ಜಾನಪದದ ಗಂಧ ಗಾಳಿ ಗೊತ್ತಿಲ್ಲದವರಿಂದ  ಜಾನಪದ ಸಾಹಿತ್ಯಕ್ಕೆ ಅವಮಾನ
ಮೈಸೂರು

ಜಾನಪದದ ಗಂಧ ಗಾಳಿ ಗೊತ್ತಿಲ್ಲದವರಿಂದ  ಜಾನಪದ ಸಾಹಿತ್ಯಕ್ಕೆ ಅವಮಾನ

September 23, 2018

ಮೈಸೂರು: ಸಂಸ್ಕøತ ಕಲಿತ ಗಾಯಕರು ಸೊಲ್ಲು ಹಾಗೂ ಮೂಲ ಮಟ್ಟುಗಳನ್ನು ಕಡೆಗಣಿಸಿ ಜಾನಪದ ಗೀತೆ ಗಳನ್ನು ಹಾಡುವ ಮೂಲಕ ಜಾನಪದ ವನ್ನೇ ಅಪಮಾನಿಸುತ್ತಿದ್ದಾರೆ ಎಂದು ಜಾನ ಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಆರೋಪಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಜಾನ ಪದ ವಿಭಾಗವು ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣ ದಲ್ಲಿ ಶನಿವಾರ ವಿಶ್ವ ಜಾನಪದ ದಿನದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಜಾನಪದ ಗಾಯಕಿ ಭಾಗ್ಯಮ್ಮ ಮತ್ತು ತಂಡದವರ ಬಾಲ ನಾಗಮ್ಮನ ಕಥನಕಾವ್ಯ ಹಾಡುಗಾರಿಕೆ ಕಾರ್ಯಕ್ರಮವನ್ನು ಮೂವರು ಜಾನಪದ ಗಾಯಕಿಯರ ಮಡಿಲಿಗೆ ರಾಗಿ ಸುರಿ ಯುವ ಮೂಲಕ ಉದ್ಘಾಟಿಸಿ ಮಾತನಾ ಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಾನ ಪದ ಗೀತೆಗಳನ್ನು ಸೊಲ್ಲು ಹಾಗೂ ಮೂಲ ಮಟ್ಟುಗಳನ್ನು ಮರೆತು ಹಾಡಲಾಗುತ್ತಿದೆ. ಸಂಸ್ಕøತ ಕಲಿತಿರುವವರು ಜಾನಪದ ಶೈಲಿ ಯನ್ನು ಕರಗತ ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಅಲ್ಲದೆ, ಜಾನಪದ ಗೀತೆಗಳಲ್ಲಿ ಬರುವ ಅನೇಕ ಪದಗಳ ಉಚ್ಚಾ ರಣೆಯೇ ಅವರಿಗೆ ಬರುವುದಿಲ್ಲ. ಈ ಹಿನ್ನೆಲೆ ಯಲ್ಲಿ ಜಾನಪದ ಗಾಯನದ ವೇಳೆ ಮೂಲ ಅರ್ಥಕ್ಕೆ ಬದಲು ತಮಗಿಷ್ಟ ಬಂದ ಪದವನ್ನು ಸೇರಿಸುವ ಮೂಲಕ ಅಪಹಾಸ್ಯ ಮಾಡು ತ್ತಿದ್ದಾರೆ ಎಂದು ವಿಷಾದಿಸಿದರು.

ಆಧುನಿಕ ಪ್ರಭಾವಕ್ಕೆ ಒಳಗಾಗಿರುವ ವಿದ್ಯಾರ್ಥಿಗಳು ಜಾನಪದ ವಿಷಯದಲ್ಲಿ ಮೋಸ ಹೋಗುತ್ತಿದ್ದಾರೆ. ನಗರ ಪ್ರದೇಶ ಗಳಲ್ಲಿ ಭಾವಗೀತೆ, ಶಾಸ್ತ್ರೀಯ ಸಂಗೀತ, ಭಕ್ತಿಗೀತೆಯೊಂದಿಗೆ ಜಾನಪದ ಗೀತೆ ಗಳನ್ನು ಕಲಿಸಿಕೊಡುವುದಾಗಿ ಫಲಕ ಹಾಕಿ ರುತ್ತಾರೆ. ಆದರೆ ನಗರ ಪ್ರದೇಶದ ಜನರು ಜಾನಪದ ಗೀತೆಗಳನ್ನು ಕಲಿಸಿಕೊಡುವು ದಕ್ಕೆ ಸಾಧ್ಯವೇ ಇಲ್ಲ. ನಗರ ಪ್ರದೇಶ ದಲ್ಲಿರುವುದೆಲ್ಲ ಸುಳ್ಳು ಜನಪದವಾಗಿದೆ. ಇಂತಹ ಸುಳ್ಳು ಜಾನಪದದ ವಿರುದ್ದ ಜಾನ ಪದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿ ಗಳು ಹೋರಾಟ ಮಾಡಬೇಕಾಗಿದೆ. ಕೆಲವು ಸ್ಪರ್ಧೆಗಳಲ್ಲಿ ಜಾನಪದ ಗೀತೆಗಳ ವಿಭಾಗ ದಲ್ಲಿ ಬೇರ್ಯಾವುದೋ ಗೀತೆಯನ್ನು ಹಾಡಿ ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಿದ್ದಾರೆ. ತೀರ್ಪು ಗಾರರಿಗೂ ಯಾವುದು ಜಾನಪದ ಗೀತೆ, ಯಾವುದು ಅಲ್ಲ ಎನ್ನುವುದನ್ನು ಅವಲೋಕಿ ಸದೆ ಹೆಚ್ಚು ಅಂಕ ನೀಡಿ ಪ್ರಶಸ್ತಿ ಕೊಟ್ಟು ಕಳುಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಾನಪದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಯಾವುದೇ ಸ್ಪರ್ಧೆಯಲ್ಲಿ ಜಾನಪದ ವಿಭಾಗದಲ್ಲಿ ಬೇರ್ಯಾವುದೋ ಗೀತೆ ಹಾಡಿ ಪ್ರಶಸ್ತಿ ಗಿಟ್ಟಿಸಿಕೊಂಡರೆ ಧೈರ್ಯದಿಂದ ಪ್ರತಿಭಟಿಸುವ ಮೂಲಕ ಮೂಲ ಜಾನಪದದ ಉಳಿವಿಗೆ ಪಣ ತೊಡಬೇಕೆಂದು ಸಲಹೆ ನೀಡಿದರು.
ಚಲನಚಿತ್ರ ಗೀತೆಗಳು ಅಲ್ಪಾಯು: ಯಾರದೋ ಶ್ರಮವನ್ನು ಬೇರಾರೋ ಬಳಸಿಕೊಳ್ಳು ವುದು ಸರಿಯಲ್ಲ. ಕೆಲವರು ಸುಲಭವಾಗಿ ಸ್ಥಾನಮಾನ ಗಿಟ್ಟಿಸಿಕೊಳ್ಳಲು ನಕಲಿ ಜಾನ ಪದಕ್ಕೆ ಆದ್ಯತೆ ನೀಡುತ್ತಿ ದ್ದಾರೆ. ಕೆಲವು ಸಂಗೀತ ನಿರ್ದೇಶಕರು ಚಲನಚಿತ್ರಗಳಲ್ಲಿ ಜಾನಪದ ಗೀತೆಗಳನ್ನು ರೀಮಿಕ್ಸ್ ಮಾಡಿ ಅಳವಡಿಸಿಕೊಳ್ಳುವ ಮೂಲಕ ಜಾನಪದ ಗೀತೆಗಳನ್ನು ಮನೆ ಮನೆಗೆ ತಲುಪಿಸುವುದಾಗಿ ಹೇಳಿ ಕೊಂಡಿದ್ದರು. ಆದರೆ ಮೂಲ ಮಟ್ಟು ಇಲ್ಲದ ಗೀತೆಗಳು ಪ್ರಸಿದ್ಧಿಯಾಗಲಿಲ್ಲ. ಕೋಲುಮಂಡೆ ಜಂಗಮ ದೇವಗೀತೆ ಮೂಲಮಟ್ಟಿಗೆ ಸಮೀಪ ಇದ್ದ ಮಾತ್ರಕ್ಕೆ ಜನಜನಿತವಾಯಿತು. ಇದರಿಂದ ಚಲನಚಿತ್ರ ಗೀತೆಗಳು ಅಲ್ಪಾಯುವಾಗಿದೆ. ಜನಪದ ಗೀತೆಗಳು ಚಿರಾಯುವಾಗಿದೆ ಎಂದರು.ಇದೇ ವೇಳೆ ಜನಪದ ಗಾಯಕರು ಗಳಾದ ಭಾಗ್ಯಮ್ಮ, ಲಕ್ಷ್ಮಮ್ಮ, ದೇವಮ್ಮ ಅವರಿಂದ ಬಾಲನಾಗಮ್ಮ ಕಥನಕಾವ್ಯ ಹಾಡುಗಾರಿಕೆ ನಡೆಯಿತು.

ಕಾರ್ಯಕ್ರಮದ ಅಧ್ಯ ಕ್ಷತೆಯನ್ನು ಕುವೆಂಪು ಕನ್ನಡ ಸಂಸ್ಥೆಯ ನಿರ್ದೇಶಕ ಪ್ರೊ.ಎನ್.ಎಂ.ತಳವಾರ್ ವಹಿಸಿದ್ದರು. ಜಾನಪದ ಅಧ್ಯಯನ ಮಂಡಳಿಯ ಅಧ್ಯಕ್ಷ ಡಾ.ಎಂ.ನಂಜಯ್ಯ ಹೊಂಗನೂರು, ಸಂಶೋಧನಾ ವಿದ್ಯಾರ್ಥಿ ಸೋಮ ಶೇಖರ್ ಇದ್ದರು.

 

Translate »