ಮೈಸೂರು: ಮಹಾತ್ಮ ಗಾಂಧೀಜಿಯವರ ಬಗ್ಗೆ ಅಪಾರ ಅನು ಭವ ಪಡೆದಿರುವವರ ಸಂತತಿ ಕ್ಷೀಣಿಸು ತ್ತಿದ್ದು, ಇದರಿಂದಾಗಿ ಮುಂದಿನ ಪೀಳಿಗೆಗೆ ಗಾಂಧೀಜಿಯವರ ಬಗ್ಗೆ ತಿಳಿಸುವವರ ಕೊರತೆ ಉಂಟಾಗುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.
ಮೈಸೂರಿನ ಮಾನಸಗಂಗೋತ್ರಿ ಗಾಂಧೀ ಭವನದಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾ ಟಕ ಶಿಲ್ಪಕಲಾ ಅಕಾಡೆಮಿ, ಮೈಸೂರು ರಂಗಾಯಣ, ಗಾಂಧಿ ಅಧ್ಯಯನ ಕೇಂದ್ರ ಜಂಟಿಯಾಗಿ ಆಯೋಜಿಸಿರುವ 12 ದಿನ ಗಳ ಗಾಂಧೀಜಿ ಕುರಿತ ಸಿಮೆಂಟ್ ಶಿಲ್ಪ ಶಿಬಿರಕ್ಕೆ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಯುವಕರಿಗೆ ದೇಶದ ಬಗ್ಗೆ, ಗಾಂಧೀಜಿ ಯವರ ಚಳವಳಿ, ಉಪ್ಪಿನ ಸತ್ಯಾಗ್ರಹ, ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿ ಸಿದ್ದು, ಅಹಿಂಸಾತ್ಮಕ ಹೋರಾಟ, ಶಾಂತಿ ಸಂದೇಶ ಇನ್ನಿತರ ವಿಚಾರಗಳನ್ನು ಯುವ ಜನಾಂಗಕ್ಕೆ ತಿಳಿಸುವ ಹಿರಿಯ ಗಾಂಧಿ ಮಾರ್ಗಿಗಳ ಕೊರತೆ ಎದುರಾಗುತ್ತಿದೆ. ಅವರ ಹೋರಾಟ, ಸಂದೇಶ, ಅವರ ಸರಳತೆ ಮತ್ತು ದೇಶದ ಬಗ್ಗೆ ಅವರಲ್ಲಿದ್ದ ಕನಸು ಗಳನ್ನು ತಿಳಿಸಲು ಹಿಂದೆ ಬಿದ್ದಿದ್ದೇವೆ ಎಂದು ಬೇಸರದಿಂದ ಹೇಳಿದರು.
ಮಹಾತ್ಮಗಾಂಧೀಜಿಯವರು ಜೀವನ ದಲ್ಲಿ ತಾಯಿಯನ್ನೇ ನೋಡಲಿಕ್ಕಾಗದ ಸನ್ನಿ ವೇಶದಲ್ಲಿ ಬೆಳೆದವರು. ಆದರೆ ಇದಾವು ದನ್ನೂ ಲೆಕ್ಕಿಸದೆ ದೇಶದ ಜನತೆ ಬ್ರಿಟಿಷರ ಕಪಿಮುಷ್ಠಿಯಿಂದ ಹೊರಬರಬೇಕು. ಜೀತಪದ್ಧತಿಯಿಂದ ಹೊರಬರಬೇಕು. ಬ್ರಿಟಿ ಷರ ಆಡಳಿತ ತೊಡೆದು ಹಾಕಲು ಶಾಂತಿ ಸತ್ಯಾಗ್ರಹ, ಅಹಿಂಸಾತ್ಮಕ ಚಳುವಳಿಯಿಂದ ಮಾತ್ರ ಸಾಧ್ಯ ಎಂಬುದನ್ನು ಅರಿತು, ಅನು ಸರಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ ಈ ವಿಚಾರಗಳನ್ನು ನಾವು ಯುವ ಜನರಿಗೆ ಸರಿಯಾದ ರೀತಿಯಲ್ಲಿ ತಿಳಿಸು ತ್ತಿಲ್ಲ ಎಂದು ವಿಷಾದಿಸಿದರು.
ಉನ್ನತ ಶಿಕ್ಷಣದಲ್ಲಿ ಹಿನ್ನಡೆ ಏಕೆ?: ತಾವು ಉನ್ನತ ಶಿಕ್ಷಣ ಸಚಿವರಾದ ಬಳಿಕ ಎರಡು ಬಾರಿ ಎಲ್ಲಾ ಕುಲಪತಿಗಳ ಸಭೆ ಕರೆದು ಅವ ರೊಂದಿಗೆ ಉನ್ನತ ಶಿಕ್ಷಣದ ಸ್ಥಿತಿ-ಗತಿ ಕುರಿತು ಚರ್ಚಿಸಿದ್ದೇನೆ. ಉನ್ನತ ಶಿಕ್ಷಣದಲ್ಲಿ ನಾವೇಕೆ ಹಿಂದುಳಿದಿದ್ದೇವೆ?. ನಮ್ಮ ಶಿಕ್ಷಣ ಯಾವ ದಿಕ್ಕಿನಲ್ಲಿದೆ? ಎಂದು ಒಮ್ಮೆ ಆತ್ಮಾವ ಲೋಕನ ಮಾಡಿಕೊಳ್ಳಿ ಎಂದು ಎಲ್ಲಾ ಕುಲಪತಿಗಳಿಗೆ ತಿಳಿಸಿದ್ದೆ ಎಂದರು.
ಎರಡು ಬಾರಿ ಎಲ್ಲಾ ಕುಲಪತಿಗಳ ಸಭೆ ಕರೆದಿದ್ದೆ. 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ದೇಶ, ವಿದೇಶಗಳ ವಿವಿಗಳಿಗೆ ಹೋಲಿಸಿದರೆ ನಮ್ಮಲ್ಲಿ ಪದವೀಧರರಾದವರ ಕೌಶಲ್ಯಕ್ಕೆ ತಕ್ಕಂತೆ ಶೇ.20ರಷ್ಟು ಉದ್ಯೋಗವೂ ದೊರೆ ಯುತ್ತಿಲ್ಲದರ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿದ್ದಾಗಿ ತಿಳಿಸಿದರು. ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಆಯಿಷಾ ಎಂ.ಶರೀಫ್ ಅಧ್ಯ ಕ್ಷತೆ ವಹಿಸಿದ್ದರು. ಕರ್ನಾಟಕ ಶಿಲ್ಪಕಲಾ ಅಕಾ ಡೆಮಿ ಅಧ್ಯಕ್ಷ ರು.ಕಾಳಾಚಾರ್, ಅಂತಾ ರಾಷ್ಟ್ರೀಯ ಕಲಾವಿದ ಕೆ.ಟಿ.ಶಿವಪ್ರಸಾದ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಂ.ಎಸ್.ಶೇಖರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿ ಕಾರ್ಜುನಸ್ವಾಮಿ, ಶಿಲ್ಪಕಲಾ ಅಕಾಡೆಮಿ ಸದಸ್ಯ ಸಂಚಾಲಕ ಕೃಷ್ಣ ನಾಯಕ್, ಕೆ.ವಿ. ವೀರಪ್ಪ, ಪ.ಮಲ್ಲೇಶ್, ಡಾ.ಎಂ.ಜಿ.ಕೃಷ್ಣ ಮೂರ್ತಿ, ಬಿ.ಕೆ.ಶಿವಣ್ಣ, ಶಿಬಿರದ ನಿರ್ದೇ ಶಕ ನಾರಾಯಣರಾವ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.