ನಾಲ್ವರು ಖದೀಮರ ಬಂಧನ
ಮಂಡ್ಯ

ನಾಲ್ವರು ಖದೀಮರ ಬಂಧನ

February 14, 2019

ಮಂಡ್ಯ: ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಶ್ರೀ ಮುತ್ತುರಾಯಸ್ವಾಮಿ ದೇವಸ್ಥಾನದಲ್ಲಿ ಕಾವಲುಗಾರನನ್ನು ಕೊಲೆ ಮಾಡಿ, ದರೋಡೆ ನಡೆಸಿ ಪರಾರಿಯಾಗಿದ್ದ ನಾಲ್ವರು ಕಳ್ಳರ ತಂಡವನ್ನು ಬಂಧಿಸುವಲ್ಲಿ ಮದ್ದೂರು ಪೆÇಲೀಸರು ಯಶಸ್ವಿಯಾಗಿದ್ದಾರೆ.

ಮದ್ದೂರು ತಾಲೂಕು ದೊಡ್ಡಹೊಸ ಗಾವಿ ಗ್ರಾಮದ ಉಮೇಶ(24), ಮಾಗಡಿ ತಾಲೂಕಿನ ಅಗಲುಕೋಟೆ ಹ್ಯಾಂಡ್ ಪೆÇೀಸ್ಟ್‍ನ ಸುರೇಶ(22), ಗಿರೀಶ್ (34) ಹಾಗೂ ರವಿ (20) ಬಂಧಿತರು.

ತಮ್ಮ ಕಚೇರಿಯಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಈ ನಾಲ್ವರು ಆರೋಪಿಗಳು ಜ.14ರ ಬೆಳಗಿನ ಜಾವ 4 ಗಂಟೆಯಲ್ಲಿ ತೊಪ್ಪನಹಳ್ಳಿ ಗ್ರಾಮದ ಶ್ರೀ ಮುತ್ತುರಾಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಬಂದಿದ್ದು, ದೇವಸ್ಥಾನದ ಬಳಿ ಕಾವಲು ಗಾರನಾಗಿ ಮಲಗಿದ್ದ ಬಸವಯ್ಯನನ್ನು ಕೊಲೆ ಮಾಡಿ ನಂತರ ದರೋಡೆ ಮಾಡಿ ಪರಾರಿಯಾಗಿದ್ದರು.

ಈ ಪ್ರಕರಣ ತನಿಖೆ ನಡೆಸಲು ಎಎಸ್ಪಿ ಬಲರಾಮೇಗೌಡ, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಮದ್ದೂರು ಸಿಪಿಐ ಎನ್.ವಿ.ಮಹೇಶ್ ಅವರ ನೇತೃತ್ವದ ತಂಡ ರಚಿಸಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ತುಮಕೂರು ಬಳಿ ಚಿಂದಿ ಆಯುವವರಂತೆ ನಾಟಕ ವಾಡಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಬಂಧಿತ ಖದೀಮರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ 10 ಸಾವಿರ ನಗದು ಹಾಗೂ 5 ಚಿನ್ನದ ತಾಳಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಗದು ಹಾಗೂ ಚಿನ್ನದ ತಾಳಿಗಳ ಒಟ್ಟು ಮೌಲ್ಯ 60 ಸಾವಿರ ರೂ. ಎಂದು ವಿವರಿಸಿದರು.

ಆರೋಪಿಗಳ ಮೇಲಿನ ಹಿಂದಿನ ಕೇಸುಗಳನ್ನು ಕಲೆ ಹಾಕಿ ಖಚಿತ ಮಾಹಿತಿ ಮೇರೆಗೆ ಬಂಧಿಸಲಾಯಿತು. ಇದೇ ಆರೋಪಿಗಳು ಬೆಸಗರಹಳ್ಳಿ ಠಾಣಾ ವ್ಯಾಪ್ತಿಯ ಬೆಳತೂರು ಸೋಮೇಶ್ವರ ದೇವಸ್ಥಾನ, ಕೊಪ್ಪ ಪೆÇಲೀಸ್ ಠಾಣಾ ವ್ಯಾಪ್ತಿಯ ಬಿದರಕೋಟೆ ಚೆಕ್ಕೆರೆ ಪಟ್ಟಲ ದಮ್ಮ ದೇವಸ್ಥಾನ, ಹಳೇಹಳ್ಳಿ ಮಾಯಮ್ಮ ದೇವಸ್ಥಾನ, ಮದ್ದೂರು ಠಾಣಾ ವ್ಯಾಪ್ತಿಯ ಚನ್ನೇಗೌಡನದೊಡ್ಡಿಯ ಶನೇಶ್ಚರ ಸ್ವಾಮಿ ದೇವಸ್ಥಾನ ಹಾಗೂ ಗೆಜ್ಜಲಗೆರೆ ಪಟ್ಟಲದಮ್ಮ ದೇವಸ್ಥಾನಗಳಲ್ಲಿ ಮತ್ತು ರಾಮ ನಗರ, ತುಮಕೂರು, ಮಂಡ್ಯ, ಕೆಆರ್‍ಎಸ್ ಸೇರಿದಂತೆ ವಿವಿಧೆಡೆ ದೇವಸ್ಥಾನದಲ್ಲಿ ದರೋಡೆ ನಡೆಸಿರುವುದಾಗಿ ವಿಚಾರಣೆ ಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳು ದೇವಸ್ಥಾನದ ಹುಂಡಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು ಎಂದು ತಿಳಿಸಿ ದರು. ಈ ಸಂದರ್ಭದಲ್ಲಿ ಎಎಸ್ಪಿ ಬಲ ರಾಮೇಗೌಡ, ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಶೈಲೇಂದ್ರ ಹಾಗೂ ಮದ್ದೂರು ಸಿಪಿಐ ಎನ್.ವಿ.ಮಹೇಶ್ ಹಾಜರಿದ್ದರು.

Translate »