ಶಿಸ್ತು, ಸಮಯ ಪ್ರಜ್ಞೆಯಿಂದ ಭವಿಷ್ಯದ ಜೀವನ ಸುಗಮ
ಮೈಸೂರು

ಶಿಸ್ತು, ಸಮಯ ಪ್ರಜ್ಞೆಯಿಂದ ಭವಿಷ್ಯದ ಜೀವನ ಸುಗಮ

ಮೈಸೂರು, ಜು.13- ಸರಸ್ವತಿಪುರಂ ಜೆಎಸ್‍ಎಸ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆ ಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಎಸ್‍ಎಸ್ ಮಹಾವಿದ್ಯಾಪೀಠ, ಸಾಮಾನ್ಯ ಶಿಕ್ಷಣ ವಿಭಾಗದ ಉಪ ನಿರ್ದೇ ಶಕರಾದ ಹೆಚ್.ವಿ.ಶೇಷಗಿರಿರಾವ್ ವಹಿಸಿ ವಿದ್ಯಾರ್ಥಿಗಳು ಶಾಲಾ ಜೀವನದಲ್ಲೇ ಶಿಸ್ತು, ಸಮಯ ಪ್ರಜ್ಞೆಯನ್ನು ರೂಢಿಸಿಕೊಂಡರೆ ತಮ್ಮ ಮುಂದಿನ ಜೀವನ ಸುಗಮವಾಗಿ ರುತ್ತದೆ. ತಾವು ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ದೇಶವನ್ನು ಪ್ರಗತಿ ಯತ್ತ ಮುನ್ನಡೆಸಬೇಕು ಎಂದರು.

ಶಾರದಾ ವಿಲಾಸ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೊ. ಹೆಚ್.ಎಸ್. ಉಮೇಶ್ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಶೈಕ್ಷಣಿಕ ವರ್ಷದ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರಲಿ. ತಮ್ಮಲ್ಲಿ ಸ್ಪರ್ಧಾತ್ಮಕ ಯುಗವನ್ನು ಎದುರಿಸಿ ನಿಲ್ಲುವ ಶಕ್ತಿ ಬರಲಿ. ಪ್ರತಿ ಯೊಬ್ಬರಲ್ಲೂ ಪ್ರತಿಭೆ ಇದ್ದು,ಅದನ್ನು ಗುರುತಿಸಿ ಹೊರತೆಗೆಯುವ ಕೆಲಸ ವಿದ್ಯಾರ್ಥಿಸಂಘದಿಂದ ಆಗಬೇಕಾಗಿರುವು ದರಿಂದ ಸುಪ್ತಪ್ರತಿಭೆಗಳಿಗೆ ಇದು ವೇದಿಕೆ ಯಾಗಲಿ ಎಂದು ಹಾರೈಸಿದರು.

ಪ್ರತಿಭಾ ಪುರಸ್ಕಾರ ಮಾಡಿದ ಜೆಎಸ್‍ಎಸ್ ಸಾಮಾನ್ಯ ಶಿಕ್ಷಣ ವಿಭಾಗದ ಕಚೇರಿ ಅಧೀಕ್ಷಕ ದುಂಡುಮಾದಪ್ಪ ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಗಳಿಗೆ ಸ್ಮರಣಿಕೆಗಳನ್ನು ನೀಡಿ ನಿಮ್ಮ ಪ್ರಗತಿಗೆ ಕಾರಣರಾದ ಗುರುಗಳನ್ನು ಸ್ಮರಿಸಿ ಕೊಳ್ಳಬೇಕು, ಗುರುಗಳ ಮಾರ್ಗದರ್ಶನ ದೊಂದಿಗೆ ಮುನ್ನಡೆದರೆ ತಮಗೆ ಯಶಸ್ಸು ಖಂಡಿತ ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ತಮ್ಮ ಬಹುಮುಖ ಪ್ರತಿಭೆ ಯನ್ನು ಹೊರಹಾಕಲು ಇರುವ ಅವಕಾಶ ಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮಲ್ಲಿ ರುವ ಪ್ರತಿಭೆಯನ್ನು ಅರಳಿಸಿ ಬೆಳೆಸಿಕೊಳ್ಳ ಬೇಕು, ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆಯಾದರೆ ಮಾತ್ರ ತಾವು ಮುಂದುವರೆಯಲು ಸಾಧ್ಯ ಎಂದರು.

ಪ್ರಭಾರ ಮುಖ್ಯೋಪಾಧ್ಯಾಯ ಷಣ್ಮುಖ ಉಪಸ್ಥಿತರಿದ್ದರು ಕು. ತೇಜಸ್ವಿನಿ ಮತ್ತು ತಂಡದವರು ಪ್ರಾರ್ಥಿಸಿದರು. ಕು. ಸೋನುಶ್ರೀ ಮತ್ತು ಸ್ಪೂರ್ತಿ ವಿವಿಧ ಸಂಘಗಳ ವರದಿ ಗಳನ್ನು ಮಂಡಿಸಿದರೆ, ಕು.ಅಶ್ವಿನಿ ವಂದಿಸಿ ದರು. ಕು.ಹೇಮಲಕ್ಷ್ಮಿ ನಿರೂಪಿಸಿದರು. ನಂತರ ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

July 14, 2019

Leave a Reply

Your email address will not be published. Required fields are marked *