ಸುಳವಾಡಿ ವಿಷ ಪ್ರಸಾದ ಸೇವನೆ ಪ್ರಕರಣ : ಸಂತ್ರಸ್ತರ ಸುರಕ್ಷತಾ ಕ್ರಮಗಳಿಗೆ ಜಿಲ್ಲಾಡಳಿತ ವ್ಯವಸ್ಥೆ
ಚಾಮರಾಜನಗರ

ಸುಳವಾಡಿ ವಿಷ ಪ್ರಸಾದ ಸೇವನೆ ಪ್ರಕರಣ : ಸಂತ್ರಸ್ತರ ಸುರಕ್ಷತಾ ಕ್ರಮಗಳಿಗೆ ಜಿಲ್ಲಾಡಳಿತ ವ್ಯವಸ್ಥೆ

December 22, 2018

ಚಾಮರಾಜನಗರ: ಹನೂರು ತಾಲೂಕು ಸುಳವಾಡಿ ಗ್ರಾಮದ ಕಿಚ್‍ಗುತ್ ಮಾರಮ್ಮ ದೇವಾಲಯದ ಪ್ರಸಾದ ಸೇವ ನೆಯಿಂದ ಅಸ್ವಸ್ಥಗೊಂಡ ಬಳಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗುತ್ತಿರುವವರಿಗೆ ಮುಂದೆಯು ಸೂಕ್ತ ಔಷೋಧೋಪಚಾರ ಹಾಗೂ ಚಿಕಿ ತೆಗ್ಸೆ ನಿಗಾವಹಿಸಲು ಜಿಲ್ಲಾಡಳಿತ ಹಲವು ಸುರಕ್ಷತಾ ಕ್ರಮಗಳಿಗೆ ಮುಂದಾಗಿದೆ.

ಪ್ರಕರಣದಲ್ಲಿ ಅಸ್ವಸ್ಥರಾಗಿರುವ ಎಲ್ಲಾ ಕುಟುಂಬ ವರ್ಗದವರಿಗೆ ದೈನಂದಿನ ಬದು ಕಿಗೆ ಯಾವುದೇ ತೊಂದರೆಯಾಗದಂತೆ ನಿರ್ವ ಹಿಸಲು ಜಿಲ್ಲಾಧಿಕಾರಿಯವರು ಪಡಿತರ ಪದಾರ್ಥಗಳನ್ನು ಸಂತ್ರಸ್ತ ಕುಟುಂಬದವರ ಗ್ರಾಮಗಳಿಗೆ ತಲುಪಿಸುವ ವ್ಯವಸ್ಥೆ ಕೈಗೊಂಡಿ ದ್ದಾರೆ. ಪ್ರಸಾದ ಸೇವನೆಯಿಂದ ಅಸ್ವಸ್ಥರಾಗಿದ್ದ ವರನ್ನು ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಈ ಪೈಕಿ 53 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದು, ಮನೆಗೆ ಮರ ಳಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾದವ ರನ್ನು ಸರ್ಕಾರಿ ವಾಹನಗಳಲ್ಲಿಯೇ ವೈದ್ಯ ಸಿಬ್ಬಂದಿಯೊಂದಿಗೆ ಅವರ ಗ್ರಾಮಗಳಿಗೆ ಸುರ ಕ್ಷಿತವಾಗಿ ಕರೆದೊಯ್ಯಲಾಗುತ್ತಿದೆ.

24*7 ಚಿಕಿತ್ಸೆ ಲಭ್ಯತೆಗೆ ಸೂಚನೆ: ಮಾರ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವೆಂಟೀಲೇಟರ್ ಹೊಂದಿ ರುವ ಎರಡು ಆಂಬುಲೆನ್ಸ್(108) ಸನ್ನದ್ಧ ವಾಗಿರಿಸಲಾಗುತ್ತಿದೆ. ಕೊಳ್ಳೇಗಾಲ ತಾಲೂ ಕಿನ ಎಲ್ಲಾ ಆಸ್ಪತ್ರೆಗಳಿಗೆ ವೈದ್ಯಕೀಯ ಕಾಲೇ ಜಿನ 8 ಮಂದಿ ವೈದ್ಯರನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಮ ನ್ವಯದೊಂದಿಗೆ ನಿಯೋಜಿಸಲಾಗುತ್ತಿದೆ. ಮಾರ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಇಬ್ಬರು ವೈದ್ಯಾಧಿಕಾರಿಗಳ ತಂಡ ವನ್ನು 24×7 ಅವಧಿಯಲ್ಲಿಯೂ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಅಲ್ಲದೆ ತಾಲೂಕು ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಹಾಜರಿದ್ದು 24×7 ಅವಧಿ ಯಲ್ಲಿಯೂ ಚಿಕಿತ್ಸೆ ಲಭ್ಯವಾಗುವಂತೆ ನೋಡಿ ಕೊಳ್ಳಬೇಕು ಎಂದು ನಿರ್ದೇಶನ ನೀಡ ಲಾಗಿದೆ. ನಿಯೋಜನೆಗೊಂಡ ವೈದ್ಯಾಧಿ ಕಾರಿ, ಸಿಬ್ಬಂದಿಗೆ ಪಾಳಿಯ (ಶಿಫ್ಟ್) ಆಧಾ ರದ ಮೇಲೆ ಕರ್ತವ್ಯ ನಿರ್ವಹಿಸಬೇಕು. ಕೊಳ್ಳೇಗಾಲ ತಾಲೂಕು ಸಾರ್ವಜನಿಕ ಆಸ್ಪ ತ್ರೆಯಲ್ಲಿ ಸಂತ್ರಸ್ತರಿಗೆ ಪ್ರತ್ಯೇಕವಾಗಿ ಹಾಸಿಗೆ ವ್ಯವಸ್ಥೆ ಮತ್ತು ಔಷಧಿಗಳನ್ನು ಕಾಯ್ದಿರಿಸಿ ಕೊಂಡು ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.

ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವ ಸಂತ್ರಸ್ತರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಸಮಾಲೋಚನಾ ತಂಡಗಳು ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಮಾರ್ಗದರ್ಶನ ಮಾಡಲಿದ್ದಾರೆ. ತಾಲೂಕು ನೋಡೆಲ್ ಅಧಿಕಾರಿಗಳು ಸಮಾಲೋಚನಾ ತಂಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾ ಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಎಲ್ಲವನ್ನು ನೋಡಿಕೊಳ್ಳಲಿದ್ದಾರೆ.
ಈಗಾಗಲೇ ಮೈಸೂರಿನ ಆಸ್ಪತ್ರೆಗಳಿಗೆ ಸಂತ್ರಸ್ತರ ಆರೋಗ್ಯ ಹಾಗೂ ಇತರೆ ನೆರ ವಿಗೆ ಜಿಲ್ಲಾಧಿಕಾರಿಗಳಿಂದ ನಿಯೋಜನೆ ಗೊಂಡಿರುವ ಜಿಲ್ಲಾಮಟ್ಟದ 12 ನೋಡೆಲ್ ಅಧಿಕಾರಿಗಳು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರೊಂದಿಗೆ ನಿರಂತರ ಸಂಪ ರ್ಕದಲ್ಲಿದ್ದು, ಅವರ ಯೋಗಕ್ಷೇಮ ಬಗ್ಗೆ ಕಾಳಜಿ ವಹಿಸಿ ವರದಿ ಸಲ್ಲಿಸಲಿದ್ದಾರೆ.

ಸಂತ್ರಸ್ತರಿಗೆ ಅವರ ಗ್ರಾಮಗಳಲ್ಲಿ ಹಾಗೂ ಮೈಸೂರಿನ ಆಸ್ಪತ್ರೆಗಳಲ್ಲಿ ಸಂತ್ರಸ್ತರು ಯಾವುದೇ ಖಿನ್ನತೆ ಹಾಗೂ ಆತಂಕಕ್ಕೆ ಒಳಗಾಗದಂತೆ ಮಾನಸಿಕ ತಜ್ಞರಿಂದ ಅಪ್ತ ಸಮಾಲೋಚನೆ ಸಹ ನಡೆಸಲಾಗುತ್ತಿದೆ. ಸಂತ್ರಸ್ತರು ಯಾವುದೇ ಅತಂ ಕಕ್ಕೆ ಒಳಗಾಗಬೇಕಿಲ್ಲ. ಜಿಲ್ಲಾಡಳಿತ ಸಂತ್ರ ಸ್ತರ ಸಹಾಯಕ್ಕೆ ಬದ್ಧವಾಗಿದ್ದು, ನಿರಂತರ ಸಂಪರ್ಕದಲ್ಲಿರುತ್ತದೆ. ಅಗತ್ಯ ನೆರವಿಗೆ ಸದಾ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ಪ್ರಕರಣದ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.

ಆಹಾರ ಪದಾರ್ಥ ವಿತರಣೆ
ಪ್ರಸಾದ ಸೇವನೆ ಪ್ರಕರಣದಲ್ಲಿ ಮೃತಪಟ್ಟ ಎಲ್ಲಾ ಕುಟುಂಬಗಳಿಗೆ ಸರ್ಕಾರದ ವತಿಯಿಂದ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಮೃತಪಟ್ಟ ಕುಟುಂಬಗಳಿಗೆ 25 ಕೆ.ಜಿ. ಅಕ್ಕಿ, 5 ಕೆ.ಜಿ. ಬೇಳೆ, 3 ಕೆ.ಜಿ. ಸಕ್ಕರೆ, 2 ಲೀಟರ್ ಅಡುಗೆ ಎಣ್ಣೆ ಇತರೆ ಆಹಾರ ಪದಾರ್ಥಗಳನ್ನು ವಿತರಿಸಲಾಗಿದೆ. ಪ್ರಕರಣದಲ್ಲಿ ಆಸ್ವಸ್ಥರಾಗಿದ್ದ ಕುಟುಂ ಬಗಳಿಗೂ ಸಹ ಆಹಾರ ಪದಾರ್ಥಗಳನ್ನು ಅವರ ಗ್ರಾಮಗಳಿಗೆ ತಲುಪಿಸಲಾಗುತ್ತಿದೆ. ಜೊತೆಗೆ 3 ಕೆ.ಜಿ ರಾಗಿ ಸಹ ವಿತರಣೆ ಮಾಡಲಾಗುತ್ತಿದೆ.

ಮುಂಜಾಗ್ರತ ಕ್ರಮಕ್ಕೆ ಆದೇಶಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗಳಿಗೆ ಮರಳುತ್ತಿರುವವರಿಗೆ ಅಗತ್ಯ ಬೀಳಬಹುದಾದ ಸೂಕ್ತ ಔಷೋಧೋಪಚಾರ ಹಾಗೂ ಚಿಕಿತ್ಸೆ ನೀಡÀಲು ವೈದ್ಯರ ತಂಡ ಸನ್ನದ್ಧವಾಗಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಕೊಳ್ಳೇಗಾಲ, ಹನೂರು ತಾಲೂಕು ವ್ಯಾಪ್ತಿಯ ಮಾರ್ಟಳ್ಳಿ, ರಾಮಾಪುರ, ಮಲೆ ಮಹದೇಶ್ವರ ಬೆಟ್ಟ, ಕೌದಳ್ಳಿ, ಪೊನ್ನಾಚಿ, ಹನೂರು, ಲೊಕ್ಕನಹಳ್ಳಿ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿರುವ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆದೇಶಿಸಿದ್ದಾರೆ.

10 ಮಂದಿ ಆಸ್ಪತ್ರೆಯಿಂದ ಬಿಡುಗಡೆ
ಚಾಮರಾಜನಗರ, ಡಿ.21- ಹನೂರು ತಾಲೂಕಿನ ಸುಳವಾಡಿಯ ಕಿಚ್‍ಗುತ್ ಮಾರಮ್ಮನ ದೇವಾಲಯದ ಪ್ರಸಾದ ಸೇವನೆ ಪ್ರಕರಣದಲ್ಲಿ ಅಸ್ವಸ್ಥರಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಶುಕ್ರವಾರ 10 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಿಂದ ಬಿದರಹಳ್ಳಿ ಗ್ರಾಮದ ಮನೋಜ್(19), ವಿಶ್ವನಾಥ(27), ಕಾವೇರಿ ಆಸ್ಪತ್ರೆಯಿಂದ ರಾಜಮ್ಮ(40), ಗೋಪಾಲ್‍ಗೌಡ ಆಸ್ಪತ್ರೆಯಿಂದ ತಂಡಮೇಡು ಗ್ರಾಮದ ಸಾವಿತ್ರಿ(43), ಗೋವಿಂದನಾಯಕ(55), ಬರಗೂರು ಗ್ರಾಮದ ಚೈತ್ರ(37), ಸುಳವಾಡಿ ಗ್ರಾಮದ ರಾಮರ್ ಕೆ.(52) ಕೆ.ಆರ್.ಆಸ್ಪತ್ರೆಯಿಂದ ಮಹದೇಶ್ವರ ಬೆಟ್ಟದ ದುಂಡಮಾದಮ್ಮ(42), ಎಂ.ಜಿ.ದೊಡ್ಡಿ ಗ್ರಾಮದ ಕುಂಜಮ್ಮ(45) ಹಾಗೂ ಕೊಲಂಬಿಯ ಏಷಿಯಾ ಆಸ್ಪತ್ರೆ ಯಿಂದ ಬರಗೂರು ಗ್ರಾಮದ ರಾಣಿ(52) ಬಿಡುಗಡೆಯಾಗಿದ್ದಾರೆ.
ಇನ್ನು 41 ಮಂದಿ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.

ಅಸ್ವಸ್ಥ ಕುಟುಂಬಕ್ಕೂ ಪರಿಹಾರ ನೀಡಲು ಆಗ್ರಹಕೊಳ್ಳೇಗಾಲ, ಡಿ.21(ನಾಗೇಂದ್ರ)- ಸುಳವಾಡಿ ಮಾರಮ್ಮ ದೇಗುಲದಲ್ಲಿ ವಿಷ ಪ್ರಸಾದ ತಿಂದು ಅಸ್ವಸ್ಥರಾದ ಕುಟುಂಬದವರಿಗೂ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪಿ.ದತ್ತಾತ್ರೇಯ ಆಗ್ರಹಿಸಿದ್ದಾರೆ.

ಸರ್ಕಾರ ಸಾವಿಗೀಡಾದವರಿಗೆ ಪರಿಹಾರ ನೀಡಿ ಸುಮ್ಮನಾದರೆ ಸಾಲದು, ಈ ಪ್ರಕರಣ ದಲ್ಲಿ ತೀವ್ರವಾದ ನೋವು ಅನುಭವಿಸುತ್ತಿರುವವರು ಕಡು ಬಡವರು, ಕೂಲಿ ಮಾಡಿ ಜೀವನ ನಡೆಸುವವರು. ಹಾಗಾಗಿ, ಮಾನವೀಯತೆ ದೃಷ್ಠಿಯಿಂದ ಸರ್ಕಾರ ಅಸ್ವಸ್ಥರಾಗಿರು ವವರ ಕುಟುಂಬಕ್ಕೂ ಪರಿಹಾರ ನೀಡಿ ಮಾನವೀಯತೆ ಪ್ರದರ್ಶಿಸಬೇಕು ಎಂದು ತಿಳಿಸಿದರು. ನಾಗರಿಕ ಸಮಾಜ ತಲೆತಗ್ಗಿಸುವ ಹೇಯ ಕೃತ್ಯ ಇದಾಗಿದ್ದು, ನ್ಯಾಯಾಲಯ ಆರೋಪಿ ಗಳಿಗೆ ಮರಣ ದಂಡನೆ ಶಿಕ್ಷೆ ನೀಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಡಿಸ್‍ಚಾರ್ಜ್ ಆದ ಮಹಿಳೆ ಮತ್ತೆ ಆಸ್ಪತ್ರೆಗೆ ದಾಖಲು!
ಕೊಳ್ಳೇಗಾಲ: ಸುಳವಾಡಿ ಗ್ರಾಮ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡು ಮೈಸೂರಿನ ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿ.19ರಂದು ಡಿಸ್‍ಚಾರ್ಜ್ ಆಗಿದ್ದ ಮಹಿಳೆಯೊಬ್ಬರು ಮತ್ತೆ ಅಸ್ವಸ್ಥ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.ದೊರೆಸ್ವಾಮಿ ಮೇಡು ಗ್ರಾಮದ ಆರ್ವಿ ಅಸ್ವಸ್ಥಗೊಂಡು ಕೊಳ್ಳೇಗಾಲ ಉಪ ವಿಭಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಸಾದ ಸೇವನೆಯಿಂದ ಅಸ್ವಸ್ಥಗೊಂಡು ಡಿ.14ರಂದು ಆಸ್ಪತ್ರೆ ದಾಖಲಾಗಿದ್ದ ಅವರು ಒಂದು ವಾರಗಳ ಚಿಕಿತ್ಸೆ ಬಳಿಕ ವೈದ್ಯರು ಡಿಸ್‍ಚಾರ್ಜ್ ಮಾಡಿ ಮನೆಗೆ ಕಳುಹಿಸಲಾ ಗಿತ್ತು. ಬುಧವಾರ(ಡಿ.19) ಮತ್ತೆ ಅವರಿಗೆ ಹೊಟ್ಟೆ ಉರಿ ಕಾಣಿಸಿಕೊಂಡಿದೆ. ಕೂಡಲೇ, ಅವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಶುಕ್ರವಾರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಭೇಟಿ ನೀಡಿ ಆರ್ವಿ ಅವರ ಆರೋಗ್ಯ ವಿಚಾರಿಸಿದರು. ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಈ ವೇಳೆ ಸೂಚಿಸಿದರು.

Translate »