ಮತದಾನಕ್ಕೆ ಐದು ದಿನ ಮುಂಚೆ ಮತದಾರರ ಚೀಟಿ ಮನೆ ಮನೆಗೆ ಹಂಚಿಕೆ
ಮೈಸೂರು

ಮತದಾನಕ್ಕೆ ಐದು ದಿನ ಮುಂಚೆ ಮತದಾರರ ಚೀಟಿ ಮನೆ ಮನೆಗೆ ಹಂಚಿಕೆ

May 1, 2018

ಮೈಸೂರು: ವಿಧಾನ ಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳಿದ್ದು, ಮತದಾರರ ಚೀಟಿಗಳನ್ನು ಮತದಾರರಿಗೆ ತಲುಪಿಸಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ ಎಂದು ಸ್ವೀಪ್ ಜಿಲ್ಲಾ ಸಮಿತಿ ಅಧ್ಯಕ್ಷರೂ ಆದ ಜಿಪಂ ಸಿಇಓ ಪಿ.ಶಿವಶಂಕರ್ ತಿಳಿಸಿದರು.

ಮೈಸೂರು ಜಿಪಂ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮತದಾನದ ದಿನ ದಂದು ಯಾವುದೇ ಗೊಂದಲಕ್ಕೆ ಆಸ್ಪದ ನೀಡಬಾರದೆಂದು ಮತದಾನಕ್ಕೆ ಐದು ದಿನಗಳು ಬಾಕಿ ಇರುವಾಗಲೇ ಬಿಎಲ್‍ಓ ಗಳ ಮೂಲಕ ಪ್ರತಿ ಮನೆಗೂ ಮತ ದಾರರ ಚೀಟಿ (ವೋಟರ್ಸ್ ಸ್ಲಿಪ್) ವಿತರಿ ಸಲಾಗುವುದು ಎಂದು ಹೇಳಿದರು.

ಮತದಾನ ಪ್ರಮಾಣ ಹೆಚ್ಚಿಸಲು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಸ್ವೀಪ್ (ವ್ಯವ ಸ್ಥಿತವಾದ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ) ವತಿಯಿಂದ ಈಗಾ ಗಲೇ ನಡೆಸಿದ್ದು, ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಅತೀ ಕಡಿಮೆ ಮತದಾನ ವಾಗಿರುವ ಪ್ರದೇಶಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಮನೆ ಮನೆಗೆ ಬಳಿಗೆ ತೆರಳಿ ಜಾಗೃತಿ ಮೂಡಿಸಲಾಗಿದೆ ಎಂದರು.

ಯುವ ಮತದಾರರನ್ನು ನೋಂದಾಯಿ ಸಲು ಹಾಗೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ 6500ಕ್ಕೂ ಹೆಚ್ಚು ವಿವಿಧ ಬಗೆಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಕಡಿಮೆ ಮತದಾನವಾಗಿರುವ ಶೇ.10ರಷ್ಟು ಮತಗಟ್ಟೆಗಳನ್ನು ಗುರುತಿಸಿ ಅಂತಹ ಪ್ರದೇಶ ಗಳಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗಿದೆ. ಮೈಸೂರು ನಗರದ ಕೆಆರ್, ಎನ್‍ಆರ್ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಕಳೆದ 2013ರ ಚುನಾವಣೆ ಯಲ್ಲಿ ಕ್ರಮವಾಗಿ ಶೇ.55.11, 58.49 ಹಾಗೂ 54.44ರಷ್ಟು ಸಾಧಾರಣಾ ಮತ ದಾನವಾಗಿದ್ದು, ಇದನ್ನು ಈ ಬಾರಿ ಉತ್ತಮ ಗೊಳಿಸುವ ನಿಟ್ಟಿನಲ್ಲಿ ಮೂರು ಕ್ಷೇತ್ರಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮನವರಿಕೆ ಮಾಡಿ ಕೊಡಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ 650ಕ್ಕೂ ಹೆಚ್ಚು ಮತದಾ ರರ ಸಾಕ್ಷರತಾ ಕೇಂದ್ರಗಳನ್ನು ಸ್ಥಾಪಿಸಿ ಮತದಾನದ ಬಗ್ಗೆ ಅರಿವು ಮೂಡಿಸಿದ್ದು, ಜಿಲ್ಲೆಯ 52 ಕಾಲೇಜುಗಳಲ್ಲಿ ಕ್ಯಾಂಪನ್ ಅಂಬಾಸಿಡರ್‍ಗಳನ್ನು ನೇಮಿಸಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಉತ್ತೇಜನ ನೀಡಲಾ ಗಿದೆ. ಜೊತೆಗೆ ಜಿಲ್ಲೆಯಲ್ಲಿ 2687 ಮತಗಟ್ಟೆ ಹಂತದ ಸಮಿತಿಗಳನ್ನು ರಚಿಸಿ ಮತದಾನದ ಅರಿವು ಮೂಡಿಸಲಾಗುತ್ತಿದೆ ಎಂದರು.

24 ಪಿಂಕ್/ಸಖಿ ಮತಗಟ್ಟೆ: ಜಿಲ್ಲೆಯಲ್ಲಿ ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿ ರುವ ಮತಗಟ್ಟೆಗಳಲ್ಲಿ 24 ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಂಡು ಅವುಗಳಿಗೆ ಮಹಿಳಾ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಇವುಗಳನ್ನು ಪಿಂಕ್ ಇಲ್ಲವೇ ಸಖಿ ಮತಗಟ್ಟೆಗಳೆಂದು ಹೆಸರಿಸಲಾಗಿದೆ ಎಂದು ತಿಳಿಸಿದರು.

ಮೈಸೂರು ಪರಂಪರೆಯನ್ನು ಬಿಂಬಿಸುವ ಮತಗಟ್ಟೆ: ಆದಿವಾಸಿ ಸಮುದಾಯ ಹೆಚ್ಚಾ ಗಿರುವ ಕಡೆಗಳಲ್ಲಿ `ಟ್ರೈಬಲ್ (ಬುಡ ಕಟ್ಟು)’ ಅಥವಾ `ಎತ್ನಿಕ್ (ಜನಾಂಗೀಯ)’ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಹೆಚ್‍ಡಿ ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದರಂತೆ ಇಂತಹ ಮತಗಟ್ಟೆ ಗಳನ್ನು ಸ್ಥಾಪಿಸುತ್ತಿದ್ದು, ಬುಡಕಟ್ಟು ಸಮು ದಾಯಗಳ ಪರಂಪರೆಗೆ ಅನುಗುಣವಾಗಿ ಇವುಗಳ ವಿನ್ಯಾಸ ಮಾಡಲಾಗುತ್ತದೆ. ಅದೇ ರೀತಿ ಹುಣಸೂರು ವಿಧಾನಸಭಾ ಕ್ಷೇತ್ರ ದಲ್ಲಿ ಒಂದು ಮತಗಟ್ಟೆಯನ್ನು `ಮಾದರಿ ಮತಗಟ್ಟೆ’ ಆಗಿ ಮಾಡುತ್ತಿದ್ದು, ಈ ಮತ ಗಟ್ಟೆಯಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದ ಉಡುಪು ಧರಿಸಿ ಮತಗಟ್ಟೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ವಿಶೇಷ ಚೇತನರ ಮತಗಟ್ಟೆ: ವಿಶೇಷ ಚೇತನ ಸ್ನೇಹಿಯಾದ ಮತಗಟ್ಟೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಪ್ರತಿ ಕ್ಷೇತ್ರ ದಲ್ಲೂ ಕನಿಷ್ಠ ಒಂದನ್ನಾದರೂ ಈ ರೀತಿ ಮತಗಟ್ಟೆ ಸಿದ್ಧಪಡಿಸುವ ಚಿಂತನೆ ಇದ್ದು, ಈ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ವಿಶೇಷ ಚೇತನ ಅಧಿಕಾರಿ ಮತ್ತು ಸಿಬ್ಬಂದಿ ಯನ್ನೇ ನಿಯೋಜನೆ ಮಾಡಬೇಕೆಂದು ಆಲೋಚಿಸಲಾಗಿದೆ. ಜೊತೆಗೆ 563 ವ್ಹೀಲ್ ಚೇರ್‍ಗಳ ವ್ಯವಸ್ಥೆಯನ್ನು ಮಾಡಲಾಗು ವುದು. ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ರ್ಯಾಂಪ್, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದರು. ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳುವಳಿಕೆ ಮೂಡಿಸ ಲಾಗುತ್ತಿದೆ. ಕಡ್ಡಾಯ ಮತದಾನದ ಮಹತ್ವ ಸಾರಲು ಬೀದಿ ನಾಟಕಗಳನ್ನು ಪ್ರದರ್ಶಿಸ ಲಾಗುತ್ತಿದೆ. ನಾನಾ ಕಾರಣಗಳಿಂದ ಮತ ದಾನ ಬಹಿಷ್ಕಾರ ಮೊದಲಾದ ಪ್ರಕರಣ ಗಳು ವರದಿಯಾದ ಪ್ರದೇಶಗಳಿಗೆ ಸ್ವೀಪ್ ಸಮಿತಿ ತಂಡಗಳು ತೆರಳಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ವಹಿಸಿ ಅವರನ್ನು ಮತದಾನದಲ್ಲಿ ಭಾಗ ವಹಿಸಲು ಮನ ವೊಲಿಸಲಾಗುತ್ತಿದೆ ಎಂದು ತಿಳಿಸಿದರು. ಮೈಸೂರು ಜಿಲ್ಲೆಯ ಸ್ವೀಪ್ ಸಮಿತಿಯ ಬ್ರಾಂಡ್ ಅಂಬಾಸಿಡರ್ ನಿವೇದಿತಾ ಗೌಡ, ಸ್ವೀಪ್ ನಗರ ಸಮಿತಿ ಅಧ್ಯಕ್ಷ ಜಿ.ಎಂ. ರವೀಂದ್ರ, ಜಿಲ್ಲಾ ಸಮಿತಿ ಸದಸ್ಯ ಕಾರ್ಯ ದರ್ಶಿ ಕೃಷ್ಣ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »