ಯಳಂದೂರು: ‘ಸಿರಿಧಾನ್ಯ ಬೆಳೆಯುವ ಕಡೆ ರೈತರು ಹೆಚ್ಚು ಗಮನ ನೀಡಬೇಕು’ ಎಂದು ರೈತ ಸಂಘದ ಜಿಲ್ಲಾ ಧ್ಯಕ್ಷ ಹೊನ್ನೂರು ಪ್ರಕಾಶ್ ಸಲಹೆ ನೀಡಿದರು.
ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯಂದ ನಡೆದ ಸಿರಿಧಾನ್ಯ ಬೆಳೆಗಳ ಉತ್ಪಾ ದನಾ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. ರಾಗಿ, ನವಣೆ, ಸಜ್ಜೆ, ಹಾರಕ ಸೇರಿದಂತೆ ಹಲವು ಸಿರಿಧಾನ್ಯ ಬೆಳೆಗಳು ಅಲ್ಪ ನೀರು, ಕಡಿಮೆ ಬಂಡವಾಳ, ಕಡಿಮೆ ಅವಧಿ ಹಾಗೂ ಕಡಿಮೆ ಶ್ರಮದಿಂದ ಬೆಳೆಯ ಬಹುದಾಗಿದೆ ಎಂದರು.
ಸಿರಿಧಾನ್ಯ ಸೇವನೆಯಿಂದ ಆರೋಗ್ಯ ವಂತ ಜೀವನ ನಡೆಸಬಹುದು. ಹಲವು ಕಾಯಿಲೆಯಿಂದ ದೂರವಿರಬಹುದು. ಇದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಮತ್ತಷ್ಟು ಬೇಡಿಕೆ ಹೆಚ್ಚಾ ಗಲಿದೆ. ರೈತರೂ ಕೂಡ ಇದರ ಸೇವನೆ ಯನ್ನು ಮಾಡುವ ಮೂಲಕ ಆರೋಗ್ಯವಂತರಾಗಬೇಕು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಅನಿತಾ, ಮುಖಂಡ ಪಟೇಲ್ ಪುಟ್ಟಮಲ್ಲಪ್ಪ, ಸಿಬ್ಬಂದಿ ಪ್ರವೀಣ್, ರಾಜೇಶ್ ಹಾಜರಿದ್ದರು.