ಹಿರಿಯ ಶುಶ್ರೂಷಕರಿಗೆ `ಫ್ಲಾರೆನ್ಸ್ ನೈಟಿಂಗೇಲ್’, `ಸೇವಾರತ್ನ’ ಪ್ರಶಸ್ತಿ ಪ್ರದಾನ
ಮೈಸೂರು

ಹಿರಿಯ ಶುಶ್ರೂಷಕರಿಗೆ `ಫ್ಲಾರೆನ್ಸ್ ನೈಟಿಂಗೇಲ್’, `ಸೇವಾರತ್ನ’ ಪ್ರಶಸ್ತಿ ಪ್ರದಾನ

May 31, 2019

ಮೈಸೂರು: ಮೈಸೂರು ಜೆ.ಕೆ.ಮೈದಾನದಲ್ಲಿರುವ ಅಮೃತಮಹೋತ್ಸವ ಭವನದಲ್ಲಿ 12 ಮಂದಿ ಹಿರಿಯ ಶುಶ್ರೂಷಕರಿಗೆ `ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ’ ಹಾಗೂ ಉತ್ತಮ ಸೇವೆ ಸಲ್ಲಿಸಿದ 12 ಮಂದಿ ಶುಶ್ರೂಷಕರಿಗೆ `ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘ ಜಿಲ್ಲಾ ಶಾಖೆ ಗುರುವಾರ ಆಯೋಜಿಸಿದ್ದ ಶುಶ್ರೂಷ ಕರ ಹಬ್ಬ, ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ, ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು, ಹಿರಿಯ ಶುಶ್ರೂಷಕರಾದ ಪಿಕೆಟಿಬಿ ಮತ್ತು ಸಿಡಿ ಆಸ್ಪತ್ರೆಯ ಹಿರಿಯ ಶುಶ್ರೂಷಕಿ ಆಲೀಸ್ ಫ್ಲಾರೆನ್ಸ್ ಕ್ರಾಸ್ತಾ, ಅಂಬುಜಾ, ಚೆಲುವಾಂಬ ಆಸ್ಪತ್ರೆಯ ಹಿರಿಯ ಶುಶ್ರೂಷಕಿ ಎಸ್.ಜಾನಕಿರಾಣಿ, ಇಡಿ ಆಸ್ಪತ್ರೆ ಶುಶ್ರೂಷಕಿ ಮಹದೇವಮ್ಮ, ಇಎಸ್‍ಐ ಆಸ್ಪತ್ರೆ ಶುಶ್ರೂಷಕಿ ಕೆ.ಬಿ.ಶಾಂತಲಾ, ಕೆ.ಆರ್. ಆಸ್ಪತ್ರೆಯ ಶುಶ್ರೂಷಕಿ ಪಿ.ಎಂ.ವನಿತಾ, ಪಿ.ಸಿ.ಚಂದ್ರಾ ವತಿ, ಎ.ಕೆ.ಶೀಲಮ್ಮ, ಸಿ.ವೇದಾವತಿ, ಲಕ್ಷ್ಮಿದೇವಮ್ಮ ಹೆರಿಗೆ ಆಸ್ಪತ್ರೆಯ ಶುಶ್ರೂಷಕಿ ಮೀರಾ, ನಂಜನ ಗೂಡು ಸಾರ್ವಜನಿಕ ಆಸ್ಪತ್ರೆ ಶುಶ್ರೂಷಕಿ ಬಿ.ಬಿ. ವಿಶಾಲಾಕ್ಷಿ, ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆ ಶುಶ್ರೂಷಕಿ ಹೆಚ್.ಪಿ.ಪ್ರಮೀಳಾ ಅವರಿಗೆ `ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ’ ಪ್ರದಾನ ಮಾಡಿದರು.

ಸೇವಾರತ್ನ ಪ್ರಶಸ್ತಿ ಪ್ರದಾನ: ಕೆ.ಆರ್.ಆಸ್ಪತ್ರೆ ಶುಶ್ರೂ ಷಕಿ ಟಿ.ಲಕ್ಷ್ಮಿದೇವಿ, ಮಧುಮಾಲತಿ, ಎನ್.ರಾಜಮ್ಮ, ಪಿ.ಎ.ರಾಧಾ, ಪಿ.ಜೆ.ರೋಸಮ್ಮ, ಪುಟ್ಟಸಿದ್ದಮ್ಮ, ಕೆ. ರೆಜಿನಾ, ಜೆ.ಪಿ.ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಕೆ.ಪಿ.ಧನಲಕ್ಷ್ಮಿ, ಚೆಲುವಾಂಬ ಆಸ್ಪತ್ರೆಯ ಶುಶ್ರೂಷಕಿ ಹೇಮಾವತಿ, ಸರ್ಕಾರಿ ಶುಶ್ರೂಷ ಶಾಲೆಯ ಅಂತಿಮ ವರ್ಷದ ವಿದ್ಯಾರ್ಥಿನಿ ಕೆ.ಆರ್.ಚೈತ್ರ, ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಎನ್.ಆರ್. ಡಯಾನ, ಶುಶ್ರೂಷ ತರಬೇತಿ ಶಾಲೆಯ ಅಂತಿಮ ವರ್ಷದ ವಿದ್ಯಾರ್ಥಿನಿ ಡಿ.ಡಿ.ಚೈತ್ರಶ್ರೀ ಅವರಿಗೆ `ಸೇವಾರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ನಂತರ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಒಂದೆಡೆ ಪ್ರಧಾನಿ ನರೇಂದ್ರಮೋದಿ ಅವರು ಅಧಿ ಕಾರದ ಪದಗ್ರಹಣ ಮಾಡುತ್ತಿದ್ದರೆ, ಮತ್ತೊಂದೆಡೆ ಶುಶ್ರೂಷಕರ ಹಬ್ಬ ಆಚರಿಸುತ್ತಿರುವುದು ಸಂತೋಷ ತಂದಿದೆ. ವೈದ್ಯರು ರೋಗಿಗಳ ಪಾಲಿಗೆ ದೇವರಾದರೆ, ಶುಶ್ರೂಷಕರು ಪೂಜಾರಿಯಿದ್ದಂತೆ. ರೋಗಿಗಳು ಆಸ್ಪತ್ರೆಗೆ ಬಂದಾಗ ಅವರನ್ನು ಪ್ರೀತಿಯಿಂದ ಮಾತ ನಾಡಿಸುವ ಶುಶ್ರೂಷಕರು ಅವರ ಪಾಲಿಗೆ ದೇವರಾಗು ತ್ತಾರೆ. ಹಾಗಾಗಿ, ಆರೋಗ್ಯ ಕ್ಷೇತ್ರದಲ್ಲಿ ಶುಶ್ರೂಷಕರ ಪಾತ್ರ ಮಹತ್ವz್ದÁಗಿದೆ ಎಂದು ಹೇಳಿದರು.
ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿ, ವಿe್ಞÁನಿ ಯಾಗಿದ್ದರೂ ಕೂಡ ಪಾಠ ಮಾಡುವಾಗಲೇ ನಿಧನ ರಾದರು. ಅಂತಹವರ ಜೀವನ ಎಂದಿಗೂ ಶಾಶ್ವತ. ಸರಳ ಬದುಕು, ಸನ್ನಡತೆ, ಸಮೃದ್ಧ ಜೀವನ ಸಂತೋಷ ಕೊಡು ತ್ತದೆ. ಅದ್ದೂರಿ, ಆಡಂಬರದ ಜೀವನ ಎಂದಿಗೂ ಶಾಶ್ವತವಲ್ಲ ಎಂದರು.

ವಾಸುರವರ ಅಭಿವೃದ್ಧಿ ಕೆಲಸಕ್ಕೆ ಮೆಚ್ಚುಗೆ: ಮಾಜಿ ಶಾಸಕ ವಾಸು ಅವರು ಕಳೆದ 5 ವರ್ಷದಲ್ಲಿ ಶಿP್ಷÀಣ, ಆರೋಗ್ಯಕ್ಕೆ ಒತ್ತು ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆರೋಗ್ಯ ಸಚಿವರ ಗಮನಕ್ಕೆ ತಂದು ಆಸ್ಪತ್ರೆಯ ದುರಸ್ತಿ ಮತ್ತು ಸಿಬ್ಬಂದಿ ನೇಮಕ ಸೇರಿ ದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ವಾಸು ಮಾತನಾಡಿ, ನರ್ಸಿಂಗ್ ಪದವಿ ಮುಗಿಸಿದ ವಿದ್ಯಾರ್ಥಿನಿಯರು ಆನಂತರ ತಮ್ಮನ್ನು ನರ್ಸಿಂಗ್ ವೃತ್ತಿಗೆ ಮಾತ್ರವೇ ಸೀಮಿತಗೊಳಿಸಿಕೊಳ್ಳದೆ ಯುಪಿಎಸ್ಸಿ, ಕೆಪಿಎಸ್ಸಿಯಂತಹ ಪರೀಕ್ಷೆಗಳನ್ನು ತೆಗೆದು ಕೊಂಡು ಉನ್ನತ ಸ್ಥಾನಕ್ಕೇರಬೇಕು ಎಂದರು. ಶುಶ್ರೂಷ ಕರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷೆ ಶಿವಮ್ಮ, ಎಂಎಂಸಿ ಮತ್ತು ಆರ್‍ಐನ ಪ್ರಾಂಶುಪಾಲೆ ಡಾ.ಕೆ.ಆರ್.ದ್ರಾಕ್ಷಾ ಯಿಣಿ, ಚಲುವಾಂಬ ಆಸ್ಪತ್ರೆಯ ಡೀನ್ ಡಾ.ರಾಧಾ ಮಣಿ, ಪಿಕೆಟಿಬಿ ಮತ್ತು ಇಡಿ ಆಸ್ಪತ್ರೆಯ ವೈದ್ಯಕೀಯ ಅಧೀP್ಷÀಕ ಡಾ.ಹೆಚ್.ಎಂ. ವಿರೂಪಾP್ಷÀ, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀP್ಷÀಕ ಡಾ.ನಂಜುಂಡಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯP್ಷÀ ಹೆಚ್.ಕೆ.ರಾಮು, ಎಂಎಂಸಿ ಮತ್ತು ಆರ್‍ಐನ ಮುಖ್ಯ ಆಡಳಿತಾಧಿಕಾರಿ ಗಾಯಿತ್ರಿ, ಸಂಘದ ರಾಜ್ಯಾಧ್ಯಕ್ಷೆ ಬಿ.ಎಸ್.ಬೈರಮ್ಮ, ಪ್ರಧಾನ ಕಾರ್ಯದರ್ಶಿ ವಿಜಯನಾಯಕ, ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ರತ್ನಮ್ಮ ಉಪಸ್ಥಿತರಿದ್ದರು.

Translate »