬೇಕು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
33 ಕೋಟಿ ರೂ. ವೆಚ್ಚದ ಟ್ರಾಮಾ ಕೇರ್ ಸೆಂಟರ್ ಕಟ್ಟಡವು ನೆಲಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿ ಸೇರಿ ಒಟ್ಟು 14,770 ಚದರ ಮೀಟರ್ ವಿಸ್ತಾರ ವಾಗಿದೆ. ನೆಲಮಹಡಿಯು ಸಂಪೂರ್ಣವಾಗಿ ವಾಹನ ನಿಲುಗಡೆಗೆ ಮೀಸಲಿರಿಸಲಾಗಿದೆ. 105 ಹಾಸಿಗೆಗಳ ಸಾಮಥ್ರ್ಯವಿರುವ ಕಟ್ಟಡ ದಲ್ಲಿ 40 ಐಸಿಯು ಕೊಠಡಿ, 7 ವಿಶೇಷ ವಾರ್ಡ್‍ಗಳು, 2 ಶಸ್ತ್ರಚಿಕಿತ್ಸಾ (ಔಠಿeಡಿಚಿಣioಟಿ ಖಿheಚಿಣಡಿe) ಕೊಠಡಿಗಳು, 5 ಮಾಡ್ಯು ಲಾರ್ ಆಪರೇಷನ್ ಥಿಯೇಟರ್‍ಗಳು, ಅಡುಗೆ ಕೋಣೆ, ಡೈನಿಂಗ್ ಹಾಲ್, ಎಲೆಕ್ಟ್ರಿಕಲ್ ರೂಂ, ಸ್ಟೋರ್ ರೂಂ, ಲಾಂಡ್ರಿ ರೂಂ ಹಾಗೂ ಸೆಂಟ್ರಲೈಸ್ಡ್ ಸ್ಟೆರಲೈಸ್ಡ್ ಸಪ್ಲೈ ಸೆಂಟರ್ (ಅSSಅ) ವ್ಯವಸ್ಥೆಗಳಿವೆ. ಕಟ್ಟಡದ ಸಿವಿಲ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆಯಾದರೂ 3.5 ಕೋಟಿ ರೂ. ವೆಚ್ಚದ ಮಾಡ್ಯುಲಾರ್ ಆಪ ರೇಷನ್ ಥಿಯೇಟರ್ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯು ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಂಡಿದೆ. 3 ದಿನದೊಳಗೆ ಅದರ ವಿನ್ಯಾಸ, ಡ್ರಾಯಿಂಗ್‍ನೊಂದಿಗೆ ಏಜೆನ್ಸಿಯಿಂದ ವರದಿ ಕೈಸೇರಲಿದ್ದು, ಇನ್ನು ಮೂರು ತಿಂಗಳೊಳಗೆ ಮಾಡ್ಯುಲಾರ್ ಓಟಿ ಕೆಲಸ ಮುಗಿದ ನಂತರ ಕಟ್ಟಡವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಒಒಅ & ಖI)ಗೆ ಹಸ್ತಾಂತರಿ ಸುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.