ತಮಿಳುನಾಡಿನ ನೀಲಗಿರಿಯ ಕೆ.ಪಾಲಾಡದಲ್ಲಿಅದ್ಧೂರಿ ಬಸವ, ಶ್ರೀಬಸವರಾಜ ಸ್ವಾಮೀಜಿ ಜಯಂತಿ ಆಚರಣೆ
ಚಾಮರಾಜನಗರ

ತಮಿಳುನಾಡಿನ ನೀಲಗಿರಿಯ ಕೆ.ಪಾಲಾಡದಲ್ಲಿಅದ್ಧೂರಿ ಬಸವ, ಶ್ರೀಬಸವರಾಜ ಸ್ವಾಮೀಜಿ ಜಯಂತಿ ಆಚರಣೆ

April 30, 2019

ಚಾಮರಾಜನಗರ: ತಮಿಳುನಾಡಿನ ನೀಲಗಿರಿಯ ಕೆ.ಪಾಲಾಡದ ಶ್ರೀಗುರುಬಸವ ಶಾಂತಿನಿಕೇತನ ಮಠದಲ್ಲಿ ಶ್ರೀ ಬಸವರಾಜ ಮಹಾಸ್ವಾಮೀಜಿ ಅವರ 100ನೇ ವರ್ಷದ ಜಯಂತಿ ಮಹೋತ್ಸವ ಹಾಗೂ ಬಸವ ಜಯಂತಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಇದೇ ವೇಳೆ ಬಸವಾದಿ ಶರಣರ ತತ್ವ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿದ್ದ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನಕಪುರದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ವಹಿಸಿದ್ದರು. ಮರಿಯಾಲದ ಶ್ರೀ ಇಮ್ಮಡಿ ಮುರುಘ ರಾಜೇಂದ್ರ ಸ್ವಾಮೀಜಿ, ಚಾಮರಾಜನಗರ ವಿರಕ್ತ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ರಾವಂದೂರು ಮಠದ ಶ್ರೀ ಲೋಕಪತಿ ಸ್ವಾಮೀಜಿ, ಹಂಗಳ ಮಠಾಧ್ಯಕ್ಷ ಜಡೇ ಸ್ವಾಮೀಜಿ, ಮುಡುಕನಪುರ ಮಠದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಗೌಡಹಳ್ಳಿ ಮಠದ ಶ್ರೀ ಮರಿತೋಂಟದಾರ್ಯ ಸ್ವಾಮೀಜಿ, ಕೊಯ ಮತ್ತೂರಿನ ಶ್ರೀ ರಮಾನಂದ ಸ್ವಾಮೀಜಿ, ರಾಜು ಸ್ವಾಮೀಜಿ, ಕಾವೇರಿ ಡ್ಯಾಂನ ಶ್ರೀ ಗುರು ಲಿಂಗದೇವರು, ಸಿದ್ಧಗಿರಿ ಯಡ ಪಳ್ಳಿಯ ಶ್ರೀ ನಂದ ಸ್ವಾಮೀಜಿ ಸೇರಿದಂತೆ ಇನ್ನಿತರ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ, ಇಷ್ಟಲಿಂಗ ಪೂಜೆ, ಶಿವಭಜನೆ ನಡೆಯಿತು. ಶ್ರೀ ಬಸವೇಶ್ವರ ಹಾಗೂ ಶ್ರೀ ಬಸವರಾಜ ಮಹಾಸ್ವಾಮೀಜಿ ಅವರ ಭಾವಚಿತ್ರವನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡ ಲಾಯಿತು. ಮಂಗಳವಾದ್ಯ, ವೀರಗಾಸೆ ಸೇರಿದಂತೆ ಇನ್ನಿತರ ಕಲಾತಂಡಗಳು ಪಾಲ್ಗೊಂಡು ಮೆರವಣಿಗೆಗೆ ಶೋಭೆ ತಂದವು.

Translate »