ಬಜೆಟ್‍ನಲ್ಲಿ ರೈತರ ಸಾಲಮನ್ನಾ ಗೊಂದಲಕ್ಕೆ ತೆರೆ
ಮಂಡ್ಯ

ಬಜೆಟ್‍ನಲ್ಲಿ ರೈತರ ಸಾಲಮನ್ನಾ ಗೊಂದಲಕ್ಕೆ ತೆರೆ

June 14, 2018
  • ರಾಜ್ಯದಲ್ಲಿ ಪ್ಲಾನಿಂಗ್ ಕಮೀಷನ್ ಉತ್ತಮಗೊಳಿಸಲು ಯೋಜನೆ
  • ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜಾರಿಗೆ ಚಿಂತನೆ: ಹೆಚ್‍ಡಿಕೆ

ಆದಿಚುಂಚನಗಿರಿ ಶ್ರೀಕ್ಷೇತ್ರ(ನಾಗ ಮಂಗಲ) : ‘ರೈತರ ಸಾಲಮನ್ನಾ ವಿಚಾರದಲ್ಲಿ ಗೊಂದಲ ಬೇಡ. ಈಗಾಗಲೇ ಬ್ಯಾಂಕ್ ಅಧಿಕಾರಿಗಳ ಜೊತೆ ಚರ್ಚಿಸ ಲಾಗಿದ್ದು, ಬಜೆಟ್‍ನಲ್ಲಿ ಯಾವ ಪ್ರಮಾಣದ ಸಾಲಮನ್ನಾ ಮಾಡಲಾಗುವುದು ಎಂಬು ದರ ಬಗ್ಗೆ ತಿಳಿಸುತ್ತೇನೆ’ ಎಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ನಾಗಮಂಗಲ ತಾಲೂಕಿನ ಆದಿಚುಂಚನ ಗಿರಿ ಕ್ಷೇತ್ರದ ಶ್ರೀಕಾಲಭೈರವೇಶ್ವರಸ್ವಾಮಿಗೆ ಅಮಾವಾಸ್ಯೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿ ಗಾರರೊಂದಿಗೆ ಅವರು ಮಾತನಾಡಿದರು.ಸಾಲಮನ್ನಾ ವಿಷಯದ ನಿರ್ಣಯದಲ್ಲಿ ಬದಲಾಗುವ ಪ್ರಶ್ನೆಯೇ ಇಲ್ಲ. ಯಾರಿಗೂ, ಯಾವ ಆತಂಕವೂ ಬೇಡ. ನನ್ನ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಆತ್ಮಹತ್ಯೆ ಮಾಡಿಕೊಂಡರೆ ನನ್ನ ಕೆಲಸ ಮಾಡುವ ಸಾಮಥ್ರ್ಯ ಕುಗ್ಗುತ್ತದೆ. ಸಾಲ ಮನ್ನಾ ಮಾಡುವ ಬಗ್ಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಈಗಾ ಗಲೇ ಚರ್ಚೆ ನಡೆಸಿದ್ದು, ಯಾವ ರೀತಿ ಸಾಲ ಮನ್ನಾ ಮಾಡಬೇಕು ಎಂಬ ಬಗ್ಗೆ ರಾಜ್ಯ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮೋದಿಗಿಂತ ಮುಂದೆ: ನನಗೆ ನನ್ನ ವೈಯಕ್ತಿಕ ಆರೋಗ್ಯಕ್ಕಿಂತ ರಾಜ್ಯ ಅಭಿ ವೃದ್ಧಿಯ ಆರೋಗ್ಯ ಮುಖ್ಯ. ಅಭಿವೃದ್ಧಿ ವಿಚಾರ ದಲ್ಲಿ ಮೋದಿಗಿಂತ ಮುಂದಿದ್ದೇನೆ. ಈ ವಿಚಾರದಲ್ಲಿ ಮೋದಿಯಿಂದ ಪಾಠ ಕಲಿಯುವ ಅವಶ್ಯಕತೆಯಿಲ್ಲ. ನರೇಂದ್ರ ಮೋದಿ ಹೊಸದಾಗಿ ನೀತಿ ಆಯೋಗ ಮಾಡಿದ್ದಾರೆ. ನಾನು ರಾಜ್ಯದಲ್ಲಿ ಉತ್ತಮ ಕೆಲಸ ಮಾಡಲು ಪ್ಲಾನಿಂಗ್ ಕಮಿಷನ್ ಉತ್ತಮಗೊಳಿಸುವ ಯೋಜನೆ ರೂಪಿಸಿ ದ್ದೇನೆ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರಕ್ಕೆ ಜನರ ಮನ್ನಣೆ: ಜಯನಗರ ಚುನಾವಣೆಯ ಫಲಿತಾಂಶ ಮೊದಲೇ ನಿರೀಕ್ಷೆ ಇತ್ತು. ಬಿಜೆಪಿ ಅವರು ಸಮ್ಮಿಶ್ರ ಸರ್ಕಾರಕ್ಕೆ ಜನ ಬೆಂಬಲವಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದರು, ಸಮ್ಮಿಶ್ರ ಸರ್ಕಾರವನ್ನು ರಾಜ್ಯದ ಜನರು ಒಪ್ಪಿ ತೀರ್ಮಾನಿಸಿದ್ದಾರೆ ಎಂಬುದು ಇಂದಿನ ತೀರ್ಪಿನಿಂದ ಸಾಬೀತಾಗಿದೆ ಎಂದರು.ನಾಡಿನ ಜನತೆಯ ನೆಮ್ಮದಿಗಾಗಿ ಪೂಜೆ: ನಾನು ಅಧಿಕಾರ ಉಳಿಸಿಕೊಳ್ಳಲು ಪೂಜೆ ಮಾಡುತ್ತಿಲ್ಲ. ಬದಲಿಗೆ ನಾಡಿನ ಸಮಸ್ತ ಜನತೆಯ ನೆಮ್ಮದಿಗಾಗಿ ಪೂಜೆ ಸಲ್ಲಿಸು ತ್ತಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಸಹಕಾರದೊಂದಿಗೆ ನಾನು ಮುಖ್ಯಮಂತ್ರಿಯಾಗಲು ಶ್ರೀಕಾಲಭೈರವೇಶ್ವರ ಸ್ವಾಮಿಯ ಅನುಗ್ರಹವೇ ಕಾರಣ. ಹಲವು ತಿಂಗಳಿಂದ ಅಮಾವಾಸ್ಯೆ ಪೂಜೆಗೆ ಬಂದು ಸ್ವಾಮಿಯ ದರ್ಶನ ಪಡೆದು ಹೋಗುತ್ತಿ ದ್ದೇನೆ. ನಿರ್ಮಲಾನಂದನಾಥ ಸಾಮೀಜಿ ಅವರೇ ಪೂಜೆಯ ಕಾರ್ಯ ನಡೆಸುತ್ತಿ ದ್ದಾರೆ. ಈ ರೀತಿಯ ವಿಶೇಷ ಪೂಜೆ ಬೇರೆ ಕಡೆ ನೋಡಲು ಸಾಧ್ಯವಿಲ್ಲ ಎಂದರು.

ಉತ್ತಮ ಮಳೆ: ಆಧುನಿಕತೆ ಮತ್ತು ತಂತ್ರ ಜ್ಞಾನ ಎಷ್ಟು ಮುಂದುವರೆದರೂ, ಪ್ರಕೃತಿಯ ಸಹಕಾರ ಅತ್ಯಗತ್ಯ. ನಾನು ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನ ದಿಂದಲೂ ಮುಂಗಾರು ಮಳೆ ರಾಜ್ಯಾದ್ಯಂತ ಬೀಳುತ್ತಿದೆ. ಇದರಿಂದ ಕೆಲ ಭಾಗಗಳಲ್ಲಿ ಅತಿವೃಷ್ಠಿಯೂ ಆಗಿದೆ. ಬಹಳ ವರ್ಷಗಳ ನಂತರ ಬೀಳುತ್ತಿರುವ ಮಳೆಯಿಂದ ಮಂಡ್ಯ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ತಿಳಿಸಿದರು.

ಭತ್ತದ ನಾಟಿ ಸಮಯದಲ್ಲಿ ನಾನು ಸಹ ಮಂಡ್ಯದ ರೈತರೊಂದಿಗೆ ನಾಟಿ ಮಾಡುವ ಕಾಯಕದಲ್ಲಿ ಪಾಲ್ಗೊಳ್ಳುತ್ತೇನೆ. ಇಸ್ರೇಲ್ ಮಾದರಿಯಲ್ಲಿ ಕೃಷಿ ಪದ್ಧತಿಯನ್ನು ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಎರಡು ಕಡೆ ಗಳಲ್ಲಿ ಜಾರಿಗೊಳಿಸಲು ಚಿಂತಿಸಲಾಗಿದೆ ಎಂದರು. ಸುದ್ದಿಗೊಷ್ಠಿಯಲ್ಲಿ ಶಾಸಕ ಸುರೇಶ್ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಇತರರು ಇದ್ದರು.

ಕಳ್ಳರ ಕೈಚಳಕ
ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರ ಜೇಬಿಗೆ ಕತ್ತರಿ ಹಾಕುವ ಮೂಲಕ ಕಳ್ಳರು ಕೈಚಳಕ ತೋರಿದ ಘಟನೆಯೂ ಆದಿಚುಂಚನಗಿರಿಯಲ್ಲಿ ನಡೆಯಿತು. ಜೆಡಿಎಸ್ ಕಾರ್ಯಕರ್ತ ಪಾಳ್ಯ ರಘು ಜೇಬಿನಲ್ಲಿದ್ದ 40 ಸಾವಿರ, ಬೆಳ್ಳೂರು ನಿವಾಸಿ ಫಣ ಎಂಬುವವರ 16 ಸಾವಿರ ರೂಗಳನ್ನು ಕಳ್ಳರು ಎಗರಿಸಿದ್ದಾರೆ. ಈ ಸಂಬಂಧ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸಿಎಸ್‍ಪಿ

ಸಣ್ಣ ನೀರಾವರಿ ಇಲಾಖೆಯ ಖಾತೆ ನೀಡಿರುವ ಬಗ್ಗೆ ನನಗೆ ಯಾವುದೇ ಭಿನ್ನಾಭಿಪ್ರಾಯ ವಿಲ್ಲ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ 7 ಜನ ಶಾಸಕರು ಮತ್ತು 3 ಜನ ವಿಧಾನ ಪರಿಷತ್ ಸದಸ್ಯರೂ ಸೇರಿ ಒಟ್ಟು 10 ಜನರಿದ್ದೇವೆ. ಆದರೂ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ನಾವೆಲ್ಲರೂ ತಲೆ ತಗ್ಗಿಸಬೇಕು. ಈ ಘಟನೆ ಮರೆ ಯುವ ರೀತಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜಿಲ್ಲೆಗೆ ವಿಶೇಷ ಕಾರ್ಯಕ್ರಮ ನೀಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿಪಟ್ಟ ಯಾರಿಗೆ ಕೊಟ್ಟರು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಉಸ್ತುವಾರಿ ಪಟ್ಟಕ್ಕಾಗಿ ಮುನಿಸುಕೊಂಡಿಲ್ಲ. ಎರಡು ದಿನ ದೇವಾಲಯಕ್ಕೆ ಹೋಗಿದ್ದೆ. ಹಾಗಾಗಿ, ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಡಿ.ಸಿ.ತಮ್ಮಣ್ಣಗೆ ಜಿಲ್ಲಾ ಉಸ್ತುವಾರಿ ಕೊಟ್ಟರೆ ಅವರು ಅದನ್ನು ನಿಭಾಹಿಸಲು ಸಮರ್ಥರಿಲ್ಲವೇ? ಎಂದು ಪ್ರಶ್ನಿಸಿದ ಅವರು, ಪಕ್ಷ ಯಾರಿಗೆ ಉಸ್ತುವಾರಿ ನೀಡಿದರು ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಪ್ಪಿದ ಅನಾಹುತ

ಸಿ.ಎಂ. ಆಗಮನದ ಹಿನ್ನೆಲೆಯಲ್ಲಿ, ದೇವಸ್ಥಾನದ ಮುಂಭಾಗ ಬಣ್ಣ-ಬಣ್ಣದ ಆಕರ್ಷಕ ಛತ್ರಿಗಳಿಂದ ಸ್ವಾಗತ ಮಂಟಪ ಹಾಕಲಾಗಿತ್ತು. ಆದರೆ, ಮಧ್ಯಾಹ್ನದ ವೇಳೆ ಬೀಸಿದ ಗಾಳಿಯಿಂದ ಮಂಟಪ ನೆಲಕ್ಕುರುಳಿತು. ಈ ವೇಳೆ ಮಂಟಪದ ಕೆಳಗೆ ಯಾರೂ ಇರಲಿಲ್ಲ. ಇದರಿಂದ ಅನಾಹುತವೊಂದು ತಪ್ಪಿದೆ. ಆದರೆ, ಮಂಟಪದ ಸನಿಹದಲ್ಲಿದ್ದ ಪತ್ರಕರ್ತ ಪುರುಷೋತ್ತಮ್ ಅವರ ಕಾಲಿಗೆ ಪೆಟ್ಟಾಯಿತು. ತಕ್ಷಣ ಅವರನ್ನು ತುರ್ತುವಾಹನದ ಮೂಲಕ ಬಿ.ಜಿ.ನಗರದ ಏಮ್ಸ್ ಆಸ್ಪತ್ರೆಗೆ ದಾಖಲಿಸಿಲಾಯಿತು.

Translate »