ಗಿರವಿ ಅಂಗಡಿ ಮಾಲೀಕನಿಗೆ 13 ಸಾವಿರ ರೂ. ದಂಡ
ಚಾಮರಾಜನಗರ

ಗಿರವಿ ಅಂಗಡಿ ಮಾಲೀಕನಿಗೆ 13 ಸಾವಿರ ರೂ. ದಂಡ

November 4, 2018

ಚಾಮರಾಜನಗರ:  ಸೂಕ್ತ ಕಾನೂನು ಕ್ರಮ ಪಾಲಿಸದೇ ಗಿರವಿ ಇಟ್ಟಿದ್ದ ಚಿನ್ನ ಹರಾಜು ಹಾಕಿದ ಗಿರವಿ ಅಂಗಡಿ ಮಾಲೀಕನಿಗೆ ನಗರದ ಜಿಲ್ಲಾ ಗ್ರಾಹಕರ ವೇದಿಕೆ 13 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ನಗರದ ಚಿಕ್ಕ ಅಂಗಡಿ ಬೀದಿಯಲ್ಲಿರುವ ಸಿರ್ವಿ ಗಿರವಿ ಅಂಗಡಿ ಮಾಲೀಕ ದಂಡನೆಗೆ ಒಳಗಾದವರು.

ಚಾಮರಾಜನಗರ ತಾಲೂಕಿನ ವಡ್ಡಗಲ್ಲಪುರದ ಹುಂಡಿ ಗ್ರಾಮದ ಟಿ.ಎನ್.ಪ್ರಸಾದ್ ಎಂಬುವವರು 2014 ಮಾರ್ಚ್ 20ರಂದು ಸಿರ್ವಿ ಗಿರವಿ ಅಂಗಡಿಯಲ್ಲಿ 6ಗ್ರಾಂ 800 ಮಿಲಿ ಚಿನ್ನವನ್ನು ಗಿರವಿ ಇಟ್ಟಿದ್ದರು. ಈ ಚಿನ್ನ ಬಿಡಿಸಿಕೊಳ್ಳಲು ಹೋದಾಗ ಅಂಗಡಿ ಮಾಲೀಕ ತಿಂಗಳಿಗೆ ಶೇ.3ರಂತೆ ಬಡ್ಡಿ ಕೇಳಿದ್ದಾನೆ. ಈ ಬಗ್ಗೆ ಪ್ರಸಾದ್ ಜಿಲ್ಲಾಧಿಕಾರಿಗಳು, ಸಹಾಯಕ ಉಪ ನಿಬಂಧಕರು ಮತ್ತು ಉಪ ನಿಬಂಧಕರಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ಜಿಲ್ಲಾ ಗ್ರಾಹಕರ ವೇದಿಕೆಗೂ ದೂರು ನೀಡಿದ್ದರು. ಈ ಬಗ್ಗೆ ವಾದ ನಡೆದು ಗಿರವಿ ಅಂಗಡಿ ಮಾಲೀಕ ಸರಿಯಾದ ಕಾನೂನು ಕ್ರಮ ಪಾಲಿಸದೇ ಚಿನ್ನವನ್ನು ಹರಾಜು ಹರಾಜು ಮಾಡಿರು ವುದಕ್ಕಾಗಿ 5 ಸಾವಿರ ರೂ., ಚಿನ್ನದ ವ್ಯತ್ಯಾಸದ ಮೊತ್ತ ಹಾಗೂ ಪಿರ್ಯಾದುದಾರರಿಗೆ ಚಿನ್ನಾಭರಣಗಳನ್ನು ಸೂಕ್ತ ಬಡ್ಡಿ ಮತ್ತು ಅಸಲನ್ನು ಪಡೆದುಕೊಂಡು ವಾಪಸ್ ನೀಡದೇ ಇರುವುದರಿಂದ ಸೇವಾ ನ್ಯೂನ್ಯತೆ ಗಾಗಿ 5 ಸಾವಿರ ರೂ. ಮತ್ತು ಪ್ರಕರಣದ ಖರ್ಚು 3ಸಾವಿರ ರೂ. ಸೇರಿದಂತೆ ಒಟ್ಟು 13 ಸಾವಿರ ರೂ.ಗಳನ್ನು ಪಿರ್ಯಾದುದಾರ ರಿಗೆ ನೀಡುವಂತೆ ವೇದಿಕೆ ಅಧ್ಯಕ್ಷ ಎಂ.ಎಸ್.ರಾಮಚಂದ್ರ, ಸದಸ್ಯರಾದ ವೈ.ಎಸ್. ತಮ್ಮಣ್ಣ, ಗೌರಮ್ಮಣ್ಣಿ ಅವರು ತೀರ್ಪು ನೀಡಿದ್ದಾರೆ ಎಂದು ದೂರುದಾರ ಪ್ರಸಾದ್ ಪರ ವಕೀಲ ಕಮರವಾಡಿ ಕೆ.ಬಿ.ತೀರ್ಥ ಪ್ರಸಾದ್ ತಿಳಿಸಿದ್ದಾರೆ.

Translate »