ಫಾಸ್ಟ್‍ಫುಡ್ ಅಂಗಡಿ ಮಾಲೀಕ ನಾಪತ್ತೆ
ಮೈಸೂರು

ಫಾಸ್ಟ್‍ಫುಡ್ ಅಂಗಡಿ ಮಾಲೀಕ ನಾಪತ್ತೆ

May 12, 2019

ಮೈಸೂರು: ಫಾಸ್ಟ್‍ಫುಡ್ ಅಂಗಡಿ ಮಾಲೀಕನೋರ್ವ ನಾಪತ್ತೆ ಯಾದ ಬಗ್ಗೆ ಮೈಸೂರಿನ ಇಟ್ಟಿಗೆಗೂಡಿನಿಂದ ವರದಿಯಾ ಗಿದೆ. ಇಟ್ಟಿಗೆಗೂಡಿನಲ್ಲಿ ಫಾಸ್ಟ್‍ಫುಡ್ ಅಂಗಡಿ ನಡೆಸುತ್ತಿದ್ದ ಗಿರೀಶ್(27) ನಾಪತ್ತೆಯಾದವರಾಗಿದ್ದು, ಇವರು ಇಂದಿರಾ ನಗರದ ಭೋಗ್ಯದ ಮನೆಯಲ್ಲಿ ವಾಸವಿದ್ದರು. 2 ತಿಂಗಳ ಹಿಂದೆ ತನ್ನ ಸ್ವಂತ ಊರಿಗೆ ಹೋಗಿದ್ದ ಈತ 3 ದಿನ ಅಲ್ಲಿ ಇದ್ದು, ಮೈಸೂರಿಗೆ ತೆರಳುವುದಾಗಿ ಹೇಳಿ ವಾಪಸಾಗಿದ್ದ.

ಇವರ ಸಹೋದರ ಮೇ 9ರಂದು ಇಂದಿರಾನಗರ ಮನೆಗೆ ಬಂದು ನೋಡಿದಾಗ ಮನೆ ಬೀಗ ಹಾಕಿತ್ತು. ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈತ ಎಲ್ಲಿದ್ದಾನೆ ಎಂದು ತಿಳಿಯುತ್ತಿಲ್ಲ ಎಂದು ಅವರ ಸಹೋದರ ನಜರ್‍ಬಾದ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈತನ ಬಗ್ಗೆ ಮಾಹಿತಿ ಇರುವವರು ನಜರ್‍ಬಾದ್ ಪೊಲೀಸ್ ಠಾಣೆ ದೂರವಾಣ ಸಂಖ್ಯೆ 0821-2418508 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2418399 ಅನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.

Translate »