ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಫುಟ್‍ಪಾತ್ ನವೀಕರಣ ಕಾಮಗಾರಿ ಆರಂಭ
ಮೈಸೂರು

ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಫುಟ್‍ಪಾತ್ ನವೀಕರಣ ಕಾಮಗಾರಿ ಆರಂಭ

November 10, 2019

ಮೈಸೂರು,ನ.9 (ಎಸ್‍ಬಿಡಿ)- ಮೈಸೂರು ಗ್ರಾಮಾಂತರ(ಸಬರ್ಬನ್) ಬಸ್ ನಿಲ್ದಾಣದ ಬಳಿ ಫುಟ್‍ಪಾತ್ ನವೀಕರಣ ಕಾಮಗಾರಿ ಆರಂಭವಾಗಿದೆ.

ಪ್ರಿ-ಪೇಯ್ಡ್ ಆಟೋ ನಿಲ್ದಾಣದ ಬಳಿ ಯಿಂದ ಫುಟ್‍ಪಾತ್ ನವೀಕರಣ ಕಾಮ ಗಾರಿ ಆರಂಭಿಸಲಾಗಿದೆ. ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಮೈಸೂರು ನಗರಪಾಲಿಕೆ ಅಧೀಕ್ಷಕ ಇಂಜಿ ನಿಯರ್ ಭಾಸ್ಕರ್, ದಸರಾ ಸಂದರ್ಭದಲ್ಲೇ ಕಾಮಗಾರಿ ನಡೆಸಬೇಕಿತ್ತು. ಆದರೆ ಆ ವೇಳೆ ಹೆಚ್ಚು ಜನ ಸಂಚಾರವಿರುವ ಕಾರಣ ಹಾಗೂ ತರಾತುರಿಯಲ್ಲಿ ಕಾಮಗಾರಿ ಯಿಂದ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟ ವಾಗುತ್ತದೆ ಎಂಬ ಕಾರಣಕ್ಕೆ ಮುಂದೂಡ ಲಾಗಿತ್ತು. ಇದೀಗ 48 ಲಕ್ಷ ರೂ. ಅನು ದಾನದಲ್ಲಿ ಫುಟ್‍ಪಾತ್ ನವೀಕರಣ ಕಾಮ ಗಾರಿ ಕೈಗೆತ್ತಿಕೊಳ್ಳಲಾಗಿದೆ. ಪ್ರಿ-ಪೇಯ್ಡ್ ಆಟೋ ನಿಲ್ದಾಣದ ಬಳಿ ದೊಡ್ಡ ಗಡಿಯಾರ ರಸ್ತೆ ಕೂಡುವ ಸ್ಥಳದಿಂದ ಕಾಮಗಾರಿ ಆರಂಭಗೊಂಡಿದೆ. ಅಲ್ಲಿಂದ ಇರ್ವಿನ್ ರಸ್ತೆ ಜಂಕ್ಷನ್‍ವರೆಗೆ ಫುಟ್‍ಪಾತ್ ನಿರ್ಮಿಸಿ, ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಸ್ಟೀಲ್ ಬ್ಯಾರಿಕೇಡ್ ಅಳವಡಿಸಲಾಗು ವುದು ಎಂದು ತಿಳಿಸಿದ್ದಾರೆ.

ಆದರೆ ಈ ವ್ಯಾಪ್ತಿಯ ಇಂಜಿನಿಯರ್ ಚಂದ್ರಶೇಖರ್ ಮಾತ್ರ ಕಾಮಗಾರಿ ಅಂದಾಜು ಮೊತ್ತ ಇನ್ನಿತರ ವಿವರ ಬಗ್ಗೆ ಸಮರ್ಪಕವಾಗಿ ತಿಳಿದಿಲ್ಲ. ಆದರೆ ಕಾಮ ಗಾರಿ ಆರಂಭವಾಗಿದೆ ಎಂದು ಪ್ರತಿಕ್ರಿಯಿಸಿ ದರು. ಇನ್ನು ಸ್ಥಳೀಯ ಕಾರ್ಪೊರೇಟರ್ ಸತೀಶ್ ಅವರಿಗೂ ಅಧಿಕಾರಿಗಳು ಇದೇ ಉತ್ತರ ನೀಡಿದ್ದಾರೆ. ಇದು ಶಾಸಕರ ಅನು ದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಸೋಮವಾರದೊಳಗೆ ಪೂರ್ಣ ಮಾಹಿತಿ ನೀಡುವುದಾಗಿ ಹೇಳಿದ್ದಾರಂತೆ. ಇದೇನೇ ಇರಲಿ, ಯಾವ ಅನುದಾನದಲ್ಲಾದರೂ ಕಾಮಗಾರಿ ನಡೆಸುತ್ತಿರಲಿ, ಸದ್ಯ ಪಾದಚಾರಿ ಗಳ ಸಂಕಷ್ಟ ಈಗಲಾದರೂ ಪಾಲಿಕೆಯ ಅರಿವಿಗೆ ಬಂದಿದ್ದೇ ಸಮಾಧಾನದ ಸಂಗತಿ.

ಸಾರಿಗೆ ಸಂಸ್ಥೆ ಬಸ್ ಮೂಲಕ ಮೈಸೂ ರಿಗೆ ಬೇರೆ ಊರುಗಳಿಂದ ಬರುವವರು ಹಾಗೂ ಬೇರೆ ಊರುಗಳಿಗೆ ಪ್ರಯಾಣ ಬೆಳೆಸುವವರು ಸೇರಿದಂತೆ ನಿತ್ಯ ಸಾವಿ ರಾರು ಜನ ಓಡಾಡುವ ಈ ಸ್ಥಳದಲ್ಲಿ ಫುಟ್ ಪಾತ್ ಸಮಸ್ಯೆ ಗಂಭೀರವಾಗಿತ್ತು. ಪ್ರಿ-ಪೇಯ್ಡ್ ಆಟೋ ನಿಲ್ದಾಣದ ಬಳಿ ವ್ಯಾಪಾರಿ ಗಳು ಫುಟ್‍ಪಾತ್ ಅತಿಕ್ರಮಿಸಿಕೊಂಡಿ ದ್ದರು. ಅಲ್ಲದೆ ಸುಸ್ಥಿತಿಯಲ್ಲೂ ಇರಲಿಲ್ಲ. ಪರಿಣಾಮ ಪಾದಚಾರಿಗಳು ನರಕ ಯಾತನೆ ಅನುಭವಿಸುತ್ತಿದ್ದರು. ಈ ಗಂಭೀರ ಸಮಸ್ಯೆ ಬಗ್ಗೆ `ಮೈಸೂರು ಮಿತ್ರ’ ಅಕ್ಟೋ ಬರ್ 25 ಹಾಗೂ 26ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು.

ಆದರೆ ಪಾಲಿಕೆ ಯಾವುದೇ ಕ್ರಮಕ್ಕೆ ಮುಂದಾಗದ ಕಾರಣ ಜನರ ಹಿತದೃಷ್ಟಿ ಯಿಂದ ವರದಿ ಪ್ರಕಟವಾದ ದಿನವೇ ಲಷ್ಕರ್ ಠಾಣೆ ಪೊಲೀಸರು ಫುಟ್‍ಪಾತ್ ರಕ್ಷಣೆಗೆ ಮುಂದಾಗಿ, ಯಾರೊಬ್ಬರೂ ಅಲ್ಲಿ ವ್ಯಾಪಾರ ಮಾಡದಂತೆ ಕ್ರಮ ಕೈಗೊಂಡರು. ಅಲ್ಲದೆ ಅತಿಕ್ರಮವಾಗಿ ವ್ಯಾಪಾರ ನಡೆಸಿ ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬ ಫಲಕ ಅಳವಡಿಸಿ ಎಚ್ಚರಿಕೆ ನೀಡಿದ್ದರು. ಹಲವು ವರ್ಷಗಳ ಅತಿಕ್ರಮವನ್ನು ತೆರವು ಗೊಳಿಸಿದ ಪೊಲೀಸರಿಗೆ ಸಾರ್ವಜನಿಕ ರಿಂದ ಅಭಿನಂದನೆಯ ಸುರಿಮಳೆಯಾಗಿತ್ತು.

ಹಾಗೆಯೇ ನಿಲ್ದಾಣದಿಂದ ಬಸ್‍ಗಳು ಹೊರಹೋಗುವ ಸ್ಥಳದಲ್ಲಿ ಚರಂಡಿ ಕುಸಿದಿರುವುದು, ರಸ್ತೆ ಬದಿಯಲ್ಲೇ ಚರಂ ಡಿಯ ಸ್ಲಾಬ್ ಮುರಿದು ಹೊಂಡ ನಿರ್ಮಾಣ ವಾಗಿರುವುದು ಸೇರಿದಂತೆ ಬಸ್ ನಿಲ್ದಾಣ ಸಮೀಪವಿರುವ ಅಪಾಯಕಾರಿ ಸ್ಥಳಗಳು, ಫುಟ್‍ಪಾತ್ ಅಧ್ವಾನದ ಬಗ್ಗೆ `ಮೈಸೂರು ಮಿತ್ರ’ ಅ.30ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

 

 

Translate »