ಗಿರೀಶ್ ಕಾರ್ನಾಡ್ ಎಲ್ಲಾ ಕ್ಷೇತ್ರದಲ್ಲೂ ಅಸ್ತಿತ್ವವುಳ್ಳವರು
ಮೈಸೂರು

ಗಿರೀಶ್ ಕಾರ್ನಾಡ್ ಎಲ್ಲಾ ಕ್ಷೇತ್ರದಲ್ಲೂ ಅಸ್ತಿತ್ವವುಳ್ಳವರು

June 11, 2019

ಮೈಸೂರು: ಸಾಮಾ ಜಿಕ ಚಿಂತನೆಯುಳ್ಳ ಗಿರೀಶ್ ಕಾರ್ನಾಡ್ ಸಮಕಾಲೀನ ವಾಗ್ವಾದಗಳ ನಾಯಕತ್ವ ವಹಿಸುತ್ತಿದ್ದವರು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಸ್ಮರಿಸಿದರು.

ಮೈಸೂರಿನ ಕಲಾಮಂದಿರದ ಮನೆ ಯಂಗಳದಲ್ಲಿ ಗುರುತು ಬಳಗ, ಶ್ರೀನಿಧಿ ಪುಸ್ತಕಗಳು ಜಂಟಿ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ ಬಳಗದ ಮೊದಲ ವಾರ್ಷಿಕೋ ತ್ಸವದಲ್ಲಿ ಗಿರೀಶ್ ಕಾರ್ನಾಡ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ `ಗುರುತು -ವರ್ತಮಾನಕ್ಕೊಂದು ಕನ್ನಡಿ’ ಕೃತಿ ಬಿಡು ಗಡೆಗೊಳಿಸಿ ಅವರು ಮಾತನಾಡಿದರು.

ಗಿರೀಶ್ ಕಾರ್ನಾಡರು ಕನ್ನಡ ರಂಗ ಭೂಮಿಯ ಅದ್ವಿತೀಯ ನಾಟಕಕಾರರಾಗಿ ದ್ದರು. ಅವರು ರಂಗಭೂಮಿ ಮಾತ್ರವಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಅಸ್ತಿತ್ವ ಉಳ್ಳವರಾಗಿ ದ್ದರು. ಇವರ ನಿಧನದಿಂದ ನವ್ಯ ಕ್ಷೇತ್ರದ ದಿನಗಳು ಹಿಂದೆ ಸರಿದಿವೆ. ನಮ್ಮ ಬದುಕಿನ ಭಾಗವಾಗಿ ಗಿರೀಶ್ ಕಾರ್ನಾಡ್ ನಮ್ಮೊ ಳಗೆ ನೆಲೆಸಿದ್ದಾರೆ. ಸಾವು ಎಂಬುದು ಸಹಜ ಪ್ರಕ್ರಿಯೆ. ಆದರೆ ಅಗಲಿಕೆಯ ನೋವು ನೋವೇ ಎಂದು ವಿಷಾದಿಸಿದರು.

ಪತ್ರಿಕೋದ್ಯಮದ ಯುವ ಜನರೇ ಹೆಚ್ಚಿ ರುವ `ಗುರುತು’ ತಂಡವು ಸಾಮಾಜಿಕ ಶಾಲೆಯಂತಿದೆ ಎಂಬುದನ್ನು ಖಚಿತಪಡಿ ಸಲು ಗುರುತು ಪುಸ್ತಕದಲ್ಲಿನ ಲೇಖನ ಗಳೇ ಸಾಕ್ಷಿ. ಗುರುತು ಸದಸ್ಯರು ವಾರ ಕ್ಕೊಮ್ಮೆ ಸೇರಿ ವಿಷಯವಾರು ಚರ್ಚಿಸು ವಾಗ ಪತ್ರಿಕೋದ್ಯಮದ ಬಗ್ಗೆಯೂ ಚರ್ಚಿಸಿದ್ದಾರೆ. ಮುದ್ರಣ ಮಾಧ್ಯಮ ದೀರ್ಘ ಚರಿತ್ರೆಯಿಂದ ಇಂದಿಗೂ ನೈತಿಕತೆ ಉಳಿಸಿಕೊಂಡಿದೆ ಎಂದರು.

ಕನ್ನಡದ ಮೇಲೆ ಹಿಂದಿ ಹೇರಿಕೆ ಸರಿ ಯಲ್ಲ. ಕೇಂದ್ರ ಸರ್ಕಾರ ಸಂವಿಧಾನದಡಿ ಗುರುತಿಸಿರುವ 22 ಭಾಷೆಗಳನ್ನೂ ರಾಷ್ಟ್ರೀಯ ಭಾಷೆಗಳೆಂದು ಘೋಷಿಸಿದರೆ, ಈ ಭಾಷೆ ಗಳು ಆಯಾ ರಾಜ್ಯಗಳಲ್ಲಿ ಸರ್ವ ಶ್ರೇಷ್ಠ ವಾಗುತ್ತದೆ. ಆದರೆ ಕನ್ನಡ ಮೇಲೆ ಹಿಂದಿ ಹೇರಿಕೆ ಸರಿಯಲ್ಲ ಎಂದು ಹೇಳಿದರು.

ಪುಸ್ತಕದ ಮೊದಲ ಪ್ರತಿ ಸ್ವೀಕರಿಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ವಿಶ್ವವಿದ್ಯಾ ನಿಲಯದ ಚಟುವಟಿಕೆಗಳು ಪ್ರಸ್ತುತ ಸೀಮಿತ ರೇಖೆಯೊಳಗೆ ಇದ್ದು, ನನ್ನ ವಿದ್ಯಾರ್ಥಿ ದಿನಗಳಲ್ಲಿ ಮೈಸೂರು ವಿವಿಯ ಗಾಂಧಿ ಭವನದಲ್ಲಿ ಹಿರಿಯರು ಹಾಗೂ ಯುವಕರು ಸೇರಿ ಚರ್ಚಿಸುತ್ತಿದ್ದರು. ಇದರಿಂದಲೇ ನಾವು ವಿಚಾರಗಳನ್ನು ತಿಳಿದುಕೊಂಡೆವು. ಆದರೆ ಇಂದು ಆ ರೀತಿಯ ವಾತಾವರಣವೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಬನ್ನೂರು ಕೆ.ರಾಜು ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲಾ ಪತ್ರ ಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಲೇಖಕ ಸಂಸ್ಕøತಿ ಸುಬ್ರಹ್ಮಣ್ಯ, `ಗುರುತು-ವರ್ತಮಾನಕ್ಕೊಂದು ಕನ್ನಡಿ’ ಕೃತಿ ಸಂಪಾದಕ ವಿನೋದ್ ಮಹದೇವಪುರ, ಗುರುತು ಬಳಗದ ವರಹಳ್ಳಿ ಆನಂದ, ಎನ್.ಪುನೀತ್ ಮತ್ತಿತರರು ಹಾಜರಿದ್ದರು.

Translate »