ಚಾಮರಾಜನಗರ: ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ಟೈಫಂಡರಿ ಆಧಾರದಲ್ಲಿ ಶುಶ್ರೂಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಮ್ಮನ್ನೇ ಸೇವೆಯಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಶುಶ್ರೂಷಕರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶುಶ್ರೂಷಕರಿಗೆ ಬಹುಜನ ವಿದ್ಯಾರ್ಥಿ ಸಂಘ ಹಾಗೂ ಜಿಲ್ಲಾ ರೈತ ಸಂಘ ಬೆಂಬಲ ಸೂಚಿಸಿದ್ದರು.
ಇಲ್ಲಿನ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಆರಂಭಿಸಿದ ಶುಶ್ರೂಷಕರು (ನರ್ಸ್‍ಗಳು), ಬಹುಜನ ವಿದ್ಯಾರ್ಥಿ ಸಂಘ ಹಾಗೂ ರೈತ ಸಂಘದ ಕಾರ್ಯಕರ್ತರು, ಮೆಡಿಕಲ್ ಕಾಲೇಜಿನ ಡೀನ್ ಹಾಗೂ ನಿರ್ದೇಶಕ ಡಾ. ರಾಜೇಂದ್ರ, ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮಂಜುಳಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಸ್ಪತ್ರೆಯ ಎದುರಿನ ಜೋಡಿ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು. ನಗರ ಜಿಲ್ಲಾಡ ಳಿತ ಭವನಕ್ಕೆ ತೆರಳಿ ಧರಣಿ ನಡೆಸಿದರು.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಗಳ ಸಂಸ್ಥೆಯು ಪ್ರಾರಂಭವಾಗುವ ಸಂದರ್ಭ ದಲ್ಲಿ ನರ್ಸ್‍ಗಳ ಅವಶ್ಯಕತೆ ಇದ್ದಾಗ 60 ನರ್ಸ್‍ಗಳನ್ನು ಸ್ಪೈಫಂಡರಿ ಆಧಾರದಲ್ಲಿ ತೆಗೆದುಕೊಳ್ಳಲಾಗಿತ್ತು. ನಾವು 3 ವರ್ಷ ಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನಮ್ಮನ್ನು ಪ್ರತಿ 6 ತಿಂಗಳಂತೆ ಮುಂದುವ ರೆಸಲಾಗಿತ್ತು. ಆದರೆ ಈಗ ತಮ್ಮನ್ನು ಏಕಾಏಕಿ ಕೈಬಿಟ್ಟು, ಹೊಸದಾಗಿ ನರ್ಸ್‍ಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದರಿಂದ ನಮಗೆ ಅನ್ಯಾಯ ಆಗುತ್ತಿದೆ. ಹೊಸ ನರ್ಸ್ ಗಳನ್ನು ನೇಮಕ ಮಾಡಿಕೊಳ್ಳುವುದರ ಹಿಂದೆ ಹಣ ಗಳಿಸುವ ಹುನ್ನಾರ ಅಡಗಿದೆ ಎಂದು ಪ್ರತಿಭಟನಾಕಾರರು ದೂರಿದರು. ನಮ್ಮನ್ನೇ ಕರ್ತವ್ಯದಲ್ಲಿ ಮುಂದುವರೆಸಬೇಕು. ಇಲ್ಲದಿದ್ದಲ್ಲಿ ನಿರಂತರವಾಗಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನರ್ಸ್‍ಗಳಾದ ಎನ್. ಕುಮಾರ್, ರಾಜೇಶ್, ಬಂಗಾರಸ್ವಾಮಿ, ಮಹೇಶ್, ಗೀತಾ, ವಸಂತಮ್ಮ, ಮಹದೇವಮ್ಮ, ಬಿ.ವಿ.ಎಸ್ ಜಿಲ್ಲಾ ಸಂಯೋಜಕ ಪರ್ವತರಾಜ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೆಬ್ಬಸೂರು ಬಸವಣ್ಣ, ಜ್ಯೋತಿಗೌಡನ ಪುರ ಸಿದ್ದ ರಾಜು, ಕದಂಬ ಸೇನೆ ಅಧ್ಯಕ್ಷ ಅಂಬರೀಶ್, ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ ಅಧ್ಯಕ್ಷ ಸುರೇಶ್, ಮುಖಂಡರಾದ ಬ.ಮ. ಕೃಷ್ಣ ಮೂರ್ತಿ, ಪ್ರದೀಪ, ಮಹದೇವಪ್ರಸಾದ್, ರಂಗರಾಜು, ಪ್ರವೀಣ್, ಕಿರಣ್, ತೀರ್ಥ ಪ್ರಸಾದ್, ಎಂ. ಮಹದೇವನಾಯಕ, ಬ್ಯಾಡ ಮೂಡ್ಲು ಬಸವಣ್ಣ, ಸಿದ್ದರಾಜು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.