ನಿವೇಶನ ನೀಡುವುದಾಗಿ ವಂಚನೆ ಆರೋಪ: ಮಹದೇಶ್ವರಸ್ವಾಮಿ ಇನ್‍ಫ್ರಾಟೆಕ್ ಅಂಡ್ ಹೌಸಿಂಗ್  ಡೆವಲಪರ್ಸ್ ಕಂಪನಿ ವಿರುದ್ಧ ಕೇಸ್ ದಾಖಲು
ಮೈಸೂರು

ನಿವೇಶನ ನೀಡುವುದಾಗಿ ವಂಚನೆ ಆರೋಪ: ಮಹದೇಶ್ವರಸ್ವಾಮಿ ಇನ್‍ಫ್ರಾಟೆಕ್ ಅಂಡ್ ಹೌಸಿಂಗ್  ಡೆವಲಪರ್ಸ್ ಕಂಪನಿ ವಿರುದ್ಧ ಕೇಸ್ ದಾಖಲು

May 1, 2018

ಮೈಸೂರು: ಹೌಸಿಂಗ್ ಡೆವಲಪರ್ಸ್ ಕಂಪನಿಯೊಂದು ನಿವೇಶನ ಅಭಿ ವೃದ್ಧಿಪಡಿಸಿ ಗೃಹನಿರ್ಮಾಣ ಸಹಕಾರ ಸಂಘಕ್ಕೆ ನೀಡುವುದಾಗಿ ಮುಂಗಡ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಕೆ.ಆರ್.ಮೊಹಲ್ಲಾದ ತ್ಯಾಗ ರಾಜ ರಸ್ತೆಯಲ್ಲಿರುವ ಮಹದೇಶ್ವರ ಸ್ವಾಮಿ ಇನ್‍ಫ್ರಾಟೆಕ್ ಮತ್ತು ಹೌಸಿಂಗ್ ಡೆವಲ ಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪಾಲುದಾರರಾದ ಎನ್.ಎಸ್.ನಂಜುಂಡ ಸ್ವಾಮಿ ಹಾಗೂ ಎಂ.ಎಸ್.ನಟರಾಜು ಹಾಗೂ ಗೃಹ ನಿರ್ಮಾಣ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್.ಮಹದೇವ ಸ್ವಾಮಿ ವಂಚಿಸಿದವರು.

ಸದರಿ ಕಂಪನಿ ನಿವೇಶನ ಅಭಿವೃದ್ಧಿ ಕರಾರು ಮಾಡಿಕೊಂಡು ಮುಂಗಡ ಹಣ ಪಡೆದು ನಿವೇಶನ ನೀಡದೇ ವಂಚಿಸಿದೆ ಎಂದು ಕರ್ನಾಟಕ ರಾಜ್ಯ ಕಾಲೇಜು ಅಧ್ಯಾಪಕರ ಹಾಗೂ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕೆ.ಆರ್.ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಹದೇಶ್ವರಸ್ವಾಮಿ ಇನ್‍ಫ್ರಾಟೆಕ್ ಮೈಸೂರು ತಾಲೂಕು ವರುಣಾ ಹೋಬಳಿ ಗುಡಮಾದನಹಳ್ಳಿಯಲ್ಲಿ ಸರ್ವೆ ನಂ.28, 29 ಹಾಗೂ 30ರಲ್ಲಿ ಒಟ್ಟು 17.05 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸುವುದಾಗಿ ನಮ್ಮ ಸಂಘಕ್ಕೆ ಸ್ಥಳ ತೋರಿಸಿ ಫಲಾನು ಭವಿಗಳು ಮುಂಗಡ ಪಾವತಿಸು ವಂತೆ ತಿಳಿವಳಿಕೆ ಪತ್ರ ನೀಡಿದ್ದರು.

ಆಸಕ್ತ ಸದಸ್ಯರು ಸಂಘಕ್ಕೆ ಹಣ ಪಾವತಿಸಿದ್ದಾರೆ. ಈ ಸಂಬಂಧ ಸಂಘವು ನಿಗದಿತ ಸ್ಥಳದಲ್ಲಿ 9×12 ಹಾಗೂ 12×18 ಮೀ. ಅಳತೆಯ 250 ನಿವೇಶನಗಳನ್ನು ಟರ್ನ್‍ಕೀ ಆಧಾರದ ಮೇರೆಗೆ ಒಂದು ಚದರ ಅಡಿಗೆ 877 ರೂ. ದರ ನಿಗದಿ ಪಡಿಸುವ ಸಂಬಂಧ 2015ರ ಡಿಸೆಂಬರ್ 18ರಂದು 5 ಲಕ್ಷ ರೂ.ಗಳನ್ನು ಆರ್‍ಟಿ ಜಿಎಸ್ ಮೂಲಕ ಕಂಪನಿಗೆ ಹಣ ಪಾವತಿಸಿ, ಪರಸ್ಪರ ಅಭಿವೃದ್ಧಿ ಕರಾರು ಮಾಡಿಕೊಳ್ಳ ಲಾಗಿತ್ತು. ಕರಾರು ದಿನದಿಂದ ಎರಡು ವರ್ಷದೊಳಗೆ ನಿವೇಶನ ನೀಡುವುದಾಗಿ ಕಂಪನಿ ಒಪ್ಪಿಕೊಂಡಿತ್ತು. ನಂತರ 2018ರ ಏ.17ರವರೆಗೆ ಕಂಪನಿ 1,43, 00,00 (ಒಂದು ಕೋಟಿ ನಲವತ್ಮೂರು ಲಕ್ಷ) ರೂ.ಗಳನ್ನು ಮುಂಗಡ ಪಡೆದಿದೆ ಎಂದು ತಮ್ಮ ದೂರಿನಲ್ಲಿ ಸತೀಶ್ ವಿವರಿಸಿದ್ದಾರೆ.

ಕಂಪನಿ ಕೆಲವೊಂದು ತಾಂತ್ರಿಕ ಕಾರಣ ನೀಡಿ ಕರಾರು ಅವಧಿಯನ್ನು ಆರು ತಿಂಗಳು ಮುಂದುವರಿಸುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ 2017ರ ಅ.17ರವರೆಗೆ ವಿಸ್ತರಿ ಸಲಾಯಿತು. ಈ ನಡುವೆ ಸಂಘವು, ಭೂ ಮಾಲೀಕರೊಂದಿಗೆ ಮಾಡಿಕೊಂಡಿರುವ ಕರಾರು, ಕ್ರಯಪತ್ರ, ಖಾತಾ ವರ್ಗಾವಣೆ ಹಾಗೂ ಇನ್ನಿತರೆ ದಾಖಲೆಗಳನ್ನು ನೀಡು ವಂತೆ ಮಾ.17, 2018ರಂದು ಕಂಪನಿಗೆ ಪತ್ರ ಬರೆದು ಕೋರಿದರೂ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಅಭಿವೃದ್ಧಿ ಕಾಮಗಾರಿಯ ಬಗ್ಗೆ ವರದಿ ನೀಡಿಲ್ಲ. ಅಂತಿಮವಾಗಿ ಕಂಪನಿ ತೋರಿದ ಸ್ಥಳವನ್ನು ಪರಿಶೀಲಿಸಿದಾಗ ಅಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ. ಕಂಪನಿ ಪಡೆದ ಕಾಲಾವಕಾಶವೂ ಮುಗಿದಿದ್ದು, ಸಂಘದ ಸದಸ್ಯರಿಗೆ ನಿವೇಶನವನ್ನೂ ನೀಡಿಲ್ಲ ಹಾಗೂ ಪಡೆದುಕೊಂಡಿದ್ದ ಹಣವನ್ನೂ ಹಿಂದಿರುಗಿಸದೇ ಸಂಘಕ್ಕೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹದೇಶ್ವರಸ್ವಾಮಿ ಇನ್‍ಫ್ರಾಟೆಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎನ್.ಎಸ್.ನಂಜುಂಡಸ್ವಾಮಿ ನಮ್ಮ ಗೃಹ ನಿರ್ಮಾಣ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್.ಮಹದೇವ ಸ್ವಾಮಿ ಯವರ ಸಂಬಂಧಿಯಾಗಿದ್ದು, ಮತ್ತೊಬ್ಬ ಪಾಲುದಾರ ಎಂ.ಎಸ್.ನಟರಾಜು, ಮಹದೇವಸ್ವಾಮಿಯವರ ಅಣ್ಣನಾಗಿ ದ್ದಾನೆ. ಜು.4, 2010 ರಿಂದ ಡಿ.26, 2017ರ ಅವಧಿಯಲ್ಲಿ ಸಂಘದ ಅಧ್ಯಕ್ಷ ರಾಗಿದ್ದ ಮಹದೇವಸ್ವಾಮಿಯವರು ಸಂಘಕ್ಕೆ ಮೋಸ ಮಾಡುವ ದುರು ದ್ದೇಶದಿಂದಲೇ ಸಂಬಂಧಿಕರ ಹೆಸರಲ್ಲಿ ಕಂಪನಿ ತೆರೆದು, ಪರಸ್ಪರ ಅಭಿವೃದ್ಧಿ ಕರಾರು ಮಾಡಿಕೊಂಡು ನೋಂದಣ ಶುಲ್ಕ ಪಾವತಿಸದೇ, ಭೂ ಮಾಲೀಕರ ಜತೆ ಒಪ್ಪಂದ ಮಾಡಿಕೊಳ್ಳದೇ, ಸುಳ್ಳು ಮಾಹಿತಿ ಸೃಷ್ಟಿಸಿ ಅವರ ಆಡಳಿತಾ ವಧಿಯಲ್ಲಿ ಸಂಘದಿಂದ ಒಂದು ಕೋಟಿ ನಲತ್ಮೂರು ಲಕ್ಷ ರೂ.ಗಳನ್ನು ಸಂಬಂ ಧಿಕರ ಡೆವಲಪರ್ಸ್ ಕಂಪನಿಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಈ ಸಂಬಂಧ ವಂಚಕರಾದ ಎಂ.ಎಸ್. ಮಹದೇವಸ್ವಾಮಿ, ಎನ್.ಎಸ್.ನಂಜುಂಡ ಸ್ವಾಮಿ ಹಾಗೂ ಎಂ.ಎಸ್.ನಟರಾಜು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ದೂರಿನಲ್ಲಿ ಕೋರಿದ್ದಾರೆ.

Translate »