ಕಾಂಗ್ರೆಸ್‍ನ ಗೀತಾಮಹದೇವಪ್ರಸಾದ್, ಜೆಡಿಎಸ್-ಬಿಎಸ್‍ಪಿ ಅಭ್ಯರ್ಥಿ ಗುರುಪ್ರಸಾದ್ ನಾಮಪತ್ರ ಸಲ್ಲಿಕೆ
ಚಾಮರಾಜನಗರ

ಕಾಂಗ್ರೆಸ್‍ನ ಗೀತಾಮಹದೇವಪ್ರಸಾದ್, ಜೆಡಿಎಸ್-ಬಿಎಸ್‍ಪಿ ಅಭ್ಯರ್ಥಿ ಗುರುಪ್ರಸಾದ್ ನಾಮಪತ್ರ ಸಲ್ಲಿಕೆ

April 24, 2018

ಗುಂಡ್ಲುಪೇಟೆ: ಇಲ್ಲಿನ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ಹಾಗೂ ಜೆಡಿಎಸ್ -ಬಿಎಸ್‍ಪಿ ಮೈತ್ತಿಕೂಟದ ಅಭ್ಯರ್ಥಿ ಸೋಮಹಳ್ಳಿ ಎಸ್.ಗುರುಪ್ರಸಾದ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಮೊದಲಿಗೆ ಸಚಿವೆ ಗೀತಾಮಹದೇವ ಪ್ರಸಾದ್ ಹಾಗೂ ಪುತ್ರ ಹೆಚ್.ಎಂ. ಗಣೇಶ್ ಪ್ರಸಾದ್ ತಮ್ಮ ಕುಟುಂಬ ಸದಸ್ಯರೊಡ ಗೂಡಿ ತಾಲೂಕಿನ ಪಾರ್ವತಿ ಬೆಟ್ಟದಲ್ಲಿ ಪಾರ್ವತಾಂಬೆಗೆ ಪೂಜೆ ಸಲ್ಲಿಸಿ ನಂತರ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ವಿಜಯನಾರಾಯಣಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿ ಸಂಸದ ಆರ್. ಧ್ರುವನಾರಾಯಣ್ ಸಾಥ್ ನೀಡಿದರು. ನಂತರ ಪಕ್ಷದ ಮುಖಂಡರು ಮತ್ತು ಸಹಸ್ರಾರು ಬೆಂಬಲಿಗರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣ ಗೆಯಲ್ಲಿ ತೆರಳಿ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಸತೀಶ್ ಅವರಿಗೆ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಯೊಂದಿಗೆ ಕಾಡಾ ಅಧ್ಯಕ್ಷ ಹೆಚ್.ಎಸ್. ನಂಜಪ್ಪ, ಮಾಜಿ ಸಂಸದ ಎ.ಸಿದ್ದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು ಜೊತೆಗಿದ್ದರು. ಈ ಸಂದರ್ಭದಲ್ಲಿ ಮುಖಂಡ ರಾದ ಹೆಚ್.ಎಸ್.ನಂಜುಂಡಪ್ರಸಾದ್, ನಾಜಿಮುದ್ದೀನ್, ರಾಜಶೇಖರ್, ಬಿ. ಕುಮಾರಸ್ವಾಮಿ, ಲಿಂಗರಾಜು, ವೆಂಕ ಟಾಚಲ, ಸುರೇಶ್, ಮಂಚಳ್ಳಿಲೋಕೇಶ್, ಕೊಡಸೋಗೆ ಶಿವಬಸಪ್ಪ, ಹೆಚ್.ಎನ್. ಬಸವರಾಜು, ಕೆ.ಎಸ್.ಮಹೇಶ್, ಚನ್ನಪ್ಪ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿ ಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.

ಜೆಡಿಎಸ್-ಬಿಎಸ್‍ಪಿ ಅಭ್ಯರ್ಥಿ: ಜೆಡಿಎಸ್ -ಬಿಎಸ್‍ಪಿ ಮೈತ್ರಿಕೂಟದ ಅಭ್ಯರ್ಥಿ ಸೋಮಹಳ್ಳಿ ಗ್ರಾಮದ ಎಸ್.ಗುರು ಪ್ರಸಾದ್ ಪಟ್ಟಣದ ಬಿಎಸ್‍ಪಿ ಕಚೇರಿ ಯಿಂದ ತಮ್ಮ ಬೆಂಬಲಿಗರೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣ ಗೆ ಮೂಲಕ ಆಗಮಿಸಿ ಬಿಎಸ್‍ಪಿ ಮುಖಂಡ ಡಾ. ನವೀನ್ ಮೌರ್ಯ, ಬಸವಣ್ಣ, ಜೆಡಿಎಸ್ ವಕ್ತಾರ ಟಿಪ್ಪುಸುಲ್ತಾನ್, ಸ್ವಾಮಿ ಅವ ರೊಂದಿಗೆ ಚುನಾವಣಾಧಿಕಾರಿ ಸತೀಶ್ ಅವರಿಗೆ ನಾಮಪತ್ರ ಸಲ್ಲಿಸಿದರು.

Translate »