ಹೊಳಲಿನಲ್ಲಿ ಹನುಮ ಜಯಂತಿ
ಮಂಡ್ಯ

ಹೊಳಲಿನಲ್ಲಿ ಹನುಮ ಜಯಂತಿ

December 11, 2019

ಮಂಡ್ಯ, ಡಿ.10(ನಾಗಯ್ಯ)- ತಾಲೂಕಿನ ಹೊಳಲು ಗ್ರಾಮದ ಶ್ರೀಆಂಜನೇಯಸ್ವಾಮಿ ಸೇವಾ ಸಮಿತಿ ವತಿಯಿಂದ 17ನೇ ವರ್ಷದ ಹನುಮ ಜಯಂತಿ ಪ್ರಯಕ್ತ ದೇವರಿಗೆ ವಿಶೇಷ ಕಾರ್ಯಕ್ರಮ ನಡೆದವು.

ಮುಂಜಾನೆಯಿಂದಲೇ ದೇವರಿಗೆ ಹೋಮ, ಹವನ, ಶ್ರೀರಾಮ ತಾರಕ ಹೋಮ, ಅಭಿಷೇಕ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಲಾ ಯಿತು. ಸಂಜೆ 6.30ಕ್ಕೆ ಆಂಜನೇಯ ಉತ್ಸವ ಮೂರ್ತಿಯನ್ನು ವಿಶೇಷ ಅಲಂಕಾರ ಮಾಡಿ, ಗ್ರಾಮದ ವಿವಿಧ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ, ತಮಟೆ, ನಗಾರಿ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಶ್ರೀಆಂಜನೇಯ ಸೇವಾ ಸಮಿತಿ ಪದಾಧಿಕಾರಿಗಳಾದ ಎಚ್.ಎಲ್.ಶಂಕರ್, ಪಪ್ಪಿ, ನಂದೀಶ್, ಡೈರಿ ಕುಮಾರ್, ಪ್ರದೀಪ್, ಆನಂದ್, ಸತೀಶ್, ಚೇತನ್, ನವೀನ್, ನಿಂಗರಾಜು, ಉಮೇಶ್, ಭೆರಪ್ಪ, ಕೆ.ಪಿ. ಕುಮಾರ್, ಚಲುವ ಸೇರಿದಂತೆ ಗ್ರಾಮಸ್ಥರು ಉತ್ಸವವನ್ನು ಯಶಸ್ವಿಗೊಳಿಸಿದರು.

Translate »