ಪತ್ನಿ ಜೊತೆ ಜಗಳ: ಪಾನಮತ್ತನಾಗಿ ಮೊಬೈಲ್ ಟವರ್ ಹತ್ತಿದ ಭೂಪ
ಚಾಮರಾಜನಗರ

ಪತ್ನಿ ಜೊತೆ ಜಗಳ: ಪಾನಮತ್ತನಾಗಿ ಮೊಬೈಲ್ ಟವರ್ ಹತ್ತಿದ ಭೂಪ

November 4, 2018

ಚಾಮರಾಜನಗರ: ಪತ್ನಿ ಜೊತೆ ಜಗಳವಾಡಿ ಪಾನಮತ್ತನಾಗಿ ಮೊಬೈಲ್ ಟವರ್ ಏರಿದ್ದ ವ್ಯಕ್ತಿಯೋರ್ವ ನನ್ನು ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಹೀರಾಶೆಟ್ಟಿ ಎಂಬುವವರ ಪುತ್ರ ಮಹೇಶ್(30) ಮೊಬೈಲ್ ಟವರ್ ಏರಿದವನು.

ವಿವರ: ಮಹೇಶ ಪತ್ನಿ ಜಯಲಕ್ಷ್ಮಿ ಜೊತೆ ಜಗಳವಾಡಿದ್ದಾನೆ. ಇದರಿಂದ ಬೇಸ ರಗೊಂಡ ಆಕೆ ತವರು ಮನೆಗೆ ಹೋಗಿದ್ದಳು ಎನ್ನಲಾಗಿದೆ. ಹೀಗಾಗಿ ಮಹೇಶ ಪಾನಮತ್ತನಾಗಿ ಗ್ರಾಮದಿಂದ ಬಿಸಿಲ ವಾಡಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಮೊಬೈಲ್ ಟವರ್ ಹತ್ತಿ ಕೆಳಗೆ ನೋಡಿ ಭಯಗೊಂಡು ಕಿರುಚಿಕೊಂಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯರು ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ಠಾಣೆ ಸಿಬ್ಬಂದಿಗೆ ಕರೆ ಮಾಡಿ ವಿಷಯ ಮುಟ್ಟಿಸಿ ದ್ದಾರೆ. ರಾಮಸಮುದ್ರ ಠಾಣೆ ಎಸ್‍ಐ ಪುಟ್ಟಸ್ವಾಮಿ ಹಾಗೂ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಕೆ.ಪಿ.ನವೀನ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಹೇಶನನ್ನು ಟವರ್‍ನಿಂದ ಕೆಳಗಿಳಿಯುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಆತ ಕೆಳಕ್ಕೆ ಇಳಿಯಲಿಲ್ಲ. ಬದಲಿಗೆ ಸೂಕ್ತ ರಕ್ಷಣಾ ಕ್ರಮ ಕೈಗೊಂಡ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ವತಃ ತಾವೇ ಟವರ್ ಹತ್ತಿ ಮನವೊಲಿಸಲು ಪ್ರಯತ್ನಿಸಿದರಾದರೂ, ಆತ ಕೆಳಗಿಳಿಯಲು ಒಪ್ಪಲಿಲ್ಲ. ಬದಲಿಗೆ ಮಹೇಶ್ ತನ್ನ ಪತ್ನಿ ಜೊತೆ ಮಾತನಾಡ ಬೇಕೆನ್ನುವ ಬೇಡಿಕೆ ಇಟ್ಟ ಎನ್ನಲಾಗಿದೆ. ಇದಕ್ಕೆ ಸಮ್ಮತಿಸಿದ ಅಧಿಕಾರಿಗಳು ಮಹೇಶನ ಪತ್ನಿ ಜಯಲಕ್ಷ್ಮಿಯನ್ನು ಸ್ಥಳಕ್ಕೆ ಕೆರೆಸಿದರು. ಬಳಿಕ ಮಹೇಶನ ಸೊಂಟಕ್ಕೆ ಹಗ್ಗ ಕಟ್ಟಿ ಕೆಳಕ್ಕೆ ಇಳಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು.

ಕಾರ್ಯಾಚರಣೆಯಲ್ಲಿ ರಾಮಸಮುದ್ರ ಠಾಣೆ ಎಸ್‍ಐ ಬಿ.ಪುಟ್ಟಸ್ವಾಮಿ, ಅಗ್ನಿಶಾ ಮಕ ಠಾಣೆ ಅಧಿಕಾರಿ ಕೆ.ಪಿ.ನವೀನ್ ಕುಮಾರ್, ಸಿಬ್ಬಂದಿ ಮೌನೇಶ್ ನಿಡು ಗುಂಡಿ, ರಾಘವೇಂದ್ರ ಕರಿಗುಪ್ಪ, ಎಂ.ರಾಘ ವೇಂದ್ರ, ಕುಮಾರ್ ಭಾಗವಹಿಸಿದ್ದರು.

Translate »