ಜೆಡಿಎಸ್ ಕಚೇರಿಯಲ್ಲಿ ಗಾಂಧಿ ಜಯಂತಿ
ಮೈಸೂರು

ಜೆಡಿಎಸ್ ಕಚೇರಿಯಲ್ಲಿ ಗಾಂಧಿ ಜಯಂತಿ

October 3, 2018

ಮೈಸೂರು: ಮಹಾತ್ಮ ಗಾಂಧೀಯವರ 150ನೇ ಜನ್ಮ ದಿನಾಚರಣೆಯನ್ನು ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಆಚರಿಸಲಾಯಿತು.

ಗಾಂಧೀಯವರ ಭಾವಚಿತ್ರಕ್ಕೆ ಪುಷ್ಪ ನಮನದೊಂದಿಗೆ ನುಡಿ ನಮನ ಸಲ್ಲಿಸಲಾಯಿತು. ಇದೇ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಹಾಗೂ ಪಕ್ಷದ ಮುಖಂಡ ಎಸ್‍ಬಿಎಂ ಮಂಜು, ಗಾಂಧೀಯವರು ತಮ್ಮ ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಇಂದು ಅವರ 150ನೇ ಜನ್ಮದಿನವನ್ನು ಇಡೀ ದೇಶದಾದ್ಯಂತ ಸಂಭ್ರಮದಿಂದ ಆಚರಿಸುತ್ತಿದೆ ಎಂದು ತಿಳಿಸಿದರು.

ಬಳಿಕ ಮಾತನಾಡಿದ ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಗಾಂಧೀಯವರು ದೇಶವನ್ನು ಬ್ರಿಟೀಷರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿದ ಮಹಾತ್ಮರು. ಅವರು ಈ ದೇಶಕ್ಕೆ ಕೊಟ್ಟಿರುವ ಕೊಡುಗೆ ಅಪಾರವಾಗಿದ್ದು, ಅವರ 150ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಬಳಿಕ ಸಿಹಿ ವಿತರಣೆ ಮಾಡಲಾಯಿತು. ಪಕ್ಷದ ಪಾಲಿಕೆ ಸದಸ್ಯರಾದ ಪ್ರೇಮಾಶಂಕರೇಗೌಡ, ರಮೇಶ್, ಭಾಗ್ಯ, ರೇಷ್ಮಾಭಾನು, ನಿರ್ಮಲ ಹರೀಶ್, ಜೆಡಿಎಸ್ ಮಾಜಿ ನಗರಾಧ್ಯಕ್ಷ ರಾಜಣ್ಣ, ಪಕ್ಷದ ಮುಖಂಡರಾದ ಕೆ.ವಿ.ಮಲ್ಲೇಶ್, ಪಾಲ್ಕನ್ ಬೋರೇಗೌಡ, ಎಸ್.ಬಾಲು, ಕೃಷ್ಣ, ರಾಮಣ್ಣ, ಮುದ್ದುರಾಜ್, ಸೈಯದ್ ರಹಮತ್ ಉಲ್ಲಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

Translate »