ನಮ್ಮಲ್ಲಿ ನಾಲ್ವರಲ್ಲಿ ಒಬ್ಬರಿಗೆ ಟಿಕೆಟ್ ನೀಡಿ
ಚಾಮರಾಜನಗರ

ನಮ್ಮಲ್ಲಿ ನಾಲ್ವರಲ್ಲಿ ಒಬ್ಬರಿಗೆ ಟಿಕೆಟ್ ನೀಡಿ

December 6, 2018

ಚಾಮರಾಜನಗರ: ಚಾಮ ರಾಜನಗರ ಲೋಕಸಭೆ (ಮೀಸಲು) ಕ್ಷೇತ್ರ ದಿಂದ ನಾನು ಸೇರಿದಂತೆ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಹಾಗೂ ಜಿಪಂ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ನಾಲ್ವರು ಪ್ರಬಲ ಆಕಾಂಕ್ಷಿಗಳಾಗಿದ್ದು, ವರಿಷ್ಠರು ನಮ್ಮ ನಾಲ್ವರಲ್ಲಿ ಯಾರಿಗೆ ಟಿಕೆಟ್ ನೀಡಿದರೂ, ನಾವೆಲ್ಲಾ ಒಗ್ಗೂಡಿ ದುಡಿದು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ಮಾಜಿ ಸಚಿವ ಹಾಗೂ ಮೈಸೂರು ಜಿಲ್ಲಾ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕ ರ್ತರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಾಲ್ವರು ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದೇವೆ. ಪಕ್ಷದಲ್ಲಿ ಅನೇಕ ಜವಾಬ್ದಾರಿಗಳನ್ನು ಹೊತ್ತು ಪಕ್ಷದ ಸಂಘಟ ನೆಗಾಗಿ ಹಗಲಿರುಳು ಶ್ರಮಿಸಿದ್ದೇವೆ. ಜೊತೆಗೆ ಕ್ಷೇತ್ರದ ವ್ಯಾಪ್ತಿಗೆ ಸೇರಿಸಿದ್ದೇವೆ. ಹಾಗಾಗಿ, ಪಕ್ಷದ ವರಿಷ್ಠರು ನಮ್ಮ ಸೇವೆÉ, ಹಿರಿತನ ವನ್ನು ಪರಿಗಣಿಸಿ ನಮ್ಮಲ್ಲಿ ಯಾರಾದರೂ ಒಬ್ಬರಿಗೆ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ನಾನು ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದೇನೆ. ಚಾ.ನಗರ ಕ್ಷೇತ್ರ ದಲ್ಲಿ ಸತತವಾಗಿ 4 ಬಾರಿ ಸ್ಪರ್ಧಿಸಿ 2 ಬಾರಿ ಗೆಲುವು ಸಾಧಿಸಿದ್ದೇನೆ. ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಿ.ರಮೇಶ್ ಮೈಸೂರು ಮತ್ತು ಚಾ.ನಗರ ಜಿಲ್ಲೆಗಳಿಂದ ವಿಧಾನ ಪರಿ ಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 12 ವರ್ಷಗಳಿಂದ ಪಕ್ಷದಲ್ಲಿ ಇದ್ದು ಹಿರಿತನ ಹೊಂದಿದ್ದಾರೆ. ಎಸ್.ಮಹದೇವಯ್ಯ ಚಾ.ನಗರ ಜಿಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಂಜ ನಗೂಡು ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಸ್ಪರ್ಧಿಸಿ ಬಹಳ ಕಡಿಮೆ ಅಂತರದಿಂದ ಪರಾಜ ಯಗೊಂಡಿದ್ದಾರೆ. ಇವರಿಗೂ ಸಹ ಪಕ್ಷದಲ್ಲಿ 12 ವರ್ಷಗಳ ಹಿರಿತನವಿದೆ. ಜಿ.ಎನ್.ನಂಜುಂಡ ಸ್ವಾಮಿ ಕೊಳ್ಳೇಗಾಲ ಕ್ಷೇತ್ರದಿಂದ 2 ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಕಳೆದ 12 ವರ್ಷಗಳಿಂದ ಪಕ್ಷದಲ್ಲಿ ಇದ್ದು ಸಂಘಟನೆ ಯಲ್ಲಿ ತೊಡಗಿದ್ದಾರೆ. ಹೀಗಾಗಿ ನಾವು ನಾಲ್ವರು ಮುಂಬರುವ ಲೋಕಸಭಾ ಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದೇವೆ. ನಾವು ಒಗ್ಗೂಡಿ ಪಕ್ಷದ ಅಭ್ಯರ್ಥಿ ಗೆಲುವಿನ ಶ್ರಮಿ ಸುತ್ತೇವೆ ಎಂದರು. ಟಿಕೆಟ್ ಪಡೆಯಲು ಯಾರಾ ದರೂ ಪ್ರಯತ್ನಿಸಬಹುದು. ಟಿಕೆಟ್ ಆಕಾಂಕ್ಷಿ ಗಳೂ ಆಗಬಹುದು. ಆದರೆ, ನಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುವುದು ತಪ್ಪು. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಸರಿ. ಅವರ ಪರ ದುಡಿದು ಗೆಲುವಿಗೆ ಶ್ರಮಿಸು ತ್ತೇವೆ. ಬಿಜೆಪಿ ಗೆಲುವೇ ನಮ್ಮ ಗುರಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಗೊಂದಲ ಬೇಡ. ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರ ದುಡಿಯೋಣ, ಚಾ.ನಗರ ಲೋಕ ಸಭಾ ಕ್ಷೇತ್ರ ಎಂದೂ ಸಹ ನಿವೃತ್ತ ಅಧಿಕಾ ರಿಗೆ ಮಣೆ ಹಾಕುವುದಿಲ್ಲ ಎಂಬುದು ಸ್ಪಷ್ಟ ವಾಗಿದೆ ಎಂದು ಪರೋಕ್ಷವಾಗಿ ಕೆ.ಶಿವ ರಾಮು ಅವರ ಕಾಲೆಳೆದರು. ಸುದ್ದಿಗೋಷ್ಠಿ ಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಹಾಜರಿದ್ದರು.

Translate »