ನಾಳೆ ಮಾಜಿ ಎಂಎಲ್‍ಸಿ ತೋಂಟದಾರ್ಯ ಅಭಿನಂದನಾ ಸಮಾರಂಭ
ಮೈಸೂರು

ನಾಳೆ ಮಾಜಿ ಎಂಎಲ್‍ಸಿ ತೋಂಟದಾರ್ಯ ಅಭಿನಂದನಾ ಸಮಾರಂಭ

May 13, 2019

ಮೈಸೂರು: 77 ವರ್ಷಗಳ ನಿಷ್ಪøಹ, ನಿರ್ಮಲ ಸೇವೆ ಸಲ್ಲಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ, ಮುತ್ಸದ್ಧಿ ರಾಜಕಾರಣಿ ತೋಂಟದಾರ್ಯ ಅವರ ಅಭಿನಂದನಾ ಮತ್ತು ಕೃತಿಗಳ ಲೋಕಾರ್ಪಣಾ ಸಮಾರಂಭ ಮೇ 14ರಂದು ಬೆಳಿಗ್ಗೆ 1.30 ಗಂಟೆಗೆ ವಿಜಯ ನಗರ 1ನೇ ಹಂತದ ಕನ್ನಡ ಸಾಹಿತ್ಯ ಪರಿಷತ್ ರಸ್ತೆಯಲ್ಲಿರುವ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾ ಗಿದೆ. ನಿಷ್ಕಳಂಕ ರಾಜಕಾರಣಿ ತೋಂಟ ದಾರ್ಯ ಅವರನ್ನು ಅಭಿನಂದನಾ ಸಮಿತಿ ವತಿಯಿಂದ ಅಭಿನಂದಿಸಲಾಗುತ್ತಿದೆ ಎಂದು ಅಭಿನಂದನಾ ಸಮಿತಿಯ ಗೊ.ರು.ಪರಮೇಶ್ವರಪ್ಪ ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಯವರ ಸಾನ್ನಿಧ್ಯ ದಲ್ಲಿ ತೋಂಟದಾರ್ಯ ಮತ್ತು ಡಾ.ಕಮಲಕುಮಾರಿ ಅವರನ್ನು ಅಭಿನಂದಿಸಲಾಗುವುದು. ಇದೇ ಸಂದರ್ಭದಲ್ಲಿ ಗುರು ಎಸ್.ಬಳೆ ಬರೆದಿರುವ `ಶಕ್ತಿವಿಶಿಷ್ಟಾದ್ವೈತ’ ಮತ್ತು `ಪಂಚಪೀಠಗಳ ಪರಂ ಪರೆ’ ಕೃತಿಗಳನ್ನು ಕುಂದೂರು ಮಠದ ಡಾ.ಶರತ್‍ಚಂದ್ರ ಸ್ವಾಮೀಜಿ ಬಿಡುಗಡೆ ಮಾಡಲಿದ್ದಾರೆ. ವಿಧಾನಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಹೆಚ್.ಶಂಕರಮೂರ್ತಿ ಉದ್ಘಾಟನೆ ನೆರವೇರಿಸುವರು. ಆರ್‍ಎಸ್‍ಎಸ್ ಹಿರಿಯ ಪ್ರಚಾರಕ ಸು.ರಾಮಣ್ಣ ಅಭಿನಂದಿಸಿ ಮಾತನಾಡುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಗೌರವ ಸಲಹೆಗಾರ ಡಾ.ಗೊ.ರು.ಚನ್ನಬಸಪ್ಪ ಅಧ್ಯಕ್ಷತೆ ವಹಿಸು ವರು. ಶಾಸಕ ಎಸ್.ಎ.ರಾಮದಾಸ್, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮ.ಗು.ಸದಾನಂದಯ್ಯ, ಮಹದೇವಪ್ಪ, ಜಗದೀಶ್, ಗುರು ಎಸ್.ಬಳೆ ಉಪಸ್ಥಿತರಿದ್ದರು.

Translate »