ಚಾಮರಾಜನಗರದಲ್ಲಿ ಮಳೆಗಾಗಿ ಪರ್ಜನ್ಯ ವಿಶೇಷ ಪೂಜೆ
ಚಾಮರಾಜನಗರ

ಚಾಮರಾಜನಗರದಲ್ಲಿ ಮಳೆಗಾಗಿ ಪರ್ಜನ್ಯ ವಿಶೇಷ ಪೂಜೆ

April 30, 2019

ಪರಿಸರ ಸಂರಕ್ಷಣೆ, ಮರಗಿಡಗಳ ಪೋಷಣೆಯಿಂದ ಸಕಾಲಕ್ಕೆ ಮಳೆ
ಚಾಮರಾಜನಗರ: ಪರಿಸರ ಸಂರಕ್ಷಿಸಿ ಮರ ಗಿಡಗಳನ್ನು ಪೋಷಿಸಿ ಬೆಳೆಸಿದಾಗ ಮಾತ್ರ ಸಕಾಲಕ್ಕೆ ಮಳೆ ಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ನಮ್ಮ ಸುತ್ತಮತ್ತಲಿನ ಪರಿಸರ ಸಂರಕ್ಷಿಸ ಬೇಕು ಎಂದು ಜಿಪಂ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮನವಿ ಮಾಡಿದರು.

ನಗರದ ಜನಾರ್ಧನ ಪ್ರತಿಷ್ಠಾನದ ವತಿ ಯಿಂದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ವರುಣನ ಕೃಪೆಗಾಗಿ ಶಿವನಿಗೆ ಏರ್ಪಡಿಸಿದ್ದ ಪರ್ಜನ್ಯ ವಿಶೇಷ ಪೂಜೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯ ಮಧ್ಯ ಭಾಗದಲ್ಲಿ ಮಳೆಯಾ ಗುತ್ತಿಲ್ಲ. ವೈe್ಞÁನಿಕವಾಗಿ ನೋಡಿದಾಗ ಮರ ಗಿಡಗಳ ಸಂಖ್ಯೆ ಕಡಿಮೆಯಾಗಿ, ಪರಿಸರ ಸಂರಕ್ಷಣೆಗೆ ನಿರ್ಲಕ್ಷ್ಯ ಭಾವನೆ ತೋರಿz್ದÉೀ ಕಾರಣವಾಗಿದೆ. ತಕ್ಷಣ ಪ್ರತಿಯೊಬ್ಬರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಿಸಿ, ಮರ ಗಿಡಗಳನ್ನು ಪೆÇೀಷಿಸಿ, ಬೆಳೆಸಿದಾಗ ಸಕಾಲಕ್ಕೆ ಮಳೆಯಾಗಿ ಭೂಮಿ ಸಮೃದ್ಧಿಯಾಗುತ್ತದೆ ಎಂದರು. ಜನಾರ್ಧನ ಪ್ರತಿಷ್ಠಾನದ ವತಿ ಯಿಂದ ಶಿವನನ್ನು ಪೂಜೆಯ ಮೂಲಕ ಸಂತೃಪ್ತಿ ಗೊಳಿಸಿ ಮಳೆಗಾಗಿ ವಿಶೇಷ ಪೂಜೆ ಏರ್ಪಡಿಸಿರುವುದು ಶ್ಲಾಘನೀಯ. ದೈವ ಕೃಪೆ ಯೊಂದಿಗೆ ಉತ್ತಮ ಮಳೆಯಾಗಿ ಜಿಲ್ಲೆ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು.

ಪ್ರತಿಷ್ಠಾನದ ಅರ್ಚಕ ಅನಂತ ಪ್ರಸಾದ್ ಮಾತನಾಡಿ, ಮಳೆಗಾಗಿ ಪ್ರತಿವರ್ಷ ಗಂಗೆಯನ್ನು ಹೊತ್ತ ಶಿವನನ್ನು ವಿಶೇಷ ವಾಗಿ ಪೂಜಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಶಿವನ ಮುಖ ಕವಚ ಇಟ್ಟು, ವಿವಿಧ ಅಭಿಷೇಕಗಳನ್ನು ಮಾಡಿ, ಪರ್ಜನ್ಯ ಪೂಜೆ ಸಲ್ಲಿಸಲಾಗಿದೆ ಎಂದರು.

ಹಿಂದಿನ ಕಾಲದಲ್ಲಿ ರಾಜ ಮಹಾ ರಾಜರು ಮಳೆ ಕೈ ಕೊಟ್ಟಾಗ ಇದೇ ಪರ್ಜನ್ಯ ಪೂಜೆ ಸಲ್ಲಿಸಿ, ಶಿವನನ್ನು ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಈಗ ನಾವು ಪ್ರತಿವರ್ಷ ಈ ಕಾರ್ಯವನ್ನು ಮಾಡಿಕೊಂಡು ಬರುತ್ತಿ z್ದÉೀವೆ. ಗಂಗಾಧರೇಶ್ವರನ ಕೃಪೆಯಿಂದ ಪ್ರತಿ ಬಾರಿ ಪರ್ಜನ್ಯ ಪೂಜೆ ಸಲ್ಲಿಸಿದ ಒಂದು ವಾರದೊಳಗೆ ಮಳೆ ಬರುತ್ತಿದೆ. ಈ ಬಾರಿಯು ಸಮೃದ್ಧ ಮಳೆಯಾಗಿ, ಜಿಲ್ಲೆಯ ರೈತಾಪಿ ವರ್ಗ ಸುಖ ಶಾಂತಿಯಿಂದ ಬಾಳಲಿ ಎಂಬುದೇ ನಮ್ಮ ಹಾರೈಕೆ ಎಂದರು.

ಈ ಸಂದರ್ಭದಲ್ಲಿ ರಾಮಶೇಷ ಸಂಸ್ಕøತ ಪಾಠಶಾಲೆಯ ಪ್ರದೀಪ್‍ಕುಮಾರ್ ದೀಕ್ಷಿತ್, ಸಮಾಜ ಸೇವಕ ವೆಂಕಟನಾಗಪ್ಪ ಶೆಟ್ಟಿ, ಬಾಬು, ಮುಖಂಡರಾದ ಜಿ.ಎಂ. ಗಾಡ್ಕರ್, ವಕೀಲ ಚಿನ್ನಸ್ವಾಮಿ, ರಂಗಸ್ವಾಮಿ, ನಂಜುಂಡಸ್ವಾಮಿ ಇತರರು ಇದ್ದರು.

Translate »