ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಸಭೆ : ನಿಯಮ ಬಾಹಿರವಾಗಿ ಕೊಡಗಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಿದ್ಧತೆ
ಕೊಡಗು

ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ಸಭೆ : ನಿಯಮ ಬಾಹಿರವಾಗಿ ಕೊಡಗಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಿದ್ಧತೆ

December 6, 2018

ಪೊನ್ನಂಪೇಟೆ: ಜಿಲ್ಲೆಯ ಮೂಲಕ ಈಗಾಗಲೇ ಪ್ರಸ್ತ್ತಾವನೆಯಲ್ಲಿರುವ ಬಹು ಪಥದ ರಾಷ್ಟ್ರೀಯ ಹೆದ್ದಾರಿ ಯೋಜ ನೆಯು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿ ಕಾರದ ನಿಯಮ ಮೀರಿ ಹಮ್ಮಿಕೊಂಡಿ ರುವ ಯೋಜನೆಯಾಗಿದ್ದು, ಇದೊಂದು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆ ಯುವ ಯೋಜನೆಯಾಗಿದೆ ಎಂದು ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ಹೇಳಿದ್ದು, ಈಗ ಇರುವ ರಸ್ತೆಯ ಎರಡು ಬದಿಯ ಜಾಗ ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿಯಾಗಿ ರೂಪಿಸಲಿ. ಜಿಲ್ಲೆಗೆ ಮಾರ ಕವಾಗುವ ಬಹುಪಥದ ಹೆದ್ದಾರಿ, ರೈಲ್ವೆ ಮಾರ್ಗದ ವಿರುದ್ದ ಹೋರಾಟ ಮಂದುವ ರೆಸುವುದಾಗಿ ಪುನರುಚ್ಛರಿಸಿದೆ.

ಡಿ.8 ರಂದು ಮಡಿಕೇರಿಯಲ್ಲಿ ಕೊಡಗು ಮಾರಕ ಯೋಜನೆ ವಿರೋಧಿಸಿ ಹಮ್ಮಿ ಕೊಂಡಿರುವ ಬೃಹತ್ ರ್ಯಾಲಿಯ ಬಗ್ಗೆ ನಡೆಸಿದ ಪೂರ್ವಭಾವಿ ಸಭೆಯ ನಂತರ ಈ ಬಗ್ಗೆ ಪೊನ್ನಂಪೇಟೆಯಲ್ಲಿ ವೇದಿಕೆ ಪ್ರಮುಖರು ವಿವರಿಸಿದರು. ವೇದಿಕೆಯ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತ ನಾಡಿ, ಕೊಡಗಿನ ಜನರಲ್ಲಿ ಜಿಲ್ಲೆಯ ಮೂಲಕ ಉದ್ದೇಶಿತ ರೈಲ್ವೆ ಯೋಜನೆಯ ಬಗ್ಗೆ ವಿರೋಧ ಅಭಿಪ್ರಾಯವಿದೆ. ಆದರೆ ರಾಷ್ಟ್ರೀಯ ಹೆದ್ದಾರಿಯನ್ನು ವಿರೋಧಿ ಸುವುದು ಏಕೆ ಎನ್ನುವ ಗೊಂದಲ ಕೆಲ ವರಲ್ಲಿದೆ ಎಂದು ಹೇಳಿದರು.

ಜಿಲ್ಲೆಯ ಮೂಲಕ ಈಗಾಗಲೇ ಕೊಡ್ಲಿ ಪೇಟೆ-ಕುಟ್ಟ(ಮಡಿಕೇರಿ-ಮೂರ್ನಾಡು- ಗೋಣಿಕೊಪ್ಪ-ಪೊನ್ನಂಪೇಟೆ-ಶ್ರೀಮಂ ಗಲ ಮೂಲಕ) ಪಣತ್ತೂರು-ಭಾಗ ಮಂಡಲ, ಮಾಕುಟ್ಟ-ಮೈಸೂರು (ಬಾಳುಗೋಡು-ಗೋಣಿಕೊಪ್ಪ-ತಿತಿಮತಿ ಮೂಲಕ) ಮೈಸೂರು-ಮಡಿಕೇರಿ (ಕುಶಾಲನಗರ-ಸುಂಟಿಕೊಪ್ಪ ಮೂಲಕ) ನಾಲ್ಕು ರಾಷ್ಟ್ರೀಯ ಹೆದ್ದಾರಿ ಪ್ರಸ್ತ್ತಾವನೆ ಇದೆ. ಇದರಲ್ಲಿ ಈಗಾಗಲೇ ಮೈಸೂರು-ಮಡಿಕೇರಿ ಬಹುಪಥÀದ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಅಕ್ಟೋಬರ್ 10ಕ್ಕೆ ಒಂದು ಜನಸಂಪರ್ಕ ಸಭೆ ನಡೆದಿದೆ. ವಾಸ್ತ ವಾಂಶವೆಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದ ನಿಯಮದಂತೆ ಪ್ರತಿ ದಿನ ಸರಾಸರಿ 10 ಸಾವಿರ ವಾಹನಗಳು ಸಂಚರಿಸುವ ರಸ್ತೆಯನ್ನು ಬಹುಪಥದ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಅವಕಾಶವಿದೆ. ಆದರೆ ಮೇಲೆ ಹೇಳಿರುವ ಯಾವುದೇ ರಸ್ತೆಯ ಲ್ಲಿಯೂ ಪ್ರತಿದಿನ ಸರಾಸರಿ 10 ಸಾವಿರ ವಾಹನ ಸಂಚಾರ ದಟ್ಟಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದ್ದರಿಂದ ಇದು ಸಾರ್ವಜನಿಕ ಹಣವನ್ನು ಕೊಳ್ಳೆಹೊಡೆಯು ವುದಕ್ಕಾಗಿ ವಾಸ್ತವಾಂಶವನ್ನು ಮುಚ್ಚಿಟ್ಟು ಕೊಡಗಿನ ವಿನಾಶಕ್ಕಾಗಿ ರೂಪಿಸಿರುವ ಯೋಜನೆ ಎಂಬುವುದು ಸ್ಪಷ್ಟವಾಗುತ್ತದೆ ಎಂದು ರಾಜೀವ್ ಬೋಪಯ್ಯ ತಿಳಿಸಿದರು.

ವೇದಿಕೆಯ ಸಂಘಟಕರಾದ ಕರ್ನಲ್ ಸಿ.ಪಿ.ಮುತ್ತಣ್ಣ ಮಾತನಾಡಿ, ಈಗಾಗಲೇ ಮೈಸೂರು-ಕುಶಾಲನಗರ-ಮಡಿಕೇರಿ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಜನಸಂಪರ್ಕ ಸಭೆ ನಡೆದಿದೆ. ಇದರ ಮಾಹಿ ತಿಯಂತೆ ಹೆದ್ದಾರಿಯ ಅಗಲ 220 ಅಡಿ ಅಗಿದ್ದು, ಸುಂಟಿಕೊಪ್ಪದ ನಂತರ ಗುಡ್ಡ ಗಾಡು ಪ್ರದೇಶವೆಂದು ಪರಿಗಣಿಸಿ 140 ಅಡಿಗೆ ವಿಸ್ತೀರ್ಣವನ್ನು ಕಡಿತಗೊಳಿಸ ಲಾಗಿದೆ. ಈಗ ಇರುವ ಹೆದ್ದಾರಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿಯಾಗಿದ್ದು, 22 ಅಡಿ ಅಗಲವಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಪ್ರಕಾರಗಳಿದ್ದು, 2 ಪಥ, 4 ಪಥ, 6 ಪಥ, 8 ಪಥ ಹೆದ್ದಾರಿಗಳಿವೆ. ಕೊಡಗಿನ ಭೌಗೋ ಳಿಕ ಸ್ವರೂಪ ಮತ್ತು ವಾಹನ ಸಂಚಾರದ ದಟ್ಟಣೆಗೆ ಅನುಗುಣವಾಗಿ 2 ಪಥದ ರಾಷ್ಟ್ರೀಯ ಹೆದ್ದಾರಿ ಸಾಕಾಗುತ್ತದೆ. ಈಗ ಇರುವ 22 ಅಡಿಯ ಹೆದ್ದಾರಿಯ ಎರಡು ಬದಿಯಲ್ಲಿ ಇರುವ ಖಾಲಿ ಜಾಗ ತಲಾ 2 ಅಡಿಗಳನ್ನು ಸೇರಿಸಿ ಅಂದಾಜು 30 ಅಡಿ ಅಗಲದ ಹೆದ್ದಾರಿ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಹಾಗೆಯೇ ಎಲ್ಲಾ ತಿರುವುಗಳಲ್ಲಿ ಸುರಕ್ಷಿತ ಸಂಚಾರಕ್ಕಾಗಿ ಅಗತ್ಯಕ್ಕನುಗುಣವಾಗಿ ಅಗ ಲೀಕರಣ ಮಾಡುವುದಕ್ಕೂ ನಮ್ಮ ವಿರೋ ಧವಿಲ್ಲ. ಆದರೆ ಬಹುಪಥದ ರಾಷ್ಟ್ರೀಯ ಹೆದ್ದಾರಿಯ ಅಗತ್ಯತೆ ಕೊಡಗು ಜಿಲ್ಲೆಗೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ವೇದಿಕೆಯ ಪ್ರಮುಖರಾದ ಚೆಪ್ಪುಡಿರ ಶೆರಿಸುಬ್ಬಯ್ಯ ಮಾತನಾಡಿ, ಜಿಲ್ಲೆಯ ಮೂಲಕ ಹಲವು ಬಹುಪಥ ಹೆದ್ದಾರಿ, ರೈಲ್ವೆ ಮಾರ್ಗವನ್ನು ನೆರೆಯ ರಾಜ್ಯ ಹಾಗೂ ಜಿಲ್ಲೆಗಳೊಂದಿಗೆ ಜೋಡಿಸುವುದರಿಂದ ಜಿಲ್ಲೆಯ ಜನರ ಅಭಿವೃದ್ಧಿಯಾಗುತ್ತದೆ ಎನ್ನುವುದು ತಪ್ಪು ತಿಳುವಳಿಕೆ. ಅದರ ಬದಲು ಗ್ರಾಮೀಣ ರಸ್ತೆಗಳನ್ನು ಅಬಿವೃದ್ಧಿ ಪಡಿಸಿ ಮೂಲಭೂತ ಸೌಕರ್ಯ ಒದಗಿ ಸುವುದು ಸರಕಾರದ ಗುರಿಯಾಗಬೇಕು. ಜಿಲ್ಲೆಯ ಮೂಲಕ ಹೈಟೆನ್ಷನ್ ವಿದ್ಯುತ್ ಯೋಜನೆÀ ರೂಪಿಸುವ ಸಂಧರ್ಬ ಜಿಲ್ಲೆಗೆ 24 ಗಂಟೆ ವಿದ್ಯುತ್ ಅಲ್ಲದೆ ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಹೇಳಿ ದ್ದರು. ಆದರೆ ಜಿಲ್ಲೆಗೆ 1 ಬಲ್ಬ್‍ಗೆ ವಿದ್ಯುತ್‍ನ್ನೂ ಸಹ ಈ ಯೋಜನೆಯಿಂದ ನೀಡಲಾಗಿಲ್ಲ. ಅದೇ ರೀತಿ ಜಿಲ್ಲೆಗ ಮಾರಕವಾಗುವ ರೈಲ್ವೆ ಹಾಗೂ ಬಹುಪಥದ ಹೆದ್ದಾರಿಯಿಂದ ಲಾಭ ಕ್ಕಿಂತ ನಷ್ಟದ ಪ್ರಮಾಣವೇ ಆಧಿಕವಾಗಲಿದೆ. ಇಂತಹ ಯೋಜನೆಗಳಿಗೆ ಸಾವಿರಾರು ಕೋಟಿ ವ್ಯಯಿಸುವ ಸರಕಾರ ಮಾನವ ಕಾಡಾನೆ ಸಂಘರ್ಷಕ್ಕೆ ಅರಣ್ಯದ ಸುತ್ತಲೂ ಶಾಶ್ವತ ವಾದ ತಡೆ ಯೋಜನೆ ರೂಪಿಸುವುದು, ಪಾಳು ಬಿಟ್ಟಿರುವ ಭತ್ತದ ಗದ್ದೆಗಳ ಪುನಶ್ಚೇ ತನಕ್ಕೆ ಪ್ರೋತ್ಸಾಹಧನ ನೀಡುವುದು, ಜಿಲ್ಲೆ ಯಲ್ಲಿ ವೈಜ್ಞಾನಿಕ ಕೃಷಿ ಹಾಗೂ ತೋಟಗಾರಿ ಕೆಗೆ ಉತ್ತೇಜನ ನೀಡುವ ಮೂಲಕ ಕೃಷಿ ಪ್ರಧಾನ ಜಿಲ್ಲೆಗೆ ಪ್ರಾಶಸ್ತ್ಯ ನೀಡಬೇಕು ಎಂದು ಅಭಿ ಪ್ರಾಯಪಟ್ಟರು. ಈ ಸಂದರ್ಭ ವೇದಿಕೆಯ ಶಾನ್ ಬೋಪಯ್ಯ ಹಾಜರಿದ್ದರು.

Translate »