2018ರ ‘ಬಹುರೂಪಿ’ ನಾಟಕೋತ್ಸವಕ್ಕೆ ಚಾಲನೆ ನೀಡಿದ್ದ ಗಿರೀಶ್ ಕಾರ್ನಾಡ್
ಮೈಸೂರು

2018ರ ‘ಬಹುರೂಪಿ’ ನಾಟಕೋತ್ಸವಕ್ಕೆ ಚಾಲನೆ ನೀಡಿದ್ದ ಗಿರೀಶ್ ಕಾರ್ನಾಡ್

June 11, 2019

ಮೈಸೂರು: ಹಿರಿಯ ಸಾಹಿತಿ, ನಾಟಕಕಾರ, ನಟ, ನಿರ್ದೇಶಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಗಿರೀಶ್ ಕಾರ್ನಾಡ್ ಅವರು 2018ರ ರಾಷ್ಟ್ರೀಯ ಬಹುರೂಪಿ ನಾಟಕೋತ್ಸವವನ್ನು ಉದ್ಘಾಟಿಸಿದ್ದರು.

ರಂಗಾಯಣದ ವನರಂಗದಲ್ಲಿ `ವಲಸೆ’ ಶೀರ್ಷಿಕೆ ಯಡಿ ನಡೆದ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-2018’ಕ್ಕೆ ವಲಸೆಗಾರರ ವೇಷದಲ್ಲಿ ಬಂದ ಕುಟುಂಬಕ್ಕೆ ಛತ್ರಿ, ನೀರು, ಬೆಲ್ಲ, ಪುಸ್ತಕ ನೀಡುವ ಮೂಲಕ ವಿನೂತನ ವಾಗಿ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು 2ನೇ ಬಾರಿಗೆ ಉದ್ಘಾಟಿಸಿದ್ದರು. ಇದು ಸಾಹಿತಿ ಗಿರೀಶ್ ಕಾರ್ನಾಡ್ ಅವರು ಸಾಂಸ್ಕøತಿಕ ನಗರಿ ಮೈಸೂರಿಗೆ ನೀಡಿದ ಕಡೆಯ ಭೇಟಿಯಾಗಿತ್ತು.

ಈ ವೇಳೆ ಮಾತನಾಡಿದ್ದ ಅವರು, 30 ವರ್ಷಗಳ ಹಿಂದೆ ಈ ರಂಗಾಯಣ ಆರಂಭವಾದಾಗ ಯಾವ ದಿಕ್ಕಿನಲ್ಲಿ ಹೋಗಬೇಕು. ಯಾವ ಸ್ವರೂಪ ಪಡೆಯಬೇಕು ಎಂಬುದರ ಬಗ್ಗೆ ರಾಮಕೃಷ್ಣ ಹೆಗಡೆ ಅವರೊಂದಿಗೆ ನಾನು ಮತ್ತು ಕಾರಂತರು ಚರ್ಚಿಸಿದ್ದೆವು. ಇಂದು ಈ ಸ್ವರೂಪ ನೋಡಿ ಗದ್ಗದಿತನಾಗಿದ್ದೇನೆ. 30 ವರ್ಷದಿಂದ ಉತ್ತಮವಾಗಿ ಬೆಳೆದು ಬಂದಿರುವುದು ನನ್ನ ಪುಣ್ಯ ಎಂದು ಸ್ಮರಿಸಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಆಕ್ಸಿಜನ್ ಬಾಕ್ಸ್ ಮತ್ತು ಉಪಕರಣ ವನ್ನು ಹಾಕಿಕೊಂಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಈ ವೇಳೆ ಅವರು, ಇದು ಆಕ್ಸಿಜನ್ ನನಗೆ 3ನೇ ಪುಪ್ಪುಸವಿದ್ದಂತೆ. ನನ್ನ 2 ಪುಪ್ಪುಸಗಳು ಸಾಕಷ್ಟು ಕೆಲಸ ಮಾಡುತ್ತಿಲ್ಲ. ಹಾಗಾಗಿ 3ನೇ ಪುಪ್ಪುಸದಂತಿರುವ ಆಕ್ಸಿಜನ್ ಉಪಯೋಗಿಸುತ್ತಿದ್ದೇನೆ. ಯಾವ ನಟನೂ ಪೂರ್ಣ ಉಸಿರಾಡದ ಹೊರತು ನಟನೆ ಮಾಡಲು ಸಾಧ್ಯವಿಲ್ಲ ಎಂದರು. ಹಾಗಾಗಿ ಇತ್ತೀಚೆಗೆ `ಟೈಗರ್ ಜಿಂದಾಹೆ’ ಹಿಂದಿ ಚಿತ್ರದಲ್ಲಿ ನಟಿಸುವಾಗ ನನಗೆÀ 3ನೇ ಪುಪ್ಪುಸ ಬೇಕೇಬೇಕು ಎಂದೆ. ಹಾಕಿಕೊಂಡು ನಟನೆ ಮಾಡಿದ್ದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿ ದ್ದರು. ಇದೇ ಸಂದರ್ಭದಲ್ಲಿ ಮಾಜಿ ಶಾಸಕ ವಾಸು ಅವರು ಬಹುರೂಪಿ ರಂಗಸಂಚಿಕೆಯನ್ನು, ನವದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ಮಾಜಿ ನಿರ್ದೇಶಕಿ ಡಾ.ಅನುರಾಧ ಕಪೂರ್ ಬಹುರೂಪಿ ಬುಲೆಟಿನ್‍ಅನ್ನು ಬಿಡುಗಡೆಗೊಳಿಸಿದ್ದರು ಮಾಜಿ ಶಾಸಕ ಸತ್ಯನಾರಾಯಣ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ರಂಗಾಯಣ ನಿರ್ದೇಶಕಿ ಭಾಗೀರಥೀಬಾಯಿ ಕದಂ ಮತ್ತಿತರರು ಉಪಸ್ಥಿತರಿದ್ದರು. ಪ್ರೊ.ಸಿ.ನಾಗಣ್ಣ ಕಾರ್ಯಕ್ರಮವನ್ನು ನಿರೂಪಿಸಿದ್ದರು.

Translate »