ಲೋಕ ಕಲ್ಯಾಣಾರ್ಥಕ್ಕೆ ಮಹಾಯಜ್ಞ
ಹಾಸನ

ಲೋಕ ಕಲ್ಯಾಣಾರ್ಥಕ್ಕೆ ಮಹಾಯಜ್ಞ

April 27, 2018

ಅರಸೀಕೆರೆ: ಪಟ್ಟಣದ ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ದಶ ದಿನಗಳ ಕಾಲ ನಡೆಯುತ್ತಿರುವ ಒಂದು ಕೋಟಿ ಆಂಜನೇಯ ಮಹಾಮಂತ್ರದ ಜಪ ಹಾಗೂ ಒಂದು ಲಕ್ಷ ಕದಳೀ ಮಧು ಮಿಶ್ರಿತ ಹನುಮಾನ್ ಮಹಾ ಯಜ್ಞ ನಿರ್ವಿಜ್ಞವಾಗಿ ಸಾಗುತ್ತಿದೆ.

ಈ ಮಹಾಯಜ್ಞದಲ್ಲಿ ತಾಲೂಕಿ ನಿಂದಲ್ಲದೇ ರಾಜ್ಯದ ನಾನಾ ಭಾಗಗ ಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಳ್ಳುವ ಮೂಲಕ ಕೃತಾರ್ಥರಾಗುತ್ತಿದ್ದಾರೆ. ಆಶ್ರಮದ ಅವ ಧೂತರಾದ ಸತೀಶ್ ಶರ್ಮ ಗುರೂಜಿ ಅವರ ಸಂಕಲ್ಪದಂತೆ ಲೋಕ ಕಲ್ಯಾಣಾ ರ್ಥವಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ಈಗಾಗಲೇ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಸುದರ್ಶನ ಹೋಮ, ಶ್ರೀ ನರಸಿಂಹಸ್ವಾಮಿ ಮೂಲ ಮಂತ್ರ ಹೋಮ, ಶ್ರೀ ದತ್ತಾತ್ರೇಯ ಮೂಲ ಮಂತ್ರ ಹೋಮ, ಶ್ರೀ ಸೂಕ್ತ ಹೋಮ, ಸರ್ವ ಮೂಲ ಮಂತ್ರ ಹೋಮ, ಮಹಾ ರುದ್ರ ಹೋಮ, ಶ್ರೀ ಆಂಜನೇಯ ಮೂಲ ಮಂತ್ರ ಹೋಮ, ಶ್ರೀ ಲಕ್ಷ್ಮೀ ನಾರಾ ಯಣ ಹೃದಯ ಹೋಮ ಸೇರಿದಂತೆ ಗಿರಿಜಾಕಲ್ಯಾಣ, ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಕಲ್ಯಾಣೋತ್ಸವ ನಡೆದಿವೆ.

ಇದೇ ಪ್ರಥಮ ಬಾರಿಗೆ ಒಂದು ಲಕ್ಷ ಕದಳೀ ಮಧು ಮಿಶ್ರಿತ ಹನುಮಾನ್ ಮಹಾಯಜ್ಞ ಹಾಗೂ ಒಂದು ಕೋಟಿ ಆಂಜನೇಯ ಮಹಾ ಮಂತ್ರ ಜಪ ನಡೆ ಯುತ್ತಿದ್ದು, ನಂಜನಗೂಡು, ಮೈಸೂರು ಹಾಗೂ ಬೆಂಗಳೂರಿಂದ ಆಗಮಿಸಿರುವ 150ಕ್ಕೂ ಹೆಚ್ಚು ಆಗಮಿಕರ ತಂಡ ಪ್ರತ್ಯೇಕವಾಗಿ ಹೋಮ ಹವನಾದಿ ಜಪ ತಪಗಳನ್ನ ನಿರಂತರವಾಗಿ ನಡೆಸುತ್ತಿದ್ದು, ಕ್ಷೇತ್ರದ ಆವರಣ ಮಂತ್ರ ಹಾಗೂ ಗಂಟೆ ನಾದಗಳಿಂದ ಝೇಂಕರಿಸುತ್ತಿದೆ. ನಿರಂತರ ವಾಗಿ ನಡೆಯುತ್ತಿರುವ ಅನ್ನದಾಸೋಹದ ಜೊತೆಗೆ ಧಾರ್ಮಿಕ ಕಥೆಗಳು ಹಾಗೂ ಗೀತೋಪದೇಶಗಳಿಂದ ಭಕ್ತರ ಮೆಚ್ಚುಗೆಗೆ ಕಾರಣವಾಗಿದ್ದು, ಪ್ರತಿದಿನ ಸಂಜೆ ನಡೆ ಯುತ್ತಿರುವ ಸಂಗೀತ ಕಛೇರಿಗಳು, ಸಾಂಸ್ಕøತಿಕ ಉತ್ಸವಗಳು ನೋಡುಗರ ಕಣ್ಮನ ತಣ ಸುತ್ತಿವೆ.

ಅಭಿವೃದ್ಧಿ: 5.25 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ದೊಂದಿಗೆ ಪ್ರಧಾನ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಸೇರಿದಂತೆ ಪಂಚ ಮುಖಿ ಗಣಪತಿ, ಪಂಚಮುಖಿ ಆಂಜ ನೇಯ, ಈಶ್ವರ, ದುರ್ಗಾಪರಮೇಶ್ವರಿ ಹಾಗೂ ಕ್ಷೇತ್ರ ಪಾಲಕ ಆಂಜನೇಯ ದೇವಾಲಯದ ನಿರ್ಮಾಣ ಕಾರ್ಯ ಶೇ.80ರಷ್ಟು ಮುಗಿದಿದೆ. ಅಂದುಕೊಂ ಡಂತೆ ಎಲ್ಲವೂ ನಡೆದರೆ ವರ್ಷಾಂತ್ಯದಲ್ಲಿ ಮಹಾನ್ ಶಕ್ತಿ ಕ್ಷೇತ್ರವಾಗಿ ಆಶ್ರಮವು ತಲೆ ಎತ್ತಲಿದೆ ಎಂಬುದು ಭಕ್ತರ ಅಭಿಮತ ವಾಗಿದೆ. ಅಲ್ಲದೇ ಕ್ಷೇತ್ರದ ಅವಧೂತ ರಾದ ಸತೀಶ್ ಶರ್ಮ ಗುರೂಜಿ ಅವರ ಪವಾಡದಿಂದ ನಂಬಿದ ಭಕ್ತರಿಗೆ ಒಳಿತಾಗುತ್ತಿದೆ ಎನ್ನುತ್ತಾರೆ ಬೆಂಗ ಳೂರಿನ ನಾಗರತ್ನ ಶ್ರೀಕಂಠ.

Translate »