ರಂಜಾನ್ ಪ್ರಯುಕ್ತ ಮಧ್ಯರಾತ್ರಿವರೆಗೂ ಭರ್ಜರಿ ವ್ಯಾಪಾರ
ಮೈಸೂರು

ರಂಜಾನ್ ಪ್ರಯುಕ್ತ ಮಧ್ಯರಾತ್ರಿವರೆಗೂ ಭರ್ಜರಿ ವ್ಯಾಪಾರ

June 7, 2019

ಮೈಸೂರು: ರಂಜಾನ್ ಪ್ರಯುಕ್ತ ಮಂಡಿಮೊಹಲ್ಲಾ ಮತ್ತು ದೇವರಾಜ ಅರಸು ರಸ್ತೆಯ ಬಹುತೇಕ ಅಂಗಡಿಗಳು ಮಧ್ಯ ರಾತ್ರಿವರೆಗೂ ತೆರೆದು ವಹಿವಾಟು ನಡೆಸಿದವು.

ನಗರದ ಮಂಡಿ ಮೊಹಲ್ಲಾದ ಮೀನಾ ಬಜಾರ್ ಮತ್ತಿತರೆ ಕಡೆಗಳಲ್ಲಿ ಮಧ್ಯರಾತ್ರಿ ವರೆಗೂ ಅಂಗಡಿಗಳನ್ನು ತೆರೆದು ಬಟ್ಟೆ, ಡ್ರೈಫ್ರೂಟ್ಸ್ ಮತ್ತಿತರೆ ವಸ್ತುಗಳ ಭರ್ಜರಿ ವ್ಯಾಪಾರ ನಡೆ ಯಿತು. ಹಾಗೆಯೇ ಅರಸು ರಸ್ತೆಯಲ್ಲೂ ಕೆಲವು ಅಂಗಡಿಗಳು ತೆರೆದು ವಹಿವಾಟು ನಡೆಸಿದವು.

ಹಣ್ಣುಗಳ ಭರ್ಜರಿ ಮಾರಾಟ: ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ವೇಳೆ ಬೇಕಾದ ಶಾವಿಗೆ, ಖರ್ಜೂರ, ಗೋಡಂಬಿ, ಬಾದಾಮಿ, ಒಣದ್ರಾಕ್ಷಿ ಮತ್ತಿತರ ಡ್ರೈಫ್ರೂಟ್ಸ್ ಹಾಗೂ ಬಟ್ಟೆಗಳ ಖರೀದಿಯು ಭರ್ಜರಿಯಾಗಿ ನಡೆ ದಿದೆ. ಮಧ್ಯರಾತ್ರಿವರೆಗೂ ಅರಸು ರಸ್ತೆಯಲ್ಲಿನ ಅಂಗಡಿಗಳು ತೆರೆದಿದ್ದವು ಎಂಬುದಕ್ಕೆ ದೇವ ರಾಜ ಠಾಣೆ ಇನ್ಸ್‍ಪೆಕ್ಟರ್ ಶ್ರೀನಿವಾಸ್ ಪ್ರತಿ ಕ್ರಿಯಿಸಿ, ನಾವು ಯಾವ ಅಂಗಡಿಗಳಿಗೂ ಮಧ್ಯ ರಾತ್ರಿವರೆಗೆ ತೆರೆಯಲು ಅವಕಾಶ ನೀಡಿಲ್ಲ. ಸೋಮವಾರ ಮತ್ತು ಮಂಗಳವಾರ ರಾತ್ರಿ ಗಸ್ತು ಹೋದಾಗ ಕೆಲವು ಅಂಗಡಿಗಳು ತೆರೆದಿದ್ದು, ಅವುಗಳನ್ನು ಬಂದ್ ಮಾಡಿಸಿದೆವು ಎಂದರು.

ಈ ಕುರಿತು ಮಂಡಿ ಠಾಣೆ ಇನ್ಸ್‍ಪೆಕ್ಟರ್ ಅರುಣ್‍ಕುಮಾರ್ ಪ್ರತಿಕ್ರಿಯಿಸಿ, ಪ್ರತಿ ವರ್ಷ ದಂತೆ ಈ ವರ್ಷವು ರಂಜಾನ್ ಪ್ರಯುಕ್ತ ಮಧ್ಯರಾತ್ರಿವರೆಗೂ ಅಂಗಡಿ ತೆರೆಯಲು ಅವಕಾಶ ನೀಡಬೇಕೆಂದು ನಗರ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದ್ದರು. ಹಾಗಾಗಿ ಅವಕಾಶ ನೀಡಲಾಗಿತ್ತು ಎಂದರು.

Translate »