ನನ್ನನ್ನು ಕುಮಾರಸ್ವಾಮಿ ಶತ್ರುವಿನಂತೆ ನೋಡಿದ್ದರಿಂದಲೇ ಮೈತ್ರಿ ಸರ್ಕಾರ ಪತನವಾಯಿತು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು
ಮೈಸೂರು

ನನ್ನನ್ನು ಕುಮಾರಸ್ವಾಮಿ ಶತ್ರುವಿನಂತೆ ನೋಡಿದ್ದರಿಂದಲೇ ಮೈತ್ರಿ ಸರ್ಕಾರ ಪತನವಾಯಿತು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು

August 26, 2019

ಮೈಸೂರು, ಆ.25(ಎಂಟಿವೈ)- ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ನನ್ನನ್ನು ಮಿತ್ರನಂತೆ ನೋಡದೆ ಶತ್ರುವಿನಂತೆ ನೋಡಿದ್ದರಿಂದಲೇ ಸರ್ಕಾರ ಪತನವಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ವಿಶೇಷ ವಿಮಾನದಲ್ಲಿ ಬೆಂಗಳೂರಿ ನಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾ ಣಕ್ಕೆ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಇತ್ತೀಚೆಗಷ್ಟೆ ಬಿಜೆಪಿಗಿಂತ ಸಿದ್ದ ರಾಮಯ್ಯ ಅವರೇ ನನ್ನ ಮೊದಲ ಶತ್ರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿದ್ದವರು ಎಲ್ಲರನ್ನು ವಿಶ್ವಾಸದಿಂದ ನೋಡಿಕೊಳ್ಳಬೇಕಾಗಿತ್ತು. ಸರ್ಕಾರ ಪಾಲುದಾರ ಪಕ್ಷದ ನಾಯಕನಾಗಿದ್ದರೂ ನನ್ನನ್ನು ಮಿತ್ರನೆಂದು ಕಾಣದೆ ಶತೃಗಳಂತೆ ಕಂಡರು. ಅಧಿಕಾರದಲ್ಲಿದ್ದ ದಿನಗಳಲ್ಲಿ ಒಮ್ಮೆಯೂ ಪಕ್ಷದ ಶಾಸಕರ ವಿಶ್ವಾಸ ಗಳಿಸಲಿಲ್ಲ. ಅಪನಂಬಿಕೆಯಿಂದಲೇ ಎಲ್ಲರನ್ನು ಶತೃಗಳಂತೆ ಕಂಡರು. ಇದರಿಂದ ಸಮಸ್ಯೆಗಳು ಸೃಷ್ಟಿಯಾದವು. ಈ ನಿರ್ಲಕ್ಷ್ಯದ ಧೋರಣೆಯಿಂದಾಗಿಯೇ ಸರ್ಕಾರ ಪತನವಾಯಿತು ಎಂದು ವಿಶ್ಲೇಷಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ಕ್ಲರ್ಕ್‍ನಂತೆ ಕೆಲಸ ಮಾಡಿದ್ದೆ ಎಂದಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿ ಕ್ರಿಯಿಸಿದ ಸಿದ್ದರಾಮಯ್ಯ, ಅವರಿಗೆ ಆಡಳಿತ ಮಾಡೋದಕ್ಕೆ ಬರದೆ ಇದ್ದುದರಿಂದಲೇ ಕ್ಲರ್ಕ್‍ನಂತೆ ಕೆಲಸ ಮಾಡಿದೆ ಎಂದಿದ್ದಾರೆ. ಆಡಳಿತ ಮಾಡಲು ಬಂದಿದ್ದರೆ ಹೀಗೆ ಮಾತಾಡುತ್ತಿರಲಿಲ್ಲ. ಸಿಎಂ ರೀತಿ ಕೆಲಸಮಾಡಿದ್ದರೆ ಎಲ್ಲವು ಸರಿಯಾಗಿರುತ್ತಿತ್ತು ಎಂದರು.

ರಾಜ್ಯ ಸರ್ಕಾರ ಅನೈತಿಕ ಶಿಶು ಇದ್ದಂತೆ: ರಾಜ್ಯದಲ್ಲಿ ರಚನೆಯಾಗಿರುವ ಬಿಜೆಪಿ ಸರ್ಕಾರ ಸಂವಿಧಾನ ಬದ್ಧವಾಗಿ ರಚನೆಯಾಗಲಿಲ್ಲ. ಬಿಜೆಪಿ ಸರ್ಕಾರ ರಚನೆಯಾಗಿ ರೋದು ಆಪರೇಷನ್ ಕಮಲದಿಂದ. ಇದು ಸಂವಿಧಾನ ಬದ್ಧವಾಗಿ ಸ್ಥಾಪನೆಯಾಗದೆ ಅನೈತಿಕತೆಯಿಂದ ಸ್ಥಾಪನೆಯಾಗಿರುವ ಶಿಶು ಎಂದು ವ್ಯಂಗ್ಯವಾಡಿದರು.

ದೋಸ್ತಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಬರಲು ಕಾರಣವಾದ ಅತೃಪ್ತರಿಗೂ ಏನು ಮಾಡಲಾಗದೆ ಇದ್ದಾರೆ. ಯಡಿಯೂರಪ್ಪ ಸಿಎಂ ಆಗಿ 26 ದಿನಗಳಾದರೂ ಯಾವುದೇ ಖಾತೆಗಳನ್ನು ಹಂಚಿಲ್ಲ. ಸಿಎಂ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್‍ಗೆ ಹಾಗೂ ರಾಜ್ಯದ ಜನತೆಗೂ ಒಲ್ಲದ ಶಿಶುವಾಗಿದ್ದಾರೆ. ಬಿಜೆಪಿಯವರು ಅಧಿಕಾರ ವಿಕೇಂದ್ರೀ ಕರಣ ಮಾಡುವ ಬದಲಿಗೆ ಕೇಂದ್ರೀಕರಣ ಮಾಡುವ ಮನಸ್ಸು ಹೊಂದಿರುವವರು. ಸರ್ವಾಧಿಕಾರ ಧೋರಣೆಯಲ್ಲಿ ನಂಬಿಕೆ ಇಟ್ಟುಕೊಂಡ ಜನರು. ಅವರಿಗೆ ಪ್ರಜಾ ಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಪಕ್ಷಕ್ಕೆ ದ್ರೋಹ ಬಗೆದ ಅನರ್ಹ ಶಾಸಕರು ಅತಂತ್ರರಾಗಿದ್ದಾರೆ ಈಗ ಅನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು(ಅನರ್ಹ ಶಾಸಕರು) ಅನರ್ಹ ರಾಗಿ ಅತಂತ್ರರಾಗಬೇಕು ಅನ್ನೋದೆ ನಮ್ಮ ಉದ್ದೇಶವಾಗಿದೆ. ಅದಕ್ಕೆ ನಾನು ಹಾಗೂ ದಿನೇಶ್ ಗುಂಡೂರಾವ್ ಅವರ ಅನರ್ಹತೆಗೆ ಅರ್ಜಿ ಕೊಟ್ಟಿದ್ದೇವೆ ಎಂದು ನುಡಿದರು.
ಕೇಂದ್ರದಿಂದ ಬಿಡಿಗಾಸು ಬಂದಿಲ್ಲ: ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭೀಕರ ನೆರೆಯುಂಟಾಗಿದ್ದರೂ ಕೇಂದ್ರ ಸರ್ಕಾರದಿಂದ ಇದುವರೆಗೂ 1 ಪೈಸೆ ಬಿಡುಗಡೆ ಮಾಡಿಲ್ಲ. ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಂದು ಹೋದ ಮೇಲೂ ಅನುದಾನ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಅಪಾರ ಪ್ರಮಾಣ ದಲ್ಲಿ ಹಾನಿಗೀಡಾ ಗಿದೆ. ರೈತರು ಸೇರಿದಂತೆ ಇಡೀ ಉತ್ತರ ಕರ್ನಾಟಕದ ಜನರು ತೊಂದರೆಗೀಡಾಗಿದ್ದರೂ ಕೇಂದ್ರ ಪರಿಹಾರ ಕೊಡದೆ ನಿರ್ಲಕ್ಷ್ಯವಹಿಸಿದೆ. ಪ್ರಧಾನಿ ಮೋದಿ ಪ್ರಕೃತಿ ವಿಕೋಪದ ಪ್ರದೇಶದಲ್ಲಿ ವೀಕ್ಷಣೆ ಮಾಡಲು ಕರ್ನಾಟಕಕ್ಕೆ ಬರದೇ ಇರುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು. ಯಡಿಯೂರಪ್ಪ ದೆಹಲಿಗೆ ಹೋಗ್ತಾರೇ,ಬರ್ತಾರೇ ಹೊರತು ಬೇರೇನೂ ಆಗಿಲ್ಲ. ನೆರೆ ಪರಿಹಾರಕ್ಕೂ ಅನುದಾನ ಕೊಟ್ಟಿಲ್ಲ. ಸಚಿವರಿಗೂ ಖಾತೆ ಹಂಚಲು ಬಿಟ್ಟಿಲ್ಲ. ಮೊನ್ನೆ ಅಮಿತ್ ಶಾನೂ ಭೇಟಿಯಾಗಲು ಅವಕಾಶ ಕೊಟ್ಟಿಲ್ಲ ಎಂದು ಟೀಕಿಸಿದರು.

Translate »