ಪಿಯು ಕಾಲೇಜುಗಳ ನಿವೃತ್ತ ನಾಲ್ವರು ಪ್ರಾಂಶುಪಾಲರು, ಡಿಡಿಪಿಯು ಡಾ.ದಯಾನಂದ್ ಅವರಿಗೆ ಸನ್ಮಾನ
ಮೈಸೂರು

ಪಿಯು ಕಾಲೇಜುಗಳ ನಿವೃತ್ತ ನಾಲ್ವರು ಪ್ರಾಂಶುಪಾಲರು, ಡಿಡಿಪಿಯು ಡಾ.ದಯಾನಂದ್ ಅವರಿಗೆ ಸನ್ಮಾನ

May 28, 2019

ಮೈಸೂರು: ಸದ್ಯದಲ್ಲೇ ನಿವೃತ್ತರಾಗಲಿರುವ ಇಬ್ಬರು ಪ್ರಾಂಶುಪಾಲರನ್ನು ಹಾಗೂ ಮೇ 31ರಂದು ನಿವೃತ್ತರಾಗಲಿರುವ ಇಬ್ಬರು ಸೇರಿದಂತೆ ಈಗಾಗಲೇ ನಿವೃತ್ತರಾಗಿರುವ ನಾಲ್ವರು ಒಟ್ಟು 6 ಮಂದಿ ಪಿಯು ಕಾಲೇಜುಗಳ ಪ್ರಾಂಶುಪಾಲರು ಹಾಗೂ ಮೇ 31ರಂದು ನಿವೃತ್ತರಾಗಲಿರುವ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ದಯಾನಂದ್ ಅವರನ್ನು ಸೋಮವಾರ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಆಶ್ರಯದಲ್ಲಿ ಸನ್ಮಾನಿಸಲಾಯಿತು.

ಮೈಸೂರಿನ ಜಯಲಕ್ಷ್ಮಿಪುರಂ ಮಹಾ ಜನ ಪದವಿಪೂರ್ವ ಕಾಲೇಜಿನ ವಿವೇಕಾ ನಂದ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸದ್ಯದಲ್ಲೇ ನಿವೃತ್ತರಾಗಲಿ ರುವ ಜಗದೀಶ್ ಮತ್ತು ಕೃಷ್ಣಾನಾಯಕ್ ಹಾಗೂ ನಿವೃತ್ತರಾಗಿರುವ ಪ್ರಾಂಶುಪಾಲ ರಾದ ಮಂಗಳಗೌರಮ್ಮ, ಉಮಾ ಮಹೇ ಶ್ವರಿ, ಉಮ್ಮೆ ಸಲ್ಮಾ, ಸತೀಶ್ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಮೈಸೂರು ಉಪ ನಿರ್ದೇ ಶಕ ಡಾ.ದಯಾನಂದ್ ಅವರನ್ನೂ ಸಂಘದ ವತಿಯಿಂದ ಸನ್ಮಾನಿಸಲಾ ಯಿತು. ಅಲ್ಲದೆ ವಿವಿಧ ಪದವಿಪೂರ್ವ ಕಾಲೇಜುಗಳಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಗಳಿಸಿದ 25 ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದಕ್ಕೂ ಮುನ್ನ ಮಹಾಜನ ವಿದ್ಯಾಸಂಸ್ಥೆಯ ಕಾರ್ಯ ದರ್ಶಿ ಡಾ.ವಿಜಯಲಕ್ಷ್ಮಿ ಮುರಳೀಧರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೈಸೂರು ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ಅಧ್ಯಕ್ಷ ಎಸ್. ಎಂ.ತುಳಸೀದಾಸ್ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಲಕ್ಷ್ಮೀಪುರಂ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ರತ್ನಾ, ಮಹಾಜನ ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ಎಸ್.ಉಮಾರಾಣಿ, ಪದವಿಪೂರ್ವ ಕಾಲೇಜುಗಳ ಪ್ರಾಂಶು ಪಾಲರ ಸಂಘದ ಉಪಾಧ್ಯಕ್ಷರಾದ ಡಾ. ನಾಗರತ್ನ, ಬಿ.ಮಹದೇವ, ಕಾರ್ಯದರ್ಶಿ ಸೋಮಶೇಖರ್ ಇನ್ನಿತರರು ಉಪಸ್ಥಿತರಿದ್ದರು.

Translate »