ಕೈವಲ್ಯ ಸಾಹಿತ್ಯದಿಂದ ಜೀವನದ ಗುರಿ ಸಾಧನೆಗೆ ಮಾರ್ಗದರ್ಶನ
ಚಾಮರಾಜನಗರ

ಕೈವಲ್ಯ ಸಾಹಿತ್ಯದಿಂದ ಜೀವನದ ಗುರಿ ಸಾಧನೆಗೆ ಮಾರ್ಗದರ್ಶನ

April 30, 2019

ಬಿಜಾಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯ
ಗುಂಡ್ಲುಪೇಟೆ: ಕೈವಲ್ಯ ಸಾಹಿತ್ಯ ಎಂಬುದು ಬಹಳ ವಿಸ್ತಾರವಾಗಿದ್ದು, ಜೀವನದ ಗುರಿ ತಲುಪುವ ಬಗ್ಗೆ ಮಾರ್ಗದರ್ಶನ ನೀಡುತ್ತದೆ ಎಂದು ಬಿಜಾಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಪಡಗೂರು ಅಡವಿ ಮಠದ ಶ್ರೀಮದ್ದಾನೇ ಶ್ವರ ಮಹಾಮನೆಯಲ್ಲಿ ಮೈಸೂರು-ಚಾಮರಾಜನಗರ ಜಿಲ್ಲಾ ಮಠಾಧೀಶರ ಗೋಷ್ಠಿ ವತಿಯಿಂದ ಆಯೋಜಿಸಿದ್ದ ಕೈವಲ್ಯ ಸಾಹಿತ್ಯ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಚ್ಛ ಸುಂದರ ಜೀವನ ರೂಪಿಸಿ ಕೊಳ್ಳಲು ನಮ್ಮ ಬದುಕಿನ ಗುರಿ ನಿರ್ಧರಿಸಲು ಹಾಗೂ ಸಾಧಿಸುವ ಬಗ್ಗೆ ಕೈವಲ್ಯ ಸಾಹಿತ್ಯ ಮಾರ್ಗದರ್ಶನ ನೀಡುತ್ತದೆ. ನಾಡಿನಾದ್ಯಂತ ಮಹಾನ್ ಸಾಧಕರು ಇದನ್ನು ಸಾಧಿಸುವ ಮೂಲಕ ಸಮಾಜಕ್ಕೆ ಸ್ಫೂರ್ತಿದಾಯಕರಾಗಿದ್ದಾರೆ. ಇದರ ದಿಗ್ದರ್ಶನ ಮಾಡಿಸುವ ಉದ್ದೇಶದಿಂದ 2 ದಿನಗಳ ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದರು.

ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ಕಳೆದ 40 ವರ್ಷಗಳಿಂದ ನಡೆ ಯುತ್ತಿರುವ ವಿಚಾರಗೋಷ್ಠಿಯು ಸಮಾಜದ ಸಮಾನತೆಗೆ ಹಲವಾರು ಚಟುವಟಿಕೆಗಳನ್ನು ನಡೆಸುತ್ತಿದೆ. ಎಲ್ಲಾ ಮಠಾ ಧೀಶರನ್ನು ಸೇರಿಸಿ ಕಾಲಕಾಲಕ್ಕೆ ವಿಚಾರ ಸಂಕಿರಣಗಳ ಮೂಲಕ ವಚನ ಸಾಹಿತ್ಯದ ಸಂಗ್ರಹ ಕೃತಿರಚನೆ ಮಾಡುತ್ತಾ ಮೌಲ್ಯವನ್ನು ಹೆಚ್ಚಿಸುತ್ತಿದೆ. ಚಾಮರಾಜನಗರ ಜಿಲ್ಲೆಯವ ರಾದ ನಿಜಗುಣ ಶಿವಯೋಗಿಗಳು ಹಾಗೂ ಮುಪ್ಪಿನ ಷಡಕ್ಷರಿ ಕೈವಲ್ಯ ಸಾಹಿತ್ಯದ ಹರಿಕಾರರಾಗಿದ್ದು, ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಗೋಷ್ಠಿ ವತಿಯಿಂದ ವಿಚಾರ ಸಂಕಿರಣ ಆಯೋಜಿಸಿದೆ. ಇದರ ಸದ್ಬಳಕೆಯಾಗಬೇಕು ಎಂದರು.

ಪಡಗೂರು ಅಡವಿ ಮಠಾಧ್ಯಕ್ಷ ಶ್ರೀಶಿವಲಿಂಗೇಂದ್ರ ಸ್ವಾಮೀಜಿ ಮಾತನಾಡಿ, ವಿಚಾರ ಸಂಕಿರ್ಣ ಆಧ್ಯಾತ್ಮದ ಬಗ್ಗೆ ಆಸಕ್ತರಿಗೆ ಹೆಚ್ಚಿನ ಅರಿವು ಮೂಡಿಸಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನಕಪುರ ದೇಗುಲ ಮಠಾಧೀಶರಾದ ಶ್ರೀ ಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ ಮಾತನಾಡಿ, ಮಠಾಧೀಶರ ಗೋಷ್ಠಿಯು ಪ್ರತಿ ತಿಂಗಳೂ ಒಂದೊಂದು ಮಠದಲ್ಲಿ ವಿಚಾರಗೋಷ್ಠಿ ಆಯೋಜಿಸಿ ಎಲ್ಲೆಡೆ ಶರಣ ಸಂದೇಶ ವಿಸ್ತರಿಸುವಂತೆ ಮಾಡಿದೆ. ಸಮಾಜದ ಕಡುಬಡವರ ಕುಟುಂಬದ ಮಕ್ಕಳಿಗೆ ಸಾಮೂಹಿಕ ವಿವಾಹ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಪ್ರತಿಭಾವಂತರಿಗೆ ಪುರಸ್ಕಾರ ಮುಂತಾದ ಸಮಾಜಮುಖಿ ಕಾರ್ಯ ಮಾಡುತ್ತಿದೆ ಎಂದರು. ಈ ಸಂದರ್ಭದಲ್ಲಿ ಗೋಷ್ಠಿಯ ಕಾರ್ಯದರ್ಶಿ ಶ್ರೀಕಂಠಸ್ವಾಮಿಗಳು, ವಿವಿಧ ಮಠಾಧೀ ಶರು, ಕಾಂಗ್ರೆಸ್ ಮುಖಂಡ ಹೆಚ್.ಎಂ.ಗಣೇಶ್‍ಪ್ರಸಾದ್, ಚಾಮುಲ್ ನಿರ್ದೇಶಕ ಹೆಚ್.ಎಸ್.ನಂಜುಂಡ ಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Translate »