ಒಡಿಶಾ ಸಂತ್ರಸ್ತರಿಗೆ CFTRIನಿಂದ ಆಹಾರ ರವಾನೆ
ಮೈಸೂರು

ಒಡಿಶಾ ಸಂತ್ರಸ್ತರಿಗೆ CFTRIನಿಂದ ಆಹಾರ ರವಾನೆ

May 7, 2019

ಮೈಸೂರು: ಫೊನಿ ಚಂಡ ಮಾರುತದಿಂದ ತತ್ತರಿಸಿರುವ ಒಡಿಶಾದ ಸಂತ್ರಸ್ತರಿಗೆ ಮೊದಲ ಹಂತದಲ್ಲಿ 5 ಟನ್ ಆಹಾರ ಪದಾರ್ಥವನ್ನು ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ಮುಂಜಾನೆ ರವಾನಿಸಿತು.

ಫೊನಿ ಚಂಡ ಮಾರುತದಿಂದ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ತತ್ತರಿಸಿದ್ದು, ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಅಲ್ಲದೆ ಲಕ್ಷಾಂತರ ಮಂದಿ ಮನೆ-ಮಠ ಕಳೆದುಕೊಂಡು ಅತಂತ್ರರಾಗಿ ಪುನರ್ವ ಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾನವೀಯತೆ ನೆಲೆಗಟ್ಟಿನಲ್ಲಿ ಮೈಸೂರಿನ ಸಿಎಫ್‍ಟಿಆರ್‍ಐ ಯಾರಿಂದಲೂ ಬೇಡಿಕೆ ಬರದೆ ಇದ್ದರೂ ಸಂತ್ರಸ್ತರಿಗೆ ಆಹಾರ ತಯಾರಿಕೆ ಆರಂಭಿಸಿತ್ತು.

ಇದಕ್ಕೆ ಸಂಸ್ಥೆಯ ವಿಜ್ಞಾನಿಗಳು, ವಿದ್ಯಾರ್ಥಿಗಳು, ಸಿಬ್ಬಂದಿ ಕುಟುಂಬದ ಸದಸ್ಯರು ಆಹಾರ ತಯಾ ರಿಕೆಯಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುವ ಮೂಲಕ ಸಂತ್ರಸ್ತರ ಹಸಿವು ತಣಿಸಲು ಅಳಿಲು ಸೇವೆ ಸಲ್ಲಿಸಿದ್ದರು. ಸಂತ್ರಸ್ತರಿಗೆ ಪೂರೈಸಲು ಅವಲಕ್ಕಿ (ಇಂಮ್ಲೀ ಪೆÇೀಹ), ಉಪ್ಪಿಟ್ಟು (ರೆಡಿ ಟು ಈಟ್), ಉಪ್ಪಿಟ್ಟು (ರೆಡಿ ಟು ಕುಕ್), ಚಪಾತಿ, ಟಮೋಟೋ ಚಟ್ನಿ, ಹೈ ಪೆÇ್ರೀಟಿನ್ ರಸ್ಕ್ ಮತ್ತು ಬಿಸ್ಕತ್ ತಯಾರಿ ಸಲಾಗುತ್ತಿದ್ದು, 25 ಟನ್ ಆಹಾರ ಉತ್ಪನ್ನ ತಯಾರಿ ಸುವುದಕ್ಕೆ ಸಂಸ್ಥೆ ನಿರ್ಧರಿಸಿದೆ. ಆದರೆ 5 ಟನ್ ಆಹಾರ ಪದಾರ್ಥ ಭಾನುವಾರ ಸಂಜೆಯೊಳಗೆ ತಯಾರಾಗಿ ದ್ದರಿಂದ ಅದನ್ನು ಮುಂಜಾನೆ ರಸ್ತೆ ಮಾರ್ಗದಲ್ಲಿ ಬೆಂಗ ಳೂರಿನ ವಿಮಾನ ನಿಲ್ದಾಣಕ್ಕೆ ರವಾನಿಸಲಾಗಿದ್ದು, ಅಲ್ಲಿಂದ ಭಾರತೀಯ ವಾಯುಸೇನೆ ವಿಮಾನದ ಮೂಲಕ ಭುವನೇಶ್ವರಕ್ಕೆ ಇಂದು ಬೆಳಿಗ್ಗೆ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲಾಗಿದೆ. ಇನ್ನು 3 ದಿನ ಆಹಾರ ತಯಾರಿಕೆ ನಡೆಯಲಿದೆ. ರೆಡಿ ಟು ಈಟ್ ಪದಾರ್ಥಗಳು 12 ದಿನದವರೆಗೂ ತಾಜಾತನ ಕಾಪಾಡಿಕೊಳ್ಳಲಿವೆ. ಅಲ್ಲದೆ ರುಚಿಯಾಗಿಯೂ ಇರು ತ್ತವೆ. ರೆಡಿ ಟು ಕುಕ್ ಪದಾರ್ಥಗಳು 6 ತಿಂಗಳವ ರೆಗೂ ಬಳಸಬಹುದಾಗಿದೆ. ಬಿಸಿ ನೀರು ಹಾಕಿ 10 ನಿಮಿಷದ ನಂತರ ಅವನ್ನು ಸೇವಿಸಬಹುದು. ತಣ್ಣೀರು ಬೆರೆಸಿದರೆ 20 ನಿಮಿಷದ ನಂತರ ತಿನ್ನಬಹುದಾಗಿದೆ. ಸಿಎಫ್‍ಟಿಆರ್‍ಐ ಸಂಸ್ಥೆ ಸುಮಾರು 1 ಲಕ್ಷ ಆಹಾರ ಪೊಟ್ಟಣ(ಮೀಲ್ಸ್) ಸರಬರಾಜು ಮಾಡಲು ನಿರ್ಧರಿಸಿದೆ.

Translate »